ETV Bharat / international

ಸದನ ವಿಸರ್ಜನೆ ಪ್ರಕರಣ.. ಸುಪ್ರೀಂ ತನ್ನ ನಿರ್ಧಾರ ರದ್ದುಗೊಳಿಸಲು ಸಾಧ್ಯವಿಲ್ಲ ಅಂತಾರೆ ಅಧ್ಯಕ್ಷೆ ಭಂಡಾರಿ

"ಸಂವಿಧಾನದ 76ನೇ ಪರಿಚ್ಛೇದದ ಪ್ರಕಾರ ರಾಷ್ಟ್ರಪತಿಗಳು ಕೈಗೊಳ್ಳುವ ಯಾವುದೇ ಕ್ರಮವು ನ್ಯಾಯಾಂಗ ಪರಿಶೀಲನೆಗೆ ಸಂಬಂಧಿಸಿದ ವಿಷಯವಾಗಲು ಸಾಧ್ಯವಿಲ್ಲ" ಎಂದು ಅಧ್ಯಕ್ಷೆ ಬಿದ್ಯಾದೇವಿ ನ್ಯಾಯಾಲಯಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ..

author img

By

Published : Jun 18, 2021, 3:43 PM IST

President Bhandari
ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ

ಕಠ್ಮಂಡು (ನೇಪಾಳ) : ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಪ್ರತಿನಿಧಿಗಳ ಸದನವನ್ನು ವಿಸರ್ಜಿಸಲಾಗಿದೆ ಎಂದು ಹೇಳಿರುವ ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ, ಈ ವಿಷಯದ ಬಗ್ಗೆ ತಮ್ಮ ನಿರ್ಧಾರ ರದ್ದುಗೊಳಿಸಲು ಅಥವಾ ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ. ಪ್ರಧಾನಿ ಕೆ.ಪಿ.ಶರ್ಮಾ ಓಲಿ ಶಿಫಾರಸ್ಸಿನ ಮೇರೆಗೆ ಅಧ್ಯಕ್ಷೆ ಭಂಡಾರಿ, ಮೇ 22ರಂದು ಐದು ತಿಂಗಳಲ್ಲಿ ಎರಡನೇ ಬಾರಿಗೆ ಕೆಳಮನೆ ವಿಸರ್ಜಿಸಿದರು. ನವೆಂಬರ್ 12 ಮತ್ತು ನವೆಂಬರ್ 19ರಂದು ಕ್ಷಿಪ್ರ ಚುನಾವಣೆಗಳನ್ನು ನಡೆಸುವುದಾಗಿ ಘೋಷಿಸಿದರು.

ಪ್ರಧಾನಿ ಓಲಿ, ಮೇ 21ರ ಸರ್ಕಾರದ ತೀರ್ಪಿನ ಬಗ್ಗೆ ತಮ್ಮ ಸ್ಪಷ್ಟೀಕರಣಗಳನ್ನು ಸುಪ್ರೀಂಕೋರ್ಟ್‌ಗೆ ಲಿಖಿತವಾಗಿ ತಿಳಿಸಿದ್ದರು. ಬಳಿಕ ಜೂನ್ 9ರಂದು ಸಾಂವಿಧಾನಿಕ ಪೀಠವು ತಮ್ಮ ಸ್ಪಷ್ಟೀಕರಣಗಳನ್ನು ಲಿಖಿತವಾಗಿ ನೀಡುವಂತೆ ಕೇಳಿತ್ತು. ರಾಷ್ಟ್ರಪತಿ ಮತ್ತು ಪ್ರಧಾನಿ ತಮ್ಮ ನಿರ್ಧಾರಗಳನ್ನು ಸಮರ್ಥಿಸಿಕೊಂಡರೆ, ಸ್ಪೀಕರ್ ಸಪ್ಕೋಟಾ ಸದನ ವಿಸರ್ಜಿಸುವುದನ್ನು ಅಸಂವಿಧಾನಿಕ ಕ್ರಮ ಎಂದು ಉಲ್ಲೇಖಿಸಿದರು.

"ಸಂವಿಧಾನದ 76ನೇ ಪರಿಚ್ಛೇದದ ಪ್ರಕಾರ ರಾಷ್ಟ್ರಪತಿಗಳು ಕೈಗೊಳ್ಳುವ ಯಾವುದೇ ಕ್ರಮವು ನ್ಯಾಯಾಂಗ ಪರಿಶೀಲನೆಗೆ ಸಂಬಂಧಿಸಿದ ವಿಷಯವಾಗಲು ಸಾಧ್ಯವಿಲ್ಲ" ಎಂದು ಅಧ್ಯಕ್ಷೆ ಬಿದ್ಯಾದೇವಿ ನ್ಯಾಯಾಲಯಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಕಾಯ್ದೆ -2017ರ ಸಂಭಾವನೆ ಮತ್ತು ಪ್ರಯೋಜನಗಳ ಷರತ್ತು 16ಅನ್ನು ಅಧ್ಯಕ್ಷೆ ಭಂಡಾರಿ ಉಲ್ಲೇಖಿಸಿದ್ದಾರೆ. ಈ ಕಾಯಿದೆಯ ಪ್ರಕಾರ ವ್ಯಕ್ತಿಯೊಬ್ಬರ ಬಗ್ಗೆ ರಾಷ್ಟ್ರಪತಿಗಳು ತೆಗೆದುಕೊಳ್ಳುವ ನಿರ್ಧಾರದಲ್ಲಿ ಯಾವುದೇ ನ್ಯಾಯಾಲಯ ಹಸ್ತಕ್ಷೇಪ ಮಾಡುವಂತಿಲ್ಲ.

ಆದ್ದರಿಂದ ನ್ಯಾಯಾಲಯವು ಯಾರೊಬ್ಬರ ಶಿಫಾರಸು ಇಲ್ಲದೆ ಸಂವಿಧಾನದಡಿ ರಾಷ್ಟ್ರಪತಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಭಂಡಾರಿ ಪ್ರತಿಪಾದಿಸಿದರು. ನಿರ್ದಿಷ್ಟ ವ್ಯಕ್ತಿಯನ್ನು ನೇಮಕ ಮಾಡಲು ನ್ಯಾಯಾಲಯವು ಮ್ಯಾಂಡಮಸ್ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ. ಅಂತಹ ಬೇಡಿಕೆಯನ್ನು ಮಾಡುವುದು ಸಂವಿಧಾನದ ವಿರುದ್ಧದ ವಿಷಯವಾಗಿದೆ. ಕೆ.ಪಿ.ಶರ್ಮಾ ಓಲಿ, ಸರ್ಕಾರ ರಚನೆ ಹಾಗೂ ರಾಜಕೀಯ ಪ್ರಕ್ರಿಯೆ ಬಗ್ಗೆ ನ್ಯಾಯಾಲಯವು ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

"ನ್ಯಾಯಾಲಯವು ಸಂವಿಧಾನವನ್ನು ವ್ಯಾಖ್ಯಾನಿಸುವ ಅಧಿಕಾರವನ್ನು ಹೊಂದಿದೆ. ಆದರೆ, ಅದು ಶಾಸಕಾಂಗ ಅಥವಾ ಕಾರ್ಯಕಾರಿಣಿಯ ಪಾತ್ರವನ್ನು ವಹಿಸಲು ಸಾಧ್ಯವಿಲ್ಲ" ಎಂದು ಓಲಿ ಹೇಳಿದ್ದಾರೆ. "ಪಕ್ಷಗಳ ಹಕ್ಕುಗಳ ಆಧಾರದ ಮೇಲೆ ಸರ್ಕಾರಗಳನ್ನು ರಚಿಸುವುದು ಸಂಸದೀಯ ವ್ಯವಸ್ಥೆಯ ಮೂಲಭೂತ ಲಕ್ಷಣವಾಗಿದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ:ನೇಪಾಳದಲ್ಲಿ ರಾಜಕೀಯ ಅಸ್ಥಿರತೆ; ಸುಪ್ರೀಂ ಕೋರ್ಟ್​ನತ್ತ ಎಲ್ಲರ ಚಿತ್ತ

ಸಂಸತ್ತು ವಿಸರ್ಜನೆ ಕುರಿತಂತೆ ನೇಪಾಳದ ಸುಪ್ರೀಂಕೋರ್ಟ್​ನಲ್ಲಿ 30 ಅರ್ಜಿಗಳನ್ನು ಸಲ್ಲಿಸಲಾಗಿದೆ. ಇವುಗಳಲ್ಲಿ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ಡಿಯುಬಾ ನೇತೃತ್ವದ ವಿಪಕ್ಷದ ಒಕ್ಕೂಟವು ಒಂದು ಅರ್ಜಿ ಸಲ್ಲಿಸಿದೆ. ಅಂತಿಮ ವಿಚಾರಣೆಯನ್ನು ಜೂನ್ 23ರಿಂದ ಪ್ರಾರಂಭಿಸಲು ನ್ಯಾಯಾಲಯ ಸಜ್ಜಾಗಿದೆ. ಆದರೆ, ಪ್ರತಿಪಕ್ಷಗಳ ಮೈತ್ರಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನಂತರ ಇತರ ಅರ್ಜಿಗಳ ವಿಚಾರಣೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.