ರೋಮ್: ಕಳೆದ 24 ಗಂಟೆಗಳಲ್ಲಿ ಇಟಲಿಯಲ್ಲಿ 756 ಹಾಗೂ ಸ್ಪೇನ್ನಲ್ಲಿ 838 ಮಂದಿ ಕೊವಿಡ್-19ಗೆ ಬಲಿಯಾಗಿದ್ದಾರೆ.
ಇಟಲಿಯಲ್ಲಿ ಇಂದು ಹೊಸದಾಗಿ 5,217 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷದ ಸಮೀಪದಲ್ಲಿದೆ ಹಾಗೂ ಸಾವಿನ ಸಂಖ್ಯೆ 10,779ಕ್ಕೆ ಏರಿಕೆಯಾಗಿದೆ.
ಸ್ಪೇನ್ನಲ್ಲಿ ಈವರೆಗೆ ಒಟ್ಟು 6,528 ಮಂದಿ ಬಲಿಯಾಗಿದ್ದರೆ, 78,797 ಪ್ರಕರಣಗಳು ದೃಢಪಟ್ಟಿವೆ. ಮೃತರ ಸಂಖ್ಯೆಯಲ್ಲಿ ಇಟಲಿ, ಸ್ಪೇನ್ ನಂತರದ ಸ್ಥಾನದಲ್ಲಿ ಚೀನಾ (3,300 ಸಾವು), ಇರಾನ್ (2,640 ಸಾವು), ಅಮೆರಿಕ (2,236) ಇದೆ.
ಇಟಲಿಯಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷದ ಸಮೀಪದಲ್ಲಿದ್ದರೆ, ಅಮೆರಿಕದಲ್ಲಿ ಲಕ್ಷ ಗಡಿ ದಾಟಿದ್ದು, ಒಟ್ಟು 1,24,236 ಪ್ರಕರಣಗಳು ವರದಿಯಾಗಿದೆ.