ETV Bharat / international

ಜಾಗತಿಕ ಪ್ರವಾಸೋದ್ಯಮ ಚೇತರಿಕೆಗೆ ದಾರಿ ಯಾವುದಯ್ಯ?

ಬಹುತೇಕ ಪ್ರಮುಖ ರಾಷ್ಟ್ರಗಳಲ್ಲಿ ಪ್ರವಾಸ ನಿರ್ಬಂಧಗಳು ಇನ್ನೂ ಜಾರಿಯಲ್ಲಿದ್ದು, ಪ್ರವಾಸೋದ್ಯಮವು ಕೋವಿಡ್​ನಿಂದ ಅತಿ ಹೆಚ್ಚು ಸಂಕಷ್ಟಕ್ಕೊಳಗಾದ ಕ್ಷೇತ್ರವಾಗಿ ಮುಂದುವರೆದಿದೆ. ಅನೇಕ ದೇಶಗಳಲ್ಲಿನ ಕೋಟ್ಯಂತರ ಜನತೆಯ ಜೀವನೋಪಾಯವಾಗಿರುವ ಹಾಗೂ ಅರ್ಥವ್ಯವಸ್ಥೆಗೆ ಅತಿ ಹೆಚ್ಚು ಆದಾಯ ನೀಡುವ ಪ್ರವಾಸೋದ್ಯಮವನ್ನು ಮತ್ತೆ ಹಳಿಗೆ ತರಲು ರಾಷ್ಟ್ರಗಳು ಪ್ರಯತ್ನಿಸುವುದು ಅಗತ್ಯವಾಗಿದೆ.

Tourism
Tourism
author img

By

Published : Jun 25, 2020, 12:33 PM IST

ಕೊರೊನಾ ವೈರಸ್​ ಲಾಕ್​ಡೌನ್​ ನಿಧಾನವಾಗಿ ಕೊನೆಗೊಳ್ಳುತ್ತಿದ್ದು, ವಿಶ್ವದ ಕೆಲ ರಾಷ್ಟ್ರಗಳು ತಮ್ಮ ಅಂತಾರಾಷ್ಟ್ರೀಯ ಪ್ರವಾಸ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿವೆ. ಇದರೊಂದಿಗೆ ಜಾಗತಿಕ ಪ್ರವಾಸೋದ್ಯಮಕ್ಕೆ ಮತ್ತೆ ಗತವೈಭವ ಮರಳುವ ಆಶಾಭಾವನೆ ವ್ಯಕ್ತವಾಗುತ್ತಿದೆ.

ವಿಶ್ವ ಪ್ರವಾಸೋದ್ಯಮದ ಮೇಲೆ ಕೋವಿಡ್​-19 ಬಿಕ್ಕಟ್ಟಿನಿಂದಾದ ಪರಿಣಾಮಗಳ ಕುರಿತು ವಿಶ್ವ ಪ್ರವಾಸೋದ್ಯಮ ಸಂಸ್ಥೆ (World Tourism Organization -UNWTO) ಅಂಕಿ ಸಂಖ್ಯೆಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಪ್ರವಾಸೋದ್ಯಮದ ಚೇತರಿಕೆಗೆ ಕೈಗೊಳ್ಳಬಹುದಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅಂತಾರಾಷ್ಟ್ರೀಯ ಪ್ರವಾಸ ನಿರ್ಬಂಧಗಳು ತೆರವುಗೊಳ್ಳುತ್ತಿರುವ ಈ ಸಮಯದಲ್ಲಿ ಪ್ರತಿಯೊಂದು ರಾಷ್ಟ್ರ ಜವಾಬ್ದಾರಿ, ಸುರಕ್ಷತೆ ಹಾಗೂ ಭದ್ರತಾ ಮಾರ್ಗಸೂಚಿಗಳನ್ನು ಅನುಸರಿಸುವುದು ಅನಿವಾರ್ಯ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಟ್ಟಾರೆ ಅರ್ಥವ್ಯವಸ್ಥೆಯ ಚೇತರಿಕೆಗೆ ಪ್ರವಾಸೋದ್ಯಮದ ಬೆಳವಣಿಗೆಯನ್ನು ಅಡಿಪಾಯವಾಗಿ ಬಳಸಿಕೊಳ್ಳಬಹುದಾಗಿದೆ. ಹಲವಾರು ತಿಂಗಳುಗಳ ಕಾಲ ಸ್ಥಗಿತವಾಗಿದ್ದ ವಿಶ್ವ ಪ್ರವಾಸೋದ್ಯಮವು ಪ್ರಸ್ತುತ ಉತ್ತರ ಗೋಳಾರ್ಧದ ದೇಶಗಳಲ್ಲಿ ಹೆಚ್ಚಿನ ಚೇತರಿಕೆ ಕಾಣುತ್ತಿದೆ.

ಆದರೂ ಬಹುತೇಕ ಪ್ರಮುಖ ರಾಷ್ಟ್ರಗಳಲ್ಲಿ ಪ್ರವಾಸ ನಿರ್ಬಂಧಗಳು ಇನ್ನೂ ಜಾರಿಯಲ್ಲಿದ್ದು, ಪ್ರವಾಸೋದ್ಯಮವು ಕೋವಿಡ್​ನಿಂದ ಅತಿ ಹೆಚ್ಚು ಸಂಕಷ್ಟಕ್ಕೊಳಗಾದ ಕ್ಷೇತ್ರವಾಗಿ ಮುಂದುವರೆದಿದೆ. ಅನೇಕ ದೇಶಗಳಲ್ಲಿನ ಕೋಟ್ಯಂತರ ಜನತೆಯ ಜೀವನೋಪಾಯವಾಗಿರುವ ಹಾಗೂ ಅರ್ಥವ್ಯವಸ್ಥೆಗೆ ಅತಿ ಹೆಚ್ಚು ಆದಾಯ ನೀಡುವ ಪ್ರವಾಸೋದ್ಯಮವನ್ನು ಮತ್ತೆ ಹಳಿಗೆ ತರಲು ರಾಷ್ಟ್ರಗಳು ಪ್ರಯತ್ನಿಸುವುದು ಅಗತ್ಯವಾಗಿದೆ. ಹಂತ ಹಂತವಾಗಿ ಪ್ರವಾಸ ನಿರ್ಬಂಧಗಳನ್ನು ತೆರವುಗೊಳಿಸುವುದು, ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಪುನಾರಂಭಿಸುವುದು ಹಾಗೂ ಅದೇ ಸಮಯಕ್ಕೆ ಕಟ್ಟುನಿಟ್ಟಾದ ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕೆಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ಹೇಳಿದೆ.

"ಪ್ರವಾಸಿಗರ ಸಂಖ್ಯೆಯಲ್ಲಿ ಹಠಾತ್ ಕುಸಿತದಿಂದ ಲಕ್ಷಾಂತರ ಜನತೆ ಉದ್ಯೋಗ ಕಳೆದುಕೊಂಡಿದ್ದು, ಹಲವಾರು ರಾಷ್ಟ್ರಗಳ ಅರ್ಥವ್ಯವಸ್ಥೆ ಬುಡಮೇಲಾಗಿದೆ. ಹೀಗಾಗಿ ಮತ್ತೆ ಪ್ರವಾಸ ಚಟುವಟಿಕೆಗಳನ್ನು ಆರಂಭಿಸುವುದು ಸರ್ಕಾರಗಳ ಪ್ರಥಮ ಆದ್ಯತೆಯಾಗಬೇಕಿದೆ." ಎಂದು ಯುಎನ್​ಡಬ್ಲ್ಯೂಟಿಓ ಸೆಕ್ರೆಟರಿ ಜನರಲ್ ಝುರಾಬ್ ಪೊಲೊಲಿಕಾಶ್ವಿಲ್ಲಿ ಹೇಳಿದ್ದಾರೆ.

ವಿಶ್ವಾದ್ಯಂತ ವಿಧಿಸಲಾದ ಲಾಕ್​ಡೌನ್​ನಿಂದ ಶೇ 97 ರಷ್ಟು ಅಂತಾರಾಷ್ಟ್ರೀಯ ಪ್ರಯಾಣ ಸ್ಥಗಿತಗೊಂಡಿದೆ. ಇದರಿಂದ ವಿಶ್ವ ಪ್ರವಾಸೋದ್ಯಮಕ್ಕೆ ಒಟ್ಟಾರೆ 195 ಬಿಲಿಯನ್​ ಡಾಲರ್​ಗಳಷ್ಟು ನಷ್ಟ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.