ನೈಪಿತಾವ್ (ಮ್ಯಾನ್ಮಾರ್): ಮಿಲಿಟರಿ ಆಡಳಿತದ ವಿರುದ್ಧ ಮ್ಯಾನ್ಮಾರ್ನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಲ್ಲಿನ ಮಿಲಿಟರಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಹೊಸ ಕಾನೂನನ್ನು ರೂಪಿಸಲಾಗಿದ್ದು, ಪ್ರತಿಭಟನೆ ನಡೆಸುವವರಿಗೆ ಹೆಚ್ಚಿನ ಶಿಕ್ಷೆ ವಿಧಿಸುವಂತೆ ಕಾನೂನು ರೂಪಿಸಲಾಗಿದೆ.
ಪ್ರತಿಭಟನೆ ವೇಳೆ ಅಲ್ಲಿನ ಸಶಸ್ತ್ರ ಪಡೆಗಳಿಗೆ ಅಡ್ಡಿಪಡಿಸಿದರೆ ಸುಮಾರು 20 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾದೀತು ಎಂಬ ಎಚ್ಚರಿಕೆಯನ್ನು ಅಲ್ಲಿನ ಮಿಲಿಟರಿ ಆಡಳಿತ ಸಾರ್ವಜನಿಕರಿಗೆ ನೀಡಿದೆ.
ಇದರ ಜೊತೆಗೆ ಸೇನಾ ನಾಯಕರ ಬಗ್ಗೆ ದ್ವೇಷ ಉಂಟು ಮಾಡುವವರಿಗೆ ದೀರ್ಘಕಾಲದ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ. ಹಲವಾರು ನಗರಗಳಲ್ಲಿ ಶಸ್ತ್ರ ಸಜ್ಜಿತ ಸಾರ್ವಜನಿಕರ ವಾಹನಗಳು ಪತ್ತೆಯಾದ ಬೆನ್ನಲ್ಲೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಬಿಬಿಸಿ ಸೋಮವಾರ ವರದಿ ಮಾಡಿದೆ.
ಇದನ್ನೂ ಓದಿ: ಮಾರ್ಚ್‌ನಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಯೋಚನೆ : ಡಾ.ಹರ್ಷವರ್ಧನ್
ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಜನರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಆಂಗ್ ಸಾನ್ ಸೂಕಿ ಸೇರಿದಂತೆ ತಮ್ಮ ಚುನಾಯಿತ ನಾಯಕರನ್ನು ಬಿಡುಗಡೆಗೊಳಿಸಲು ಮತ್ತು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.
ಫೆಬ್ರವರಿ 15ರಂದು ಆಂಗ್ ಸಾನ್ ಸೂಕಿ ಬಂಧನವು ಫೆಬ್ರವರಿ 15 ರಂದು ಕೊನೆಗೊಳ್ಳಬೇಕಿತ್ತು. ಆದರೆ, ಇನ್ನೂ ಎರಡು ದಿನಗಳ ಕಾಲ ಬಂಧನ ಮುಂದುವರೆಯುತ್ತದೆ ಎಂದು ನಂತರ ನೈಪಿತಾವ್ನ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗ ಸಾರ್ವಜನಿಕರ ಪ್ರತಿಭಟನೆ ತೀವ್ರವಾಗಿದ್ದು, ಕಾನೂನಿನಲ್ಲಿ ಅಪಾರವಾದ ಬದಲಾವಣೆ ಮಾಡಲಾಗಿದೆ. ಮಿಲಿಟರಿಯ ಬಗ್ಗೆ ದ್ವೇಷ ಪ್ರಚೋದಿಸುವ ಯಾರಿಗಾದರೂ ದೀರ್ಘ ಜೈಲು ಶಿಕ್ಷೆ ಮತ್ತು ದಂಡವನ್ನು ಹೆಚ್ಚು ಮಾಡಿದ್ದು, ಸಾರ್ವಜನಿಕ ಹಕ್ಕುಗಳ ದಮನವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಮಿಲಿಟರಿ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ಇದ್ದು, ಭದ್ರತಾ ಪಡೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವುದನ್ನು ತಡೆಯುವ ಜನರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಸಾರ್ವಜನಿಕರಲ್ಲಿ ಭಯ ಅಥವಾ ಅಶಾಂತಿಯನ್ನು ಉಂಟು ಮಾಡಿದವರನ್ನು ಮೂರು ವರ್ಷ ಜೈಲಿನಲ್ಲಿಡಬಹುದಾಗಿದೆ.