ETV Bharat / international

‘ಐಸಿಸ್’​ ಗುರಿಯಾಗಿಸಿ ಅಮೆರಿಕ ಸೇನೆ ದಾಳಿ: ನಾವು ಯಶಸ್ವಿಯಾಗಿದ್ದೇವೆ ಎಂದ ಬಿಲ್ ಅರ್ಬನ್ - Kabul airport blast

ನೂರಾರು ಜನರನ್ನು ಬಲಿ ಪಡೆದ ಆತ್ಮಾಹುತಿ ಬಾಂಬ್​ ದಾಳಿ ನಡೆದ ಕೇವಲ ಮೂರು ದಿನಗಳಲ್ಲೇ ಕಾಬೂಲ್​ ವಿಮಾನದ ನಿಲ್ದಾಣದ ಬಳಿ ರಾಕೆಟ್​ ದಾಳಿ ನಡೆದಿದೆ.

ಕಾಬೂಲ್​ ಏರ್​ಪೋರ್ಟ್​ ಬಳಿ ಮತ್ತೊಂದು ಬೃಹತ್​ ಸ್ಫೋಟ..!

author img

By

Published : Aug 29, 2021, 7:02 PM IST

Updated : Aug 29, 2021, 9:09 PM IST

ಕಾಬೂಲ್​ (ಅಫ್ಘಾನಿಸ್ತಾನ): ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್​ ದಾಳಿ ನಡೆದ ಕೇವಲ ಮೂರು ದಿನಗಳಲ್ಲೇ ಅಫ್ಘಾನಿಸ್ತಾನ ರಾಜಧಾನಿಯಲ್ಲಿ ಈಗ ಮತ್ತೊಂದು ಬೃಹತ್​ ಸ್ಫೋಟ ಸಂಭವಿಸಿದೆ. ಐಸಿಸ್-ಕೆ ಗುರಿಯಾಗಿಸಿ ಅಮೆರಿಕದ ಸೇನಾ ಪಡೆಗಳು ಕಾಬೂಲ್​ನಲ್ಲಿ ಮಾನವ ರಹಿತ ವೈಮಾನಿಕ ದಾಳಿ ನಡೆಸಿವೆ.

  • Eyewitnesses and footage on social media indicates a rocket has hit a house in the Khawja Bughra area near #Kabul airport.

    — TOLOnews (@TOLOnews) August 29, 2021 " class="align-text-top noRightClick twitterSection" data=" ">

ಏರ್​ಪೋರ್ಟ್​ ಸಮೀಪ ರಾಕೆಟ್​ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ ಮಗುವೊಂದು ಸಾವನ್ನಪ್ಪಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಾವಳಿಗಳು ಹಾಗೂ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಕಾಬೂಲ್​ ಏರ್​ಪೋರ್ಟ್ ಸಮೀಪ ಮನೆಯೊಂದರ ಮೇಲೆ ರಾಕೆಟ್ ಅಪ್ಪಳಿಸಿದೆ ಎಂದು ಟೋಲೋ ನ್ಯೂಸ್ ತಿಳಿಸಿದೆ.

  • The blast heard in Kabul is apparently a missile that hit a residential house in Khajeh Baghra area which is few miles away from the Kabul airport. Both ISIS and Taliban have in the past hit missile in residential areas in and around Kabul.

    pic.twitter.com/LOmlsWclWK

    — Aditya Raj Kaul (@AdityaRajKaul) August 29, 2021 " class="align-text-top noRightClick twitterSection" data=" ">

ಐಸಿಸ್​ ಮೇಲೆ ಯುಎಸ್​ ದಾಳಿ:

ಇದರ ಬೆನ್ನಲ್ಲೇ ಕಾಬೂಲ್‌ನಲ್ಲಿ ಶಂಕಿತ ISIS-K ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಅಮೆರಿಕ ಮಿಲಿಟರಿ ದಾಳಿ ನಡೆಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

  • BREAKING: A rocket has hit a neighborhood northwest of the Kabul international airport amid U.S. evacuations, killing a child, according to an Afghan police chief. No group immediately claimed responsibility for the attack. https://t.co/FOo7jdvqkL

    — The Associated Press (@AP) August 29, 2021 " class="align-text-top noRightClick twitterSection" data=" ">

ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐಸಿಸ್-ಕೆ ಗುರಿಯಾಗಿಸಿ ಅಮೆರಿಕದ ಸೇನಾ ಪಡೆಗಳು ಇಂದು ಕಾಬೂಲ್​ನಲ್ಲಿ ಮಾನವ ರಹಿತ ವೈಮಾನಿಕ ದಾಳಿ ನಡೆಸಿವೆ. ಈ ದಾಳಿಯಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ವಕ್ತಾರ ಬಿಲ್ ಅರ್ಬನ್ ತಿಳಿಸಿದ್ದಾರೆ.

ಅಲ್ಲದೆ, ವಾಹನದಲ್ಲಿ ಗಣನೀಯ ಸ್ಫೋಟಕಗಳು ಇದ್ದುದರಿಂದ ನಾಗರಿಕ ಸಾವು ನೋವುಗಳು ಕೂಡ ಸಂಭವಿಸಿವೆ, ಸಾವುನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಬೂಲ್ ಏರ್​ಪೋರ್ಟ್​ನಲ್ಲಿ 24-36 ಗಂಟೆಯಲ್ಲಿ ಮತ್ತೊಂದು ಉಗ್ರ ದಾಳಿ: ಬೈಡನ್ ಎಚ್ಚರಿಕೆ

ಗುರುವಾರ ಕಾಬೂಲ್​ ಏರ್​ಪೋರ್ಟ್ ಬಳಿ ನಡೆದಿದ್ದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಅಮೆರಿಕದ 13 ಸೈನಿಕರು ಸೇರಿದಂತೆ ಸುಮಾರು 200 ಮಂದಿ ಮೃತಪಟ್ಟಿದ್ದರು. ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಐಸಿಸ್-ಕೆ ಒಪ್ಪಿಕೊಂಡಿತ್ತು. ಮುಂದಿನ 24-36 ಗಂಟೆಗಳಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ಕೂಡ ನೀಡಿದ್ದರು.

Last Updated : Aug 29, 2021, 9:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.