ಕಂಠ್ಮಂಡು : ನೇಪಾಳ ಸಂಸತ್ ಅನ್ನು ವಿಸರ್ಜಿಸಿರುವ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ, ಮುಂದಿನ ನವೆಂಬರ್ 12 ಮತ್ತು 19 ರಂದು ಹೊಸದಾಗಿ ಮಧ್ಯಂತರ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.
ನಿರ್ಗಮಿತ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ಪ್ರತಿಪಕ್ಷ ನಾಯಕ ಶೇರ್ ಬಹದ್ದೂರ್ ದಿಯುಬಾ ಅವರು ಸರ್ಕಾರ ರಚಿಸಲು ಅವಕಾಶ ನೀಡುವಂತೆ ಸಲ್ಲಿಸಿದ್ದ ಮನವಿಗಳನ್ನು ತಿರಸ್ಕರಿಸಿದ ಬಳಿಕ ಅಧ್ಯಕ್ಷೆ ಈ ಆದೇಶ ಹೊರಡಿಸಿದ್ದಾರೆ.
ಸಮಾಜಬಾದಿ ಪಕ್ಷದ ಸಂಸದರು ಸೇರಿದಂತೆ ನಮಗೆ ಒಟ್ಟು 153 ಸದಸ್ಯರ ಬೆಂಬಲವಿದೆ ಎಂದು ನಿರ್ಗಮಿತ ಅಧ್ಯಕ್ಷ ಕೆ.ಪಿ. ಶರ್ಮಾ ಒಲಿ ಹೇಳಿದ್ದರೆ, ಮಾಧವ್ ಕುಮಾರ್ ನೇಪಾಳ ನೇತೃತ್ವದ ಸಿಪಿಎನ್-ಯುಎಂಎಲ್ನ 27 ಸದಸ್ಯರು ಒಳಗೊಂಡಂತೆ ಒಟ್ಟು 149 ಸದಸ್ಯರ ಬೆಂಬಲ ನಮಗಿದೆ ಎಂದು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ದಿಯುಬಾ ರಾಷ್ಟ್ರದ ಅಧ್ಯಕ್ಷರಿಗೆ ತಿಳಿಸಿದ್ದರು. ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ, ಎರಡೂ ಕಡೆಯವರ ಮನವಿಗಳನ್ನು ತಿರಿಸ್ಕಸಿರುವ ಅಧ್ಯಕ್ಷೆ ಭಂಡಾರಿ, ಚುನಾವಣೆಗೆ ಆದೇಶಿಸಿದ್ದಾರೆ.
ಓದಿ : ಗಾಜಾ - ಇಸ್ರೇಲ್ ಸಂಘರ್ಷ: ಪ್ಯಾಲೆಸ್ತೇನ್ ಪರ ನಿಲ್ಲುವಂತೆ ಕೆನಡಾ ಪ್ರಧಾನಿಗೆ ಸಂಸದರ ತಂಡ ಮನವಿ
ಕೇವಲ ಸಹಿ ಮತ್ತು ಬೆಂಬಲವಿದೆ ಎಂದ ತಕ್ಷಣ ಯಾರಿಗೂ ಬಹುಮತವಿದೆಯೆಂದು ಹೇಳಿ ಸರ್ಕಾರ ರಚಿಸಲು ಅವಕಾಶ ನೀಡಲಾಗುವುದಿಲ್ಲ. ಬಹುಮತ ಇದೆ ಎಂದು ಹೇಳಲು ಯಾವುದೇ ವಿಶ್ವಸಾರ್ಹ ಪುರಾವೆಗಳಿಲ್ಲ ಎಂದು ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಹೇಳಿದ್ದಾರೆ.
ಎರಡು ಕಡೆಯವರ ಮನವಿಗಳನ್ನು ತಿರಸ್ಕರಿಸಿದ ಬಳಿಕ ಶುಕ್ರವಾರ ರಾತ್ರಿ 76 (5) ವಿಧಿ ಪ್ರಕಾರ ಸಂಸತ್ನ ಮೇಲ್ಮನೆ ವಿಸರ್ಜಿಸುವಂತೆ ಅವರು ಅಧ್ಯಕ್ಷ ಒಲಿ ಅವರಿಗೆ ಶಿಫಾರಸು ಮಾಡಿದರು ಮತ್ತು ಹೊಸದಾಗಿ ಚುನಾಚಣೆ ನಡೆಸುವಂತೆ ಸೂಚಿಸಿದ್ದಾರೆ.