ವೆಲ್ಲಿಂಗ್ಟನ್ (ನ್ಯೂಜಿಲ್ಯಾಂಡ್): ಹೆರಿಗೆ ನೋವಲ್ಲೇ ಆಸ್ಪತ್ರೆವರೆಗೂ ಸೈಕಲ್ ತುಳಿದು ಬಂದು ಮಗುವಿಗೆ ಜನ್ಮ ನೀಡಿ ನ್ಯೂಜಿಲ್ಯಾಂಡ್ನ ಸಂಸದೆಯೊಬ್ಬರು ಮತ್ತೊಮ್ಮೆ ಎಲ್ಲರ ಗಮನ ಸೆಳೆದರು.
ನ್ಯೂಜಿಲ್ಯಾಂಡ್ನ ಗ್ರೀನ್ ಪಕ್ಷದ ಸಂಸದೆ ಜೂಲಿ ಅನ್ನೆ ಜೆಂಟರ್ 2018ರಲ್ಲಿ ಕೂಡ ಆಸ್ಪತ್ರೆಯವರೆಗೂ ಸೈಕಲ್ನಲ್ಲೇ ಬಂದು ಯಶಸ್ವಿ ಹೆರಿಗೆ ಮಾಡಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮತ್ತೊಮ್ಮೆ (ತಡರಾತ್ರಿ) ಸೈಕ್ಲಿಂಗ್ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡನೇ ಹೆರಿಗೆಯಲ್ಲಿ ಅವರಿಗೆ ಹೆಣ್ಣು ಮಗು ಜನಿಸಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
-
Well my amazing friend @JulieAnneGenter cycled to hospital in labour AGAIN lol and had a beautiful baby this morning and all the Green whānau are so happy for you all! Aunty Ma can't wait till it's safe to snuggle xxxx pic.twitter.com/H35BE14X8F
— Marama Davidson MP (@MaramaDavidson) November 27, 2021 " class="align-text-top noRightClick twitterSection" data="
">Well my amazing friend @JulieAnneGenter cycled to hospital in labour AGAIN lol and had a beautiful baby this morning and all the Green whānau are so happy for you all! Aunty Ma can't wait till it's safe to snuggle xxxx pic.twitter.com/H35BE14X8F
— Marama Davidson MP (@MaramaDavidson) November 27, 2021Well my amazing friend @JulieAnneGenter cycled to hospital in labour AGAIN lol and had a beautiful baby this morning and all the Green whānau are so happy for you all! Aunty Ma can't wait till it's safe to snuggle xxxx pic.twitter.com/H35BE14X8F
— Marama Davidson MP (@MaramaDavidson) November 27, 2021
ಈ ವಿಚಾರವನ್ನು ಜೂಲಿ ಅವರೇ ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಬಿಗ್ ನ್ಯೂಸ್! ಇಂದು ಮುಂಜಾನೆ 3.04 ಗಂಟೆಗೆ ನಾವು ನಮ್ಮ ಕುಟುಂಬದ ಹೊಸ ಸದಸ್ಯಳನ್ನು ಸ್ವಾಗತಿಸಿದ್ದೇವೆ. ಹೆರಿಗೆ ನೋವಲ್ಲಿ ನಾನು ನಿಜವಾಗಿಯೂ ಸೈಕಲ್ ಓಡಿಸಲು ಮೊದಲು ಯೋಜಿಸಿರಲಿಲ್ಲ. ಆದರೆ ಅದು ಸಂಭವಿಸಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕೆಲಸ ಜಾಸ್ತಿ-ವಿಶ್ರಾಂತಿ ಕಡಿಮೆ.. ವೃತ್ತಿನಿರತ ಮಹಿಳೆಯರಿಗೆ ಹೆರಿಗೆ ರಜೆಯ ಪ್ರಾಮುಖ್ಯತೆ ಗೊತ್ತೇ?
ಇವರ ಈ ಪೋಸ್ಟ್ಗೆ ಕಮೆಂಟ್ಗಳ ಸುರಿಮಳೆಯೇ ಬರುತ್ತಿದ್ದು ನೆಟಿಜನ್‌ಗಳು, ಗ್ರೀನ್ ಪಕ್ಷದವರು ಶುಭ ಹಾರೈಸುತ್ತಿದ್ದಾರೆ. ಕೆಲವರು ಈ ಪೋಸ್ಟ್ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.