ಯಾಂಗೊನ್ (ಮ್ಯಾನ್ಮಾರ್): ಚುನಾಯಿತ ನಾಗರಿಕ ಸರ್ಕಾರ ಮತ್ತು ಅದರ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಉಚ್ಚಾಟಿಸಿರುವುದರ ವಿರುದ್ಧ ಪ್ರತಿಭಟನೆ ಹಾಗೂ ಮಿಲಿಟರಿ ದಂಗೆಗೆ ಪ್ರತಿರೋಧ ಹೆಚ್ಚಾಗಿರುವುದರಿಂದ ಮ್ಯಾನ್ಮಾರ್‌ನ ಹೊಸ ಮಿಲಿಟರಿ ಸರ್ಕಾರ ಫೇಸ್‌ಬುಕ್ ನಿರ್ಬಂಧಿಸಿದೆ.
ಫೇಸ್‌ಬುಕ್ ವಿಶೇಷವಾಗಿ ಮ್ಯಾನ್ಮಾರ್‌ನಲ್ಲಿ ಜನಪ್ರಿಯವಾಗಿದ್ದು, ಉಚ್ಚಾಟಿತ ಸರ್ಕಾರವು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮ ತಾಣದಲ್ಲಿ ಸಾರ್ವಜನಿಕ ಪ್ರಕಟಣೆಗಳನ್ನು ಮಾಡುತ್ತಿತ್ತು.
ನಿನ್ನೆ ತಡರಾತ್ರಿ ಅಡೆತಡೆಗಳು ಪ್ರಾರಂಭವಾದವು ಎಂದು ಇಂಟರ್ನೆಟ್ ಬಳಕೆದಾರರು ಹೇಳಿದ್ದು, ಮ್ಯಾನ್ಮಾರ್‌ನಲ್ಲಿ ಮೊಬೈಲ್ ಆಪರೇಟರ್‌ಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಫೇಸ್‌ಬುಕ್ ತಾತ್ಕಾಲಿಕವಾಗಿ ನಿರ್ಬಂಧಿಸಲು ಸಂವಹನ ಸಚಿವಾಲಯ ನಿರ್ದೇಶನ ನೀಡಿದೆ ಎಂದು ಮೊಬೈಲ್ ಸೇವಾ ಪೂರೈಕೆದಾರರು ದೃಢಪಡಿಸಿದ್ದಾರೆ.
ಮ್ಯಾನ್ಮಾರ್‌ನ ಟೆಲಿಕಾಂ ಪೂರೈಕೆದಾರರಿಗೆ ಫೇಸ್‌ಬುಕ್ ತಾತ್ಕಾಲಿಕವಾಗಿ ನಿರ್ಬಂಧಿಸಲು ಆದೇಶಿಸಲಾಗಿದೆ. ಸಂಪರ್ಕವನ್ನು ಪುನಃಸ್ಥಾಪಿಸಲು ನಾವು ಅಧಿಕಾರಿಗಳನ್ನು ಕೋರುತ್ತೇವೆ ಇದರಿಂದ ಮ್ಯಾನ್ಮಾರ್‌ನ ಜನರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂವಹನ ನಡೆಸಬಹುದು ಮತ್ತು ಪ್ರಮುಖ ಮಾಹಿತಿಯನ್ನು ತಿಳಿಯಬಹುದು ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.