ಕಠ್ಮಂಡು: ನೇಪಾಳದಲ್ಲಿ ಎರಡನೇ ಹಂತದ ಇನಾಕ್ಯುಲೇಷನ್ ಡ್ರೈವ್ ಅಧಿಕೃತವಾಗಿ ಆರಂಭವಾಗಿದ್ದು, ನೇಪಾಳದ ಉಸ್ತುವಾರಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ಭಾನುವಾರ ಮೇಡ್ ಇನ್ ಇಂಡಿಯಾ ಕೋವಿಡ್ -19 ಲಸಿಕೆಯನ್ನು ಹಾಕಿಸಿಕೊಂಡರು.
ಕಠ್ಮಂಡುವಿನ ಮಹಾರಾಜ ಗಂಜನಲ್ಲಿರುವ ತ್ರಿಭುವನ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ (TUTH) ಪ್ರಧಾನಿ ಓಲಿಗೆ ಲಸಿಕೆ ನೀಡಲಾಯಿತು.
ಲಸಿಕೆ ಪಡೆದ ನಂತರ ಮಾತನಾಡಿದ ಓಲಿ, ಅರ್ಹರು ಕೋವಿಡ್ -19 ಲಸಿಕೆಯನ್ನು ಯಾವುದೇ ಭಯವಿಲ್ಲದೇ ಪಡೆದು, ಕೊರೊನಾವನ್ನು ಹೊಡೆದೋಡಿಸಿ ಎಂದಿದ್ದಾರೆ.
ಓದಿ:ಕೊರೊನಾದಿಂದ ಚೇತರಿಕೆ; ಚೀನಾ ವಸ್ತುಗಳ ರಫ್ತು ಹೆಚ್ಚಳ
ಪಿಎಂ ಓಲಿಯವರ ಪತ್ನಿ ರಾಧಿಕಾ ಶಾಕ್ಯ ಕೂಡ ಲಸಿಕೆ ಹಾಕಿಸಿಕೊಂಡಿದ್ದಾರೆ. 69 ವರ್ಷದ ಓಲಿ ಅವರು ಕೊಮೊರ್ಬಿಡಿಟಿಯನ್ನು ಹೊಂದಿದ್ದಾರೆ ಮತ್ತು 2020 ರಲ್ಲಿ ಮೂತ್ರಪಿಂಡ ಕಸಿಗೆ ಒಳಗಾಗಿದ್ದಾರೆ.
ಮೂಲಗಳ ಪ್ರಕಾರ, ಎರಡನೇ ಹಂತದಲ್ಲಿ ದೇಶಾದ್ಯಂತ 65 ವರ್ಷಕ್ಕಿಂತ ಮೇಲ್ಪಟ್ಟವರು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ನೇಪಾಳವು ಭಾರತದಿಂದ ಒಂದು ಮಿಲಿಯನ್ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಪಡೆದಿತ್ತು. ದಕ್ಷಿಣದ ನೆರೆಯವರಿಂದ ಇನ್ನೂ ಎರಡು ಮಿಲಿಯನ್ ಲಸಿಕೆಯನ್ನು ಖರೀದಿಸಿತು, ಇದರಲ್ಲಿ ಒಂದು ಮಿಲಿಯನ್ ಡೋಸ್ಗಳು ಇನ್ನೂ ಬರಬೇಕಿವೆ.
65 ವರ್ಷಕ್ಕಿಂತ ಮೇಲ್ಪಟ್ಟ 1.6 ದಶಲಕ್ಷ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ನೇಪಾಳ ಸರ್ಕಾರ ತನ್ನ ವ್ಯಾಕ್ಸಿನೇಷನ್ ಡ್ರೈವ್‌ನ ಎರಡನೇ ಹಂತವನ್ನು ಭಾನುವಾರದಿಂದ ಪ್ರಾರಂಭಿಸಿದೆ. ದೇಶಾದ್ಯಂತ ಸುಮಾರು 6,000 ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.