ಪ್ಯೊಂಗ್ಯಾಂಗ್: ಉತ್ತರ ಕೊರಿಯಾದಲ್ಲಿ ನಡೆದ ಮಿಲಿಟರಿ ಸಭೆಯಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಮಿಲಿಟರಿ ಕ್ರಿಯಾ ಯೋಜನೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ - ಉನ್ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ (ಡಬ್ಲ್ಯುಪಿಕೆ)ದ ಏಳನೇ ಕೇಂದ್ರ ಮಿಲಿಟರಿ ಆಯೋಗದ ಐದನೇ ಸಭೆಯ ಪ್ರಾಥಮಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಾಥಮಿಕ ಸಭೆಯಲ್ಲಿ, ಡಬ್ಲ್ಯುಪಿಕೆ ಕೇಂದ್ರ ಮಿಲಿಟರಿ ಆಯೋಗದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲಾಯಿತು. ದಕ್ಷಿಣ ಕೊರಿಯಾ ವಿರುದ್ಧದ ಮಿಲಿಟರಿ ಕ್ರಿಯಾ ಯೋಜನೆಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ವರದಿಗಳು ತಿಳಿಸಿವೆ.
ಒಂದು ವಾರದ ಹಿಂದೆ ದಕ್ಷಿಣ ಕೊರಿಯಾದ ವಿರುದ್ಧ ಸೈನ್ಯವು ಮಿಲಿಟರಿ ಕ್ರಿಯಾ ಯೋಜನೆಗಳನ್ನು ಘೋಷಿಸಿತ್ತು. ಕೊರಿಯನ್ ಪೀಪಲ್ಸ್ ಸೈನ್ಯದ ಜನರಲ್ ಸ್ಟಾಫ್ ಪ್ರಸ್ತಾಪಿಸಿದ ಕ್ರಿಯಾ ಯೋಜನೆಯಲ್ಲಿ ಮೌಂಟ್ ಕುಮ್ಗಾಂಗ್ ಪ್ರವಾಸಿ ಪ್ರದೇಶ ಮತ್ತು ಕೈಸೊಂಗ್ ಕೈಗಾರಿಕಾ ವಲಯಕ್ಕೆ ಸೈನಿಕರನ್ನು ಮರು ನಿಯೋಜಿಸುವ ಕುರಿತು ಉಲ್ಲೇಖಿಸಲಾಗಿತ್ತು.