ಅಫ್ಘಾನಿಸ್ತಾನ್ (ಕಾಬೂಲ್): ಆಫ್ಘನ್ನಲ್ಲಿರುವ ತನ್ನ ಪ್ರಜೆಗಳಿಗೆ ಭದ್ರತಾ ಸಲಹೆ ಬಿಡುಗಡೆ ಮಾಡುವಂತೆ ಅಮೆರಿಕಕ್ಕೆ ಐಸಿಸ್ ಉಗ್ರರು ಬೆದರಿಕೆ ಹಾಕಿದ್ದಾರೆ ಎಂದು ಅಂತಾರಾಷ್ಟ್ರೀಯ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಸರ್ಕಾರದಿಂದ ಸೂಕ್ತ ಸೂಚನೆ ಪಡೆಯದ ಹೊರತು ಕಾಬೂಲ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವುದನ್ನು ನಿಯಂತ್ರಿಸಬೇಕು ಎಂದು ಉಗ್ರರು ಆಗ್ರಹಿಸಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಯುಎಸ್ ಪ್ರಜೆಗಳಿಗೆ ವಿಮಾನ ನಿಲ್ದಾಣ ಬಳಿ ಬರದಂತೆ ಸೂಚಿಸುತ್ತೇವೆ. ಅಲ್ಲದೆ ಅಮೆರಿಕ ಸರ್ಕಾರದಿಂದ ವೈಯಕ್ತಿಕವಾಗಿ ಸೂಚನೆ ಸಿಗದಿದ್ದರೆ ಅಂಥವರು ವಿಮಾನ ನಿಲ್ದಾಣದ ಬಳಿ ಬರಬಾರದು ಎಂದು ಕಾಬೂಲ್ನಲ್ಲಿರುವ ಯುಎಸ್ ರಾಯಭಾರ ಕಚೇರಿ ಸಹ ತಿಳಿಸಿದೆ.
ಆಫ್ಘನ್ ನೆಲದಲ್ಲಿ ಉಗ್ರ ಸಂಘಟನೆ ಅಲ್ಖೈದಾ ಇರುವಿಕೆಯನ್ನ ಯುಎಸ್ ಒಪ್ಪಿಕೊಂಡಿದೆ. ಈ ಕುರಿತಂತೆ ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಮಾಹಿತಿ ನೀಡಿದ್ದು, ಅಲ್ಖೈದಾ ಇರುವಿಕೆಯಿಂದ 20 ವರ್ಷಗಳ ಹಿಂದೆ ನಮಗೆ ಅಪಾಯ ಉಂಟುಮಾಡುವಷ್ಟು ಬಲಿಷ್ಠವಾಗಿರಲಿಲ್ಲ. ಆದರೆ ಅಫ್ಘಾನಿಸ್ತಾನ ಉಗ್ರರ ನೆಲೆಯಾಗಿ ಮುಂದೆ ಪರಿವರ್ತನೆಯಾಗಬಹುದು ಎಂದು ತಜ್ಞರು ಆತಂಕ ಹೊರಹಾಕಿದ್ದಾರೆ.
ಜೊತೆಗೆ ಅಮೆರಿಕ ಆಗಸ್ಟ್ 14ರ ಬಳಿಕ ಸುಮಾರು 17 ಸಾವಿರ ನಾಗರಿಕರನ್ನು ಆಫ್ಘನ್ ನೆಲದಿಂದ ಸ್ಥಳಾಂತರಿಸಿದೆ. ಜತೆಗೆ ಜುಲೈನಿಂದ ಈವರೆಗೆ 22 ಸಾವಿರ ಮಂದಿಯನ್ನ ಸ್ಥಳಾಂತರಿಸಿರುವ ಬಗ್ಗೆ ಮಾಹಿತಿ ಇದೆ.
ಇತ್ತ ಐಎಸ್ಐಎಸ್ನಿಂದ ಹೊಸ ಬೆದರಿಕೆಯ ಹಿನ್ನೆಲೆ ಅಮೆರಿಕ ತನ್ನ ಪ್ರಜೆಗಳ ರಕ್ಷಣೆಗೆ ಮುಂದಾಗಿದೆ. ಪರಿಣಾಮ ಕೆಲ ಗುಂಪುಗಳಿಗೆ ನಿರ್ಧಿಷ್ಟವಾದ ಸೂಚನೆ ನೀಡಲು ಮುಂದಾಗಿದ್ದು, ಸ್ಥಳಾಂತರಕ್ಕೂ ಮೊದಲು ಯಾವೆಲ್ಲಾ ನಿಯಮ ಪಾಲಿಸಬೇಕು ಎಂಬುದನ್ನು ಈಗಾಗಲೇ ತಿಳಿಸಿದೆ ಎನ್ನಲಾಗ್ತಿದೆ.
ಆದರೆ ಐಸಿಸ್ನ ಬೆದರಿಕೆ ಕುರಿತಂತೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ ಆದರೆ ಯುಎಸ್ ಪ್ರಜೆಗಳಿಗೆ ಹೊಸ ಭದ್ರತಾ ಸಲಹೆ ನೀಡುವುದು ಮಹತ್ವದ್ದಾಗಿದೆ ಎಂದಿದ್ದಾರೆ. ಆಫ್ಘನ್ನಲ್ಲಿ ಉಳಿದಿರುವ ಯುಎಸ್ ಸೇನೆಯನ್ನ ಹಿಂಪಡೆಯುವ ಗಡುವು ಆಗಸ್ಟ್ 31ಕ್ಕೆ ಮುಗಿಯಲಿದೆ. ಈ ದಿನಾಂಕ ವಿಸ್ತರಣೆ ಕುರಿತಂತೆ ಅಧ್ಯಕ್ಷ ಜೋ ಬೈಡನ್ ಈವರೆಗೂ ಯಾವುದೇ ಸುಳಿವು ಸಹ ನೀಡಿಲ್ಲ. ಆದರೆ ಆಫ್ಘನ್ನಲ್ಲಿರುವ ಎಲ್ಲಾ ಅಮೆರಿಕನ್ನರು ಮಾತ್ರವಲ್ಲದೆ 2001ರಿಂದ ತಾಲಿಬಾನ್ ವಿರುದ್ಧದ ಯುದ್ಧಕ್ಕಾಗಿ ಸಹಕರಿಸಿದವರನ್ನೂ ಸ್ಥಳಾಂತರಿಸುವ ಆಶ್ವಾಸನೆ ನೀಡಿದೆ.
ಇಸ್ಲಾಮಿಕ್ ಸ್ಟೇಟ್ ಸ್ಥಾಪನೆಯ ನೆಪದಲ್ಲಿ ದಾಳಿ ನಡೆಸುತ್ತಿರುವ ಐಸಿಸ್ ಆಫ್ಘನ್ನಲ್ಲಿ ಹಲವು ವರ್ಷಗಳಿಂದಲೂ ಸಕ್ರಿಯವಾಗಿದೆ. ಆಗಾಗ್ಗೆ ಭಯಾನಕ ದಾಳಿಯ ಮೂಲಕ ಅಮೆರಿಕಕ್ಕೂ ಬೆದರಿಕೆ ಒಡ್ಡುತ್ತಿದೆ. ಆಫ್ಘನ್ನಲ್ಲಿ ಗುಂಪು ಗುಂಪಾಗಿ ಈ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಆಫ್ಘನ್ ತಾಲಿಬಾನ್ ವಶದಲ್ಲಿದ್ದು, ಈ ಗುಂಪುಗಳು ಮತ್ತೆ ಸಕ್ರಿಯವಾಗಲಿವೆ. ಜೊತೆಗೆ ದೊಡ್ಡ ರೀತಿಯಲ್ಲಿ ಗುಂಪನ್ನು ಪುನರ್ ರಚಿಸಲು ಮುಂದಾಗಲಿವೆ ಎಂಬ ಆತಂಕ ಎದುರಾಗಿದೆ.
ಓದಿ: ಅಫ್ಘನ್ನಿಂದ ಇಂದು 300 ಮಂದಿ ಭಾರತೀಯರು ಸ್ವದೇಶಕ್ಕೆ ಮರಳುವ ಸಾಧ್ಯತೆ