ETV Bharat / international

ಕಿಮ್ ಜಾಂಗ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ... ಜೀವಂತ ಶವವಾದ್ರಾ ಸರ್ವಾಧಿಕಾರಿ? - ಕಿಮ್ ಜಾಂಗ್ ಆರೋಗ್ಯ ಸ್ಥಿತಿ ಗಂಭೀರ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಈ ಹಿಂದಿಗಿಂತ ಗಂಭೀರವಾಗಿದೆ. ಈ ಹಿನ್ನೆಲೆ ಚೀನಾದ ವೈದ್ಯಕೀಯ ತಂಡವು ಉತ್ತರ ಕೊರಿಯಾಗೆ ಆಗಮಿಸುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

Kim Jong Un in 'vegetative state'
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
author img

By

Published : Apr 26, 2020, 10:58 AM IST

ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಈ ಹಿಂದಿಗಿಂತ ಗಂಭೀರವಾಗಿದೆ ಎಂದು ಜಪಾನಿನ ಮಾಧ್ಯಮಗಳು ವರದಿ ಮಾಡಿವೆ.

ಕಿಮ್ ಜಾಂಗ್​ರ ಸ್ಥಿತಿ ಗಂಭೀರವಾದ ಕಾರಣ ಚೀನಾದ ವೈದ್ಯಕೀಯ ತಂಡವು ಉತ್ತರ ಕೊರಿಯಾಗೆ ಬರುತ್ತಿದೆ ಎಂದು ವರದಿಯಾಗಿದೆ. ಇದಲ್ಲದೆ ಚೀನಾದ ಕಮ್ಯುನಿಸ್ಟ್ ಪಕ್ಷದ ಅಂತಾರಾಷ್ಟ್ರೀಯ ಸಂಪರ್ಕ ಇಲಾಖೆ ಕೂಡ ಗುರುವಾರ ಉತ್ತರ ಕೊರಿಯಾಗೆ ಪ್ರಯಾಣ ಬೆಳೆಸಿದೆ. ಈ ಕುರಿತು ವರದಿ ಮಾಡಿದ್ದ ಮೂಲಗಳು ಇದೀಗ ಕಿಮ್​​ರ ಆರೋಗ್ಯ ಸ್ಥಿತಿಗೂ, ಸಂಪರ್ಕ ಇಲಾಖೆಯ ಪ್ರವಾಸಕ್ಕೂ ಇರುವ ಸಂಬಂಧದ ಕುರಿತು ಮೌನ ವಹಿಸಿದೆ.

ಕಳೆದ ವಾರ ಹೃದಯ ಶಸ್ತ್ರಚಿಕಿತ್ಸೆಗೊಳಗಾದ ನಂತರ ಎಲ್ಲಿಯೂ ಕಿಮ್​ ಕಾಣಿಸದಿರುವುದು ಅನೇಕ ಊಹಾಪೋಹಗಳನ್ನು ಹುಟ್ಟು ಹಾಕಿದೆ. ಈ ಬಗ್ಗೆ ಅಮೆರಿಕಾ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕುತ್ತಿದ್ದು, ಯುಎಸ್​ನ ಅಧಿಕಾರಿಯೊಬ್ಬರು, ಶಸ್ತ್ರಚಿಕಿತ್ಸೆಯ ಬಳಿಕ ಕಿಮ್ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದರು. ಆದರೆ, ಉತ್ತರ ಕೊರಿಯಾ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡದ ಕಾರಣ ಕಿಮ್​ರ ಆರೋಗ್ಯದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.