ETV Bharat / international

ಜಪಾನ್ ಆಡಳಿತ ಪಕ್ಷದ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ಆರಂಭ: ಸುಗಾ ಬದಲಾವಣೆಗೆ ಕಸರತ್ತು - ಜಪಾನ್ ಆಡಳಿತ ಪಕ್ಷದಿಂದ ಅಧ್ಯಕ್ಷ ನೇಮಕಕ್ಕೆ ಚುನಾವಣೆ

ಜಪಾನ್​ನ ಆಡಳಿತ ಪಕ್ಷವಾದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ಅಧ್ಯಕ್ಷರ ಚುನಾವಣೆ ಈಗ ನಡೆಯುತ್ತಿದ್ದು, ಆಡಳಿತ ಪಕ್ಷದ ಅಧ್ಯಕ್ಷರೇ ಜಪಾನ್ ಪ್ರಧಾನಿಯಾಗುವ ಸಾಧ್ಯತೆ ಇದೆ.

Japan's ruling party to vote for new leader to replace Suga
ಜಪಾನ್ ಆಡಳಿತ ಪಕ್ಷದ ಅಧ್ಯಕ್ಷರ ನೇಮಕಕ್ಕೆ ಚುನಾವಣೆ: ಸುಗಾ ಬದಲಾವಣೆಗೆ ಕಸರತ್ತು
author img

By

Published : Sep 29, 2021, 12:20 PM IST

ಟೋಕಿಯೋ, ಜಪಾನ್: ಪ್ರಧಾನಮಂತ್ರಿಯ ಬದಲಾವಣೆ ಕಸರತ್ತು ಜಪಾನ್​ನಲ್ಲಿ ನಡೆಯುತ್ತಿದೆ. ಆಡಳಿತ ಪಕ್ಷವಾದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ(ಎಲ್​ಡಿಪಿ) ತನ್ನ ಅಧ್ಯಕ್ಷೀಯ ಚುನಾವಣೆಯನ್ನು ಆರಂಭಿಸಿದೆ.

ಸಾಮಾನ್ಯವಾಗಿ ಆಡಳಿತ ಪಕ್ಷದ ಅಧ್ಯಕ್ಷರೇ ಜಪಾನ್​ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಲಿದ್ದು, ಟಾರೋ ಕೊನೊ, ಪುಮಿಯೋ ಕಿಶಿಡಾ, ಸಾನೆ ಟಕೈಚಿ ಮತ್ತು ಸಿಯಾಕೊ ನೊಡ ಅವರು ಪ್ರಧಾನ ಮಂತ್ರಿ ಗಾದಿಗೆ ರೇಸ್​​ನಲ್ಲಿದ್ದಾರೆ.

ಎಲ್​ಡಿಪಿ ನೇತೃತ್ವದ ಮೈತ್ರಿಕೂಟ ಜಪಾನ್ ಪಾರ್ಲಿಮೆಂಟ್​ನ ಎರಡೂ ಸದನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಕ್ಟೋಬರ್ ನಾಲ್ಕರಂದು ಪಾರ್ಲಿಮೆಂಟ್ ಸದನ ನಡೆಯಲಿದ್ದು, ಪಕ್ಷದ ಅಧ್ಯಕ್ಷರು ಈಗಿರುವ ಪ್ರಧಾನಿ ಯೋಶಿಹಿಡೆ ಸುಗಾ ಅವರ ಉತ್ತರಾಧಿಕಾರಿಯಾಗಲಿದ್ದಾರೆ.

ಪ್ರಧಾನಿಯಾಗಿ ಆಯ್ಕೆಯಾಗುವವರಿಗೆ ಹೊಸ ಹೊಸ ಸವಾಲುಗಳು ಎದುರಾಗಲಿವೆ. ಕೋವಿಡ್ ಸಾಂಕ್ರಾಮಿಕ, ಆರ್ಥಿಕ ವ್ಯವಸ್ಥೆಯ ಚೇತರಿಕೆ, ಅಮೆರಿಕದೊಂದಿಗೆ ಸಂಬಂಧ ವೃದ್ಧಿ ಮತ್ತು ಪ್ರಾದೇಶಿಕ ಭದ್ರತಾ ಅಪಾಯಗಳನ್ನು ತಡೆಯುವುದು ಅತ್ಯಂತ ಪ್ರಮುಖ ಸವಾಲುಗಳಾಗಲಿವೆ.

ಇದನ್ನೂ ಓದಿ: ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಮೂವರ ಕಗ್ಗೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.