ರಭಸವಾದ ಗಾಳಿಯಿಂದಾಗಿ ಗಾಜಿನ ಫಲಕಗಳು ಹಾನಿಗೊಳಗಾದ ನಂತರ ಚೀನಾದಲ್ಲಿ ವ್ಯಕ್ತಿಯೋರ್ವ ಸೇತುವೆಯಲ್ಲಿ ತೂಗಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ವ್ಯಕ್ತಿಯು ಶುಕ್ರವಾರ ಪಿಯಾನ್ ಪರ್ವತದಲ್ಲಿರುವ 100 ಮೀಟರ್ ಎತ್ತರದ ಸೇತುವೆಗೆ (330 ಅಡಿ) ಭೇಟಿ ನೀಡಿದಾಗ ಈ ಘಟನೆ ಜರುಗಿದೆ. ಅತ್ಯಂತ ಜೋರಾಗಿ ಬೀಸುತ್ತಿದ್ದ ಗಾಳಿಗೆ ಸೇತುವೆಯ ಮೇಲಿದ್ದ ಗಾಜಿನ ಫಲಕಗಳು 150 ಕಿ.ಮೀ/ಗಂ ದೂರಕ್ಕೆ ಸಾಗಿ ಬಿದ್ದಿವೆ.
-
Tourist left dangling 330ft in the air after glass-bottomed bridge shatters in 90mph gale-force winds in China.
— Hoodlum 🇺🇸 (@NotHoodlum) May 10, 2021 " class="align-text-top noRightClick twitterSection" data="
He crawled to safety, guided by firefighters and police. pic.twitter.com/Pk2vA7iUY2
">Tourist left dangling 330ft in the air after glass-bottomed bridge shatters in 90mph gale-force winds in China.
— Hoodlum 🇺🇸 (@NotHoodlum) May 10, 2021
He crawled to safety, guided by firefighters and police. pic.twitter.com/Pk2vA7iUY2Tourist left dangling 330ft in the air after glass-bottomed bridge shatters in 90mph gale-force winds in China.
— Hoodlum 🇺🇸 (@NotHoodlum) May 10, 2021
He crawled to safety, guided by firefighters and police. pic.twitter.com/Pk2vA7iUY2
ಚೀನಾದಲ್ಲಿ ಸುಮಾರು 2,300 ಗಾಜಿನ ಸೇತುವೆಗಳು ಮತ್ತು ಹಲವಾರು ಗಾಜಿನ ಕಾಲುದಾರಿಗಳು ಮತ್ತು ಸ್ಲೈಡ್‌ಗಳಿವೆ ಎಂದು ಭಾವಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಚೀನಾದ ಬೆಳೆಯುತ್ತಿರುವ ದೇಶೀಯ ಪ್ರವಾಸೋದ್ಯಮದ ಲಾಭಕ್ಕಾಗಿ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ಚಿತ್ರವು ವ್ಯಕ್ತಿಯೋರ್ವ ಸೇತುವೆಯ ಮಧ್ಯದಲ್ಲಿ ತೂಗಾಡುತ್ತಿರುವ ಸನ್ನಿವೇಶವನ್ನು ಬಿಂಬಿಸುತ್ತದೆ. ಈ ಸೇತುವೆಯು ಲಾಂಗ್‌ಜಿಂಗ್ ನಗರದ ಸಮೀಪ ಒಂದು ಸುಂದರವಾದ ಪ್ರದೇಶದಲ್ಲಿದೆ.
ಇದನ್ನೂ ಓದಿ: ಭಾರತದ ಕೋವಿಡ್ ಹೋರಾಟಕ್ಕೆ 15 ಮಿಲಿಯನ್ ಡಾಲರ್ ನೆರವು ನೀಡಿದ ಟ್ವಿಟ್ಟರ್
ವಿಷಯ ತಿಳಿದು ವ್ಯಕ್ತಿಯನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರು. ಆನ್-ಸೈಟ್ ಸಿಬ್ಬಂದಿಯ ಸಹಾಯದಿಂದ ವ್ಯಕ್ತಿಯನ್ನು ಯಶಸ್ವಿಯಾಗಿ ರಕ್ಷಿಸಲಾಯಿತು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಲಾಂಗ್‌ಜಿಂಗ್ ಸಿಟಿಯ ವೀಬೊ ಪುಟದ ಪ್ರಕಾರ, ಘಟನೆ ಜರುಗಿದ ಬಳಿಕ ಈ ಪ್ರದೇಶವನ್ನು ಮುಚ್ಚಲಾಗಿದೆ. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ. ಇದು ಚೀನಾದಲ್ಲಿ ಈ ರೀತಿಯ ಮೊದಲ ಅಪಘಾತವಲ್ಲ. 2018ರಲ್ಲಿ ಹೆಬೈ ಪ್ರಾಂತ್ಯವು ಸೇತುವೆಗಳು ನಡಿಗೆ ಮಾರ್ಗಗಳು ಮತ್ತು ವೀಕ್ಷಣಾ ಡೆಕ್‌ಗಳನ್ನು ಒಳಗೊಂಡಂತೆ ತನ್ನ 32 ಗಾಜಿನ ಪ್ಯಾನೆಲ್ಗಳನ್ನು ಮುಚ್ಚಿದೆ.
ಈ ಪ್ರದೇಶಗಳಲ್ಲಿ ಸುರಕ್ಷತಾ ತಪಾಸಣೆ ನಡೆಸಲಾಗುತ್ತಿದೆ. ಗುವಾಂಗ್ಕ್ಸಿ ಪ್ರಾಂತ್ಯದಲ್ಲಿ ಗಾಜಿನ ಸ್ಲೈಡ್‌ನಿಂದ ಬಿದ್ದು 2019ರಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದರು. 2016ರಲ್ಲಿ ಜಾಂಗ್‌ಜಿಯಾಜಿ ನಗರದಲ್ಲಿ ಗಾಜಿನ ನಡಿಗೆ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರವಾಸಿಗರು ಗಾಯಗೊಂಡಿದ್ದರು.