ETV Bharat / international

ಆಂಗ್ಲರಿಗೆ ಪೈಪೋಟಿ: ರಷ್ಯಾದಲ್ಲಿ ಮುಂದಿನ ವಾರದಿಂದಲೇ ಸಾಮೂಹಿಕ ಕೋವಿಡ್ ವ್ಯಾಕ್ಸಿನೇಷನ್​​..! - Vladimir Putin announcement

Vladimir Putin
ವ್ಲಾದಿಮಿರ್ ಪುಟಿನ್
author img

By

Published : Dec 2, 2020, 8:22 PM IST

Updated : Dec 2, 2020, 10:52 PM IST

20:19 December 02

ರಷ್ಯಾದಲ್ಲಿ ಮುಂದಿನ ವಾರದಿಂದ ಕೋವಿಡ್ ವ್ಯಾಕ್ಸಿನೇಷನ್​​..!

ಮಾಸ್ಕೋ (ರಷ್ಯಾ):  ಇಂಗ್ಲೆಂಡ್​ನಲ್ಲಿ ಕೊರೊನಾ ಲಸಿಕೆ ಫೈಜರ್​ಗೆ ಅನುಮೋದನೆ ಸಿಕ್ಕ ಕೆಲವು ಗಂಟೆಗಳಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​​​ ಮುಂದಿನ ವಾರದಿಂದಲೇ ಸಾಮೂಹಿಕ ಕೋವಿಡ್ ವ್ಯಾಕ್ಸಿನೇಷನ್ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ.

ಈ ಕುರಿತು ಅಧಿಕಾರಿಗಳಿಗೆ ವ್ಲಾಡಿಮಿರ್ ಪುಟಿನ್ ಸೂಚನೆ ನೀಡಿದ್ದು, ಮುಂದಿನ ವಾರದಲ್ಲಿ ಎಲ್ಲರಿಗೂ ಕೋವಿಡ್ ವ್ಯಾಕ್ಸಿನ್​ ಅನ್ನು  ಸಾಮೂಹಿಕವಾಗಿ ನೀಡಲಾಗುತ್ತದೆ ಎಂದು ರಾಯಿಟರ್ಸ್​ ವರದಿ ಮಾಡಿದೆ.

ಇದಕ್ಕೂ ಮೊದಲು ರಕ್ಷಣಾ ಮಂತ್ರಿ ಸೆರ್ಗೆಯ್ ಶೋಯಿಗು  ಸುಮಾರು 2,500 ಸೇನಾ ಸಿಬ್ಬಂದಿಗೆ ಲಸಿಕೆ ನೀಡಲಾಗಿದ್ದು, ಸಾಮೂಹಿಕ ವ್ಯಾಕ್ಸಿನೇಷನ್​ ಅನ್ನು 4 ಲಕ್ಷ ಮಂದಿ ಸೇನಾ ಸಿಬ್ಬಂದಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.  

ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಪುಟ್ನಿಕ್ ವಿ ಕೋವಿಡ್ -19 ಲಸಿಕೆ ಶೇಕಡಾ 95ರಷ್ಟು ಪರಿಣಾಮಕಾರಿ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದರು. ಇದು ವಿಶ್ವದ ಮೊದಲ ಕೊರೊನಾ ವೈರಸ್ ಲಸಿಕೆ ಆಗಿದ್ದು, ಪುಟಿನ್ ಪುತ್ರಿಯ ಮೇಲೆಯೂ ಪ್ರಯೋಗ ಮಾಡಲಾಗಿತ್ತು.

Last Updated : Dec 2, 2020, 10:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.