ಕಠ್ಮಂಡು(ನೇಪಾಳ): ಭೀಕರ ಅಪಘಾತವೊಂದರಲ್ಲಿ ಬಸ್ನಲ್ಲಿದ್ದ ಸುಮಾರು 32 ಮಂದಿ ಸಾವನ್ನಪ್ಪಿರುವ ಘಟನೆ ನೇಪಾಳದ ಮುಗು ಜಿಲ್ಲೆಯಲ್ಲಿ ನಡೆದಿದೆ. ಮುಗು ಜಿಲ್ಲಾ ಕೇಂದ್ರವಾದ ಗಮ್ಗಡಿ ನೇಪಾಳ್ಗಂಜ್ ಎಂಬಲ್ಲಿಗೆ ಬಸ್ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಈ ಬಸ್ನಲ್ಲಿ ವಲಸೆ ಕಾರ್ಮಿಕರು ಹಾಗೂ ಕೆಲವು ವಿದ್ಯಾರ್ಥಿಗಳೂ ಇದ್ದು, ನೇಪಾಳದ ಪ್ರಮುಖ ಹಬ್ಬವಾದ ದಶಾಯಿನ್ಗೆ ತೆರಳುತ್ತಿದ್ದರು. ಈ ವೇಳೆ 300 ಮೀಟರ್ಗೂ ಹೆಚ್ಚು ಆಳಕ್ಕೆ ಬಸ್ ಉರುಳಿ ಬಿದ್ದಿದೆ. ಪರಿಣಾಮ, ಸ್ಥಳದಲ್ಲೇ 22 ಮಂದಿ ಪ್ರಾಣ ಕಳೆದುಕೊಂಡಿದ್ದು, ಆಸ್ಪತ್ರೆಗೆ ದಾಖಲಾದ ನಂತರ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದು ಎಂದು ಕರ್ನಾಲಿ ಪ್ರಾಂತ್ಯದ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೀವನ್ ಲಮಿಚಾನೆ ದೂರವಾಣಿಯಲ್ಲಿ ಎಎನ್ಐಗೆ ಮಾಹಿತಿ ನೀಡಿದ್ದಾರೆ.
ನೇಪಾಳದ ಸೇನೆಯ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗಿದೆ. ವಾಯುಪಡೆಯನ್ನೂ ಕೂಡಾ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಬಳಸಲಾಗಿದೆ. ಬಸ್ನ ಬ್ರೇಕ್ ವೈಫಲ್ಯವೇ ಅಪಘಾತಕ್ಕೆ ಕಾರಣ ಎಂದು ಊಹಿಸಲಾಗಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಮಾನವೀಯತೆ ಆಧಾರದಲ್ಲಿ ನೆರವು: G-20 ಸದಸ್ಯರ ತೀರ್ಮಾನ