ETV Bharat / international

ವರ್ಷಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್ ಜಾಂಗ್​ ​- ಉನ್ ಪತ್ನಿ! - ರೊಡಾಂಗ್ ಸಿನ್ಮುನ್

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್​​ - ಉನ್ ಅವರ ಪತ್ನಿ ರಿ ಸೋಲ್-ಜು ಅವರು ಒಂದು ವರ್ಷಗಳ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ಆಡಳಿತಾರೂಢ ಕಾರ್ಮಿಕರ ಪಕ್ಷದ ಅಧಿಕೃತ ಪತ್ರಿಕೆ ರೊಡಾಂಗ್ ಸಿನ್ಮುನ್ ತಿಳಿಸಿದೆ.

Kim Jong-un's wife
ಕಿಮ್ ಜಾಂಗ್​​-ಉನ್ ಮತ್ತು ರಿ ಸೋಲ್-ಜು
author img

By

Published : Feb 17, 2021, 3:09 PM IST

ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್​​-ಉನ್ ಅವರ ಪತ್ನಿ ರಿ ಸೋಲ್-ಜು ಅವರು ಒಂದು ವರ್ಷದ ಅವಧಿಯಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ದಿವಂಗತ ನಾಯಕ ಕಿಮ್ ಜೊಂಗ್ - ಇಲ್ ಅವರ ಜನ್ಮದಿನದ ಸ್ಮರಣಾರ್ಥ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎಂದು ರಾಜ್ಯ ಮಾಧ್ಯಮ ಬುಧವಾರ ವರದಿ ಮಾಡಿದೆ.

ಮಂಗಳವಾರ, ಕಿಮ್ ಮತ್ತು ರಿ ಅವರು, ದಿವಂಗತ ನಾಯಕನ ಜನ್ಮದಿನದ ಸ್ಮರಣಾರ್ಥ ಮನ್ಸುಡೆ ಆರ್ಟ್ ಥಿಯೇಟರ್‌ನಲ್ಲಿ ನಡೆದ ಕಾರ್ಯಕ್ರಮ ವೀಕ್ಷಿಸಿದರು ಎಂದು ಆಡಳಿತಾರೂಢ ಕಾರ್ಮಿಕರ ಪಕ್ಷದ ಅಧಿಕೃತ ಪತ್ರಿಕೆ ರೊಡಾಂಗ್ ಸಿನ್ಮುನ್ ತಿಳಿಸಿದೆ.

ಇದನ್ನು ಓದಿ: ಮಾನವ ಹಕ್ಕುಗಳ ಉಲ್ಲಂಘನೆಯಾದ್ರೆ, ಚೀನಾ ಇದರ ಪರಿಣಾಮ ಎದುರಿಸಲಿದೆ: ಜೋ ಬೈಡನ್ ವಾರ್ನಿಂಗ್​

2019 ರಲ್ಲಿ, ಕಿಮ್ ಅವರೊಂದಿಗೆ ದೇಶದ ಅತ್ಯಂತ ಪವಿತ್ರ ಪರ್ವತಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಪೈಕ್ಡು ಪರ್ವತದ ಮೇಲೆ ಬಿಳಿ ಕುದುರೆಗಳ ಮೇಲೆ ಸವಾರಿ ಮಾಡುತ್ತಿದ್ದ ದೃಶ್ಯವು ಎಲ್ಲೆಡೆ ವೈರಲ್​ ಆಗಿತ್ತು. ಇನ್ನು ಕಳೆದ ವರ್ಷದ ಆರಂಭದಿಂದಲೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಅವರು ಗರ್ಭಿಣಿಯಾಗಬಹುದು ಅಥವಾ ಕೊರೊನಾಗೆ ತುತ್ತಾಗಿರಬಹುದು ಎಂಬೆಲ್ಲ ಅನೇಕ ವದಂತಿಗಳು ಹರಿದಾಡುತ್ತಿತ್ತು. ಆದರೆ, ಇದೀಗ ಮತ್ತೆ ಕಾಣಿಸಿಕೊಂಡಿದ್ದು, ಎಲ್ಲ ವದಂತಿಗಳಿಗೆ ತೆರೆ ಎಳೆದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.