ETV Bharat / international

US Air Quality Index: ಪಾಕ್​ನ ಲಾಹೋರ್​ಗೆ 'ವಿಶ್ವದ ಅತ್ಯಂತ ಕಲುಷಿತ ನಗರ' ಎಂಬ ಹಣೆಪಟ್ಟಿ - ದೆಹಲಿ ವಾಯು ಗುಣಮಟ್ಟ 'ಕಳಪೆ'

ಪಾಕಿಸ್ತಾನ ಸಾಂಸ್ಕೃತಿಕ ರಾಜಧಾನಿ ಲಾಹೋರ್​ನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 600ಕ್ಕೂ ಹೆಚ್ಚು ಪ್ರಮಾಣದಲ್ಲಿ ದಾಖಲಾಗಿದ್ದು, ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

US Air Quality Index
US Air Quality Index
author img

By

Published : Nov 11, 2021, 5:33 PM IST

ಇಸ್ಲಾಮಾಬಾದ್ (ಪಾಕಿಸ್ತಾನ): ಯುಎಸ್ ವಾಯು ಗುಣಮಟ್ಟ ಸೂಚ್ಯಂಕ (US Air Quality Index) ಬಿಡುಗಡೆ ಮಾಡಿದ ವಾಯು ಮಾಲಿನ್ಯದ ಅಂಕಿಅಂಶಗಳ ಪ್ರಕಾರ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಪಾಕಿಸ್ತಾನದ ಲಾಹೋರ್ (Lahore) ಅಗ್ರಸ್ಥಾನದಲ್ಲಿದೆ.

ಪಾಕಿಸ್ತಾನ ಸಾಂಸ್ಕೃತಿಕ ರಾಜಧಾನಿ ಲಾಹೋರ್​ನಲ್ಲಿ ಬುಧವಾರ ವಾಯು ಗುಣಮಟ್ಟ ಸೂಚ್ಯಂಕವು 600ಕ್ಕೂ ಹೆಚ್ಚು ಪ್ರಮಾಣದಲ್ಲಿ ದಾಖಲಾಗಿದೆ. ಲಾಹೋರ್​ನ ಗುಲ್ಬರ್ಗ್‌ನಲ್ಲಿ AQI 681 ಇದ್ದರೆ, ರೈವಿಂಡ್‌ನಲ್ಲಿ 626, ಅನಾರ್ಕಲಿ ಮಾರುಕಟ್ಟೆಯಲ್ಲಿ 541 ಮತ್ತು ಮಾಡೆಲ್ ಟೌನ್‌ನಲ್ಲಿ 532 ಮಟ್ಟ ದಾಖಲಾಗಿದೆ ಎಂದು SAMAA TV ವರದಿ ಮಾಡಿದೆ.

ಇತ್ತ ಪಾಕ್​ನ ಮತ್ತೊಂದು ನಗರವಾದ ಕರಾಚಿ ವಿಶ್ವದ ಅತ್ಯಂತ ಕಲುಷಿತ ನಗರಗಳ (most polluted cites in the world) ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕೂಡ ಹೊಗೆ ಆವರಿಸಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ಕೂಡ ಲಾಹೋರ್​ 'ವಿಶ್ವದ ಅತ್ಯಂತ ಕಲುಷಿತ ನಗರ' ಎಂಬ ಹಣೆಪಟ್ಟಿ ಪಡೆದಿತ್ತು.

ಭಾರತದ ರಾಜಧಾನಿ ದೆಹಲಿಯಲ್ಲಿ ಮೊನ್ನೆ ಮಂಗಳವಾರ 404 AQI ದಾಖಲಾಗಿದ್ದು, ಬುಧವಾರ 372ಕ್ಕೆ ಇಳಿಕೆಯಾಗಿದೆ. ಆದರೂ ದೆಹಲಿ ವಾಯು ಗುಣಮಟ್ಟ 'ಕಳಪೆ'ಯಾಗಿ ಉಳಿದಿದೆ.

ಏನಿದು ವಾಯು ಗುಣಮಟ್ಟ ಸೂಚ್ಯಂಕ (AQI)?

ವಾಯು ಗುಣಮಟ್ಟ ಸೂಚ್ಯಂಕವನ್ನು ಅಮೆರಿಕದ ಪರಿಸರ ಸಂರಕ್ಷಣಾ ಏಜೆನ್ಸಿ (EPA) ಪ್ರತಿ ವರ್ಷ ಬಿಡುಗಡೆ ಮಾಡುತ್ತದೆ. ತಮ್ಮ ಪ್ರದೇಶದ ಗಾಳಿಯು ಉಸಿರಾಡಲು ಸೂಕ್ತವೇ ಇಲ್ಲವೇ ಎಂಬ ಕಲ್ಪನೆಯನ್ನು ಜನರಿಗೆ ನೀಡುವುದು ಇದರ ಉದ್ದೇಶವಾಗಿದೆ. 0-500 ಪ್ರಮಾಣದಲ್ಲಿ ಗಾಳಿಯ ಗುಣಮಟ್ಟವನ್ನು ಅಳೆಯಲಾಗುತ್ತದೆ.

ವಾಯು ಗುಣಮಟ್ಟ ವಾಯು ಗುಣಮಟ್ಟ ಸೂಚ್ಯಂಕ (AQI)
0-50ಉತ್ತಮ
51-100 ತೃಪ್ತಿಕರ
101-150ಕೆಲ ಸೂಕ್ಷ್ಮ ವ್ಯಕ್ತಿಗಳಿಗೆ ಅನಾರೋಗ್ಯಕರ
151- 200ಎಲ್ಲರಿಗೂ ಅನಾರೋಗ್ಯಕರ
201-300ತೀವ್ರ ಅನಾರೋಗ್ಯಕರ
301ಕ್ಕೂ ಹೆಚ್ಚುಹೆಚ್ಚು ಅಪಾಯಕಾರಿ/ಕಳಪೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.