ಬೀಜಿಂಗ್: ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿದ ರೋಗಿಗಳಲ್ಲಿ ಐದನೇ ಒಂದು ಭಾಗದಷ್ಟು ಜನರು ಮಾತ್ರ ಸಾವಿಗೆ ಮುಂಚಿತವಾಗಿ ಅಗತ್ಯ ವೆಂಟಿಲೇಷನ್ ಸಪೋರ್ಟ್ (ಕೃತಕ ಉಸಿರಾಟದ ಬೆಂಬಲ) ಸಿಕ್ಕಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌ನ ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನಾ ವರದಿಯನ್ನು, ಚೀನಾದ ವುಹಾನ್‌ನಲ್ಲಿರುವ 21 ಆಸ್ಪತ್ರೆಗಳಲ್ಲಿ ಜನವರಿ 21 ರಿಂದ 30 ರ ನಡುವೆ ವೈರಸ್ನಿಂದ ಸಾವನ್ನಪ್ಪಿದ 168 ರೋಗಿಗಳ ಕೊಮೊರ್ಬಿಡಿಟಿ ಹಾಗೂ ವೆಂಟಿಲೇಷನ್ ಸಪೋರ್ಟ್ ಆಧಾರದ ಮೇಲೆ ನಡೆಸಲಾಗಿದೆ.
ಆಗ್ನೇಯ ಚೀನಾದ ಝೋಂಗ್ಡಾ ಆಸ್ಪತ್ರೆ ಸೇರಿದಂತೆ ವಿಜ್ಞಾನಿಗಳ ಪ್ರಕಾರ, ಎಲ್ಲಾ ರೋಗಿಗಳು ಆಸ್ಪತ್ರೆಯಲ್ಲಿದ್ದಾಗ ಆಮ್ಲಜನಕ ಚಿಕಿತ್ಸೆಯನ್ನು ಪಡೆದಿದ್ದಾರೆ. ಆದರೆ 46 ರೋಗಿಗಳು ತಾವು ಸಾಯುವ ಮುನ್ನ ಮೂಗಿನ ಮೂಲಕ ಅಥವಾ ಫೇಸ್ ಮಾಸ್ಕ್ ಮೂಲಕ ನೀಡುವ ಆಮ್ಲಜನಕವನ್ನು ಮಾತ್ರ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಸುಮಾರು ಮೂರನೇ ಒಂದು ಭಾಗದಷ್ಟು ರೋಗಿಗಳು, ಹೆಚ್ಚಿನ ಹರಿವಿನ ಮೂಗಿನ ಆಮ್ಲಜನಕನ್ನು ಪಡೆದರೆ, 72 ರೋಗಿಗಳು ರೋಗನಿರೋಧಕ ವಾತಾಯನ (noninvasive ventilation)ವನ್ನು ಪಡೆದರು ಎಂದು ಹೇಳಲಾಗಿದೆ. ಕೇವಲ 34 ರೋಗಿಗಳು ಮಾತ್ರ ತ್ವರಿತ ಯಾಂತ್ರಿಕ ವಾತಾಯನ(invasive mechanical ventilation)ವನ್ನು ಪಡೆದರು ಎಂದು ಅಧ್ಯಯನ ತಿಳಿಸಿದೆ.
ಈ ಸಂಶೋಧನೆಗಳ ಆಧಾರದ ಮೇಲೆ, ವಿಜ್ಞಾನಿಗಳು ಅನೇಕ ರೋಗಿಗಳು ವೆಂಟಿಲೇಷನ್ ವಿಳಂಬವಾಗಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.