ETV Bharat / international

ಕೋವಿಡ್-19 ತುರ್ತು ಪರಿಸ್ಥಿತಿ ತೆಗೆದುಹಾಕಲು ನಿರ್ಧರಿಸಿದ ಜಪಾನ್ ಸರ್ಕಾರ

ಜಪಾನ್​ನ ಟೋಕಿಯೊ ಮತ್ತು ಅದರ ಪಕ್ಕದ ಚಿಬಾ, ಕನಗಾವಾ ಮತ್ತು ಸೈತಮಾ ಮತ್ತು ಉತ್ತರ ಹೊಕ್ಕೈಡೊ ಪ್ರದೇಶಗಳಲ್ಲಿ ಕೋವಿಡ್-19 ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ.

author img

By

Published : May 25, 2020, 1:49 PM IST

japan
japan

ಟೋಕಿಯೊ (ಜಪಾನ್): ಟೋಕಿಯೊ ಸೇರಿದಂತೆ ದೇಶದ ಇತರ ನಾಲ್ಕು ಭಾಗಗಳಲ್ಲಿ ಕೋವಿಡ್-19 ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲು ಜಪಾನ್ ಸರ್ಕಾರ ನಿರ್ಧರಿಸಿದೆ.

ಕೊರೊನಾ ವೈರಸ್ ಸಲಹಾ ಸಮಿತಿಯು ಈ ಕುರಿತು ನಿರ್ಧಾರ ಕೈಗೊಂಡಿದ್ದು, ಸರ್ಕಾರದ ಒಪ್ಪಿಗೆ ದೊರಕುವುದಷ್ಟೇ ಬಾಕಿಯಿದೆ ಎಂದು ಜಪಾನ್​ನ ಆರ್ಥಿಕ ಸಚಿವ ಯಸುತೋಶಿ ನಿಶಿಮುರಾ ಹೇಳಿದ್ದಾರೆ.

ಟೋಕಿಯೊ ಮತ್ತು ಅದರ ಪಕ್ಕದ ಚಿಬಾ, ಕನಗಾವಾ ಮತ್ತು ಸೈತಮಾ ಮತ್ತು ಉತ್ತರ ಹೊಕ್ಕೈಡೊದಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ.

ಅಲ್ಲಿನ ಸೋಂಕಿತರ ಸಂಖ್ಯೆ ಹಾಗೂ ಆರೋಗ್ಯ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೂ ಕೆಲವು ಮುಂಜಾಗೃತಾ ಕ್ರಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.