ETV Bharat / international

ಕಾಬೂಲ್​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ ಬಳಿಕ ಮತ್ತೆ ಆರಂಭವಾದ ವಿಮಾನ ಹಾರಾಟ - ಕಾಬೂಲ್​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ ಬಳಿಕ ಮತ್ತೆ ಆರಂಭವಾದ ವಿಮಾನ ಹಾರಾಟ ಸುದ್ದಿ

ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಅವಳಿ ಬಾಂಬ್‌ ಸ್ಫೋಟ ನಿನ್ನೆಯಷ್ಟೇ ಸಂಭವಿಸಿತ್ತು. ಕಾಬೂಲ್‌ ಆತ್ಮಾಹುತಿ ದಾಳಿಯನ್ನು ಅಮೆರಿಕ ಖಚಿತಪಡಿಸಿದೆ. ದಾಳಿಯಲ್ಲಿ ಯುಎಸ್​ನ 13 ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ..

ಮತ್ತೆ ಆರಂಭವಾದ ವಿಮಾನ ಹಾರಾಟ
ಮತ್ತೆ ಆರಂಭವಾದ ವಿಮಾನ ಹಾರಾಟ
author img

By

Published : Aug 27, 2021, 7:52 PM IST

ಕಾಬೂಲ್‌(ಅಫ್ಘಾನಿಸ್ತಾನ) : ಅಫ್ಘಾನ್ ರಾಜಧಾನಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್​ ದಾಳಿ ನಡೆದ ಮರುದಿನವೇ ಸಾವಿರಾರು ಅಫ್ಘನ್ನರು ದೇಶ ತೊರೆದು ಹೋಗಲು ಮತ್ತದೇ ಏರ್‌ಪೋರ್ಟ್‌ನಲ್ಲಿ ನೆರೆದಿದ್ದಾರೆ.

ಇಬ್ಬರು ಆತ್ಮಾಹುತಿ ಬಾಂಬರ್‌ಗಳ ದುಷ್ಕೃತ್ಯದಿಂದ ದಿಗ್ಭ್ರಮೆಗೊಂಡಿದ್ದ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಶುಕ್ರವಾರದಿಂದ ಜನರನ್ನು ತೆರವುಗೊಳಿಸುವ ಕಾರ್ಯ ಮತ್ತೆ ಆರಂಭವಾಗಿದೆ. ಯುಎಸ್ ಸೇನೆಯು ತನ್ನ ಪ್ರಜೆಗಳ ಸ್ಥಳಾಂತರ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಿದೆ.

ವಿಮಾನ ನಿಲ್ದಾಣದ ಹೊರಗೆ ಎಂದಿನಂತೆ ಆತಂಕದಲ್ಲಿಯೇ ಜನರು ತಮ್ಮ ಪ್ರಯಾಣಕ್ಕಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂದವು. 500 ಮೀಟರ್‌ವರೆಗೂ ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಹತ್ತಾರು ತಾಲಿಬಾನಿ ಉಗ್ರರು ವಿಮಾನ ನಿಲ್ದಾಣದತ್ತ ಬರದಂತೆ ಜನರನ್ನು ತಡೆಯುತ್ತಿದ್ದರು.

ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಅವಳಿ ಬಾಂಬ್‌ ಸ್ಫೋಟ ನಿನ್ನೆಯಷ್ಟೇ ಸಂಭವಿಸಿತ್ತು. ಕಾಬೂಲ್‌ ಆತ್ಮಾಹುತಿ ದಾಳಿಯನ್ನು ಅಮೆರಿಕ ಖಚಿತಪಡಿಸಿದೆ. ದಾಳಿಯಲ್ಲಿ ಯುಎಸ್​ನ 13 ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ.

ದಾಳಿಯ ಬಳಿಕವೂ ನಾವು ರಕ್ಷಣಾ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ಅಮೆರಿಕದ ಕಮಾಂಡರ್ ಸ್ಪಷ್ಟಪಡಿಸಿದ್ದರು. ದಾಳಿಯಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಓದಿ: ಕಾಬೂಲ್​ ಬ್ಲಾಸ್ಟ್: ಅಮೆರಿಕ ಸೈನಿಕರು ಸೇರಿ 90 ಜನರು ಸಾವು; ದಾಳಿಯ ಹೊಣೆ ಹೊತ್ತ ISIS-K

ETV Bharat Logo

Copyright © 2024 Ushodaya Enterprises Pvt. Ltd., All Rights Reserved.