ಸಿಯೋಲ್(ದಕ್ಷಿಣ ಕೊರಿಯಾ): ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಜೀವಂತವಾಗಿ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡುವ ಮೂಲಕ ಅವರ ಉನ್ನತ ಭದ್ರತಾ ಸಲಹೆಗಾರ, ಕಿಮ್ ಆರೋಗ್ಯ ಪರಿಸ್ಥಿತಿಯ ಬಗೆಗಿನ ವದಂತಿಗಳಿಗೆ ಪೂರ್ಣ ವಿರಾಮವಿಟ್ಟರು.
"ನಮ್ಮ ಸರ್ಕಾರವು ಸದೃಢವಾಗಿದೆ. ಕಿಮ್ ಜಾಂಗ್ ಉನ್ ಜೀವಂತವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ" ಎಂದು ವಿಶೇಷ ಸಲಹೆಗಾರ ಮೂನ್ ಚುಂಗ್-ಇನ್ ಭಾನುವಾರ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಏಪ್ರಿಲ್ 15 ದೇಶದ ರಾಜಕೀಯ ಕ್ಯಾಲೆಂಡರ್‌ನಲ್ಲಿ ಅತ್ಯಂತ ಪ್ರಮುಖವಾದ ದಿನವಾಗಿದೆ. ಅಂದು ಉತ್ತರದ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಜನ್ಮದಿನವಾಗಿದ್ದು, ಅಂದೇ ಕಿಮ್ ಗೈರುಹಾಜರಾಗಿದ್ದರಿಂದ ಅವರ ಆರೋಗ್ಯದ ಬಗ್ಗೆ ವದಂತಿಗಳು ಹರಡಿವೆ ಎಂದು ಅವರು ತಿಳಿಸಿದರು.
ಉತ್ತರ ಕೊರಿಯಾದ ಪಕ್ಷಾಂತರಕಾರರು ನಡೆಸುತ್ತಿರುವ ಆನ್‌ಲೈನ್ ಮಾಧ್ಯಮವಾದ ಡೈಲಿ ಎನ್‌ಕೆಯಲ್ಲಿ ಈ ತಿಂಗಳ ಆರಂಭದಲ್ಲಿ ಹೃದಯ ಸಂಬಂಧಿ ಚಿಕಿತ್ಸೆಗೆ ಒಳಪಟ್ಟ ನಂತರ ಕಿಮ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರೆದಿ ಮಾಡಿತ್ತು. ಅಷ್ಟೇ ಅಲ್ಲದೇ, ದೇಶದ ಅಪರಿಚಿತ ಮೂಲವೊಂದು 36ರ ಕಿಮ್ ಅತಿಯಾದ ಧೂಮಪಾನ, ಬೊಜ್ಜು ಮತ್ತು ಆಯಾಸದಿಂದಾಗಿ ತುರ್ತು ಚಿಕಿತ್ಸೆಯ ಅಗತ್ಯವಿತ್ತು ಎಂದು ಹೇಳಿತ್ತು. ಇವೆಲ್ಲವಕ್ಕೂ ಸದ್ಯ ಮೂನ್ ಚುಂಗ್-ಇನ್ ಸ್ಪಷ್ಟನೆ ನೀಡಿದ್ದಾರೆ.
ಒಂದೆರಡು ದಿನಗಳ ಹಿಂದೆಯಷ್ಟೇ ಕಿಮ್ ಚಿಕಿತ್ಸೆಗಾಗಿ ಚೀನಾ ವೈದ್ಯರು ಉತ್ತರ ಕೊರಿಯಾಕ್ಕೆ ಬಂದಿಳಿದಿದ್ದರು. ಈ ನಡುವೆಯೇ ಚೀನಾ ಹಾಗೂ ಜಪಾನ್ನ ಡಿಜಿಟಲ್ ಮೀಡಿಯಾಗಳು ಕಿಮ್ ಮೃತಪಟ್ಟಿದ್ದಾನೆ ಎಂದು ಸುದ್ದಿ ಬಿತ್ತರಿಸಿದ್ದವು. ಈ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಸರ್ಕಾರದ ಮೂಲಗಳು ಜಾಂಗ್ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿವೆ.