ETV Bharat / international

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ 1 ತಿಂಗಳ ಅಧ್ಯಕ್ಷ ಅವಧಿ ಮುಕ್ತಾಯ - ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ

ಹಲವು ಪ್ರಮುಖ ನಿರ್ಣಯಗಳೊಂದಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 1 ತಿಂಗಳ ಭಾರತದ ಅಧ್ಯಕ್ಷ ಅವಧಿ ನಿನ್ನೆ ಕೊನೆಗೊಂಡಿದೆ. ಭಾರತದ ಅಧ್ಯಕ್ಷತೆಯಲ್ಲಿ ಕೈಗೊಂಡ ನಿರ್ಧಾರಗಳಿಗೆ ಬೆಂಬಲ ನೀಡಿದ ಸದಸ್ಯ ರಾಷ್ಟ್ರಗಳಿಗೆ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್ ತಿರುಮೂರ್ತಿ ಧನ್ಯವಾದ ತಿಳಿಸಿದ್ದಾರೆ. ಮುಂಬರುವ ಅಧ್ಯಕ್ಷ ರಾಷ್ಟ್ರಕ್ಕೂ ಇದೇ ವೇಳೆ ಅವರು ಶುಭ ಹಾರೈಸಿದ್ದಾರೆ.

India's month-long Presidency of powerful UNSC ends with 'substantive' outcomes on key global issues
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ 1 ತಿಂಗಳ ಅಧ್ಯಕ್ಷ ಅವಧಿ ಮುಕ್ತಾಯ
author img

By

Published : Sep 1, 2021, 1:34 PM IST

ನ್ಯೂಯಾರ್ಕ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಅಧ್ಯಕ್ಷತೆ ಅವಧಿ ಅಂತ್ಯವಾಗಿದೆ. ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿಯ ಬಗ್ಗೆ ಪ್ರಮುಖ ನಿರ್ಣಯ ಅಂಗೀಕಾರ ಸೇರಿದಂತೆ ಜಾಗತಿಕ ಮಟ್ಟದ ಹಲವು ಪ್ರಮುಖ ನಿರ್ಧಾರಗಳನ್ನು ಭಾರತ ತನ್ನ ಅಧಿಕಾರದ ಅವಧಿಯಲ್ಲಿ ಕೈಗೊಂಡಿತ್ತು. ಯಾವುದೇ ದೇಶವನ್ನು ಬೆದರಿಸಲು ಅಥವಾ ಭಯೋತ್ಪಾದಕರಿಗೆ ಆಶ್ರಯ ನೀಡಲು ಆಫ್ಘನ್‌ ರಾಷ್ಟ್ರವನ್ನು ಬಳಸಬಾರದೆಂಬ ನಿರ್ಣಯವನ್ನು 13 ರಾಷ್ಟ್ರಗಳು ಬೆಂಬಲಿಸಿದ್ದವು.

15 ರಾಷ್ಟ್ರಗಳ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯರಾಗಿ ಪ್ರಸ್ತುತ ಎರಡು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಿರುವ ಭಾರತವು, ರೋಟಿನ್‌ನಂತೆ ಆಗಸ್ಟ್‌ನಲ್ಲಿ ವಿಶ್ವಸಂಸ್ಥೆಯ ಅಧ್ಯಕ್ಷತೆ ವಹಿಸಿಕೊಂಡಿತ್ತು.

ಭಾರತದ ಅಧ್ಯಕ್ಷತೆಯ ಅವಧಿಯ ಅಂತಿಮ ದಿನದಂದೇ ತಾಲಿಬಾನ್‌ಗಳು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದಿದ್ದಾರೆ. ಆಗಸ್ಟ್‌ 30ರ ತಡರಾತ್ರಿಯೇ ಅಮೆರಿಕ ಸೇನೆ ಪೂರ್ಣವಾಗಿ ಕಾಬೂಲ್‌ನಿಂದ ನಿರ್ಗಮಿಸಿತ್ತು. ಹೀಗಾಗಿ ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಭದ್ರತಾ ಮಂಡಳಿಯಲ್ಲಿ ನಿರ್ಣಯ ಕೈಗೊಂಡಿದೆ. ಇದಕ್ಕೆ ಅಮೆರಿಕ, ಬ್ರಿಟನ್‌ ಸೇರಿದಂತೆ 13 ರಾಷ್ಟ್ರಗಳು ಬೆಂಬಲ ಘೋಷಿಸಿದವು. ರಷ್ಯಾ, ಚೀನಾ ನಿರ್ಯಣದಿಂದ ದೂರ ಉಳಿದವು.

ಇದನ್ನೂ ಓದಿ: ಅಫ್ಘಾನ್‌ ನೆಲ ಬಳಸಿ ನೆರೆ ದೇಶಗಳ ಮೇಲೆ ದಾಳಿ ಮಾಡುವಂತಿಲ್ಲ: ವಿಶ್ವಸಂಸ್ಥೆ ನಿರ್ಣಯ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಮ್ಮ ಅಧ್ಯಕ್ಷತೆಯ ಅವಧಿಯನ್ನು ಹಲವು ಮಹತ್ವದ ನಿರ್ಧಾರಗಳೊಂದಿಗೆ ಮುಗಿಸಿದ್ದೇವೆ. ಇದಕ್ಕೆ ಬೆಂಬಲ ನೀಡಿದ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್ ತಿರುಮೂರ್ತಿ ಟ್ವೀಟ್ ಮಾಡಿದ್ದಾರೆ. ಮುಂದೆ ಬರುವ ಐರ್ಲೆಂಡ್‌ ಪ್ರತಿನಿಧಿ ಅಂಬ್ ಜೆರಾಲ್ಡಿನ್ ನ್ಯಾಸನ್ ಅವರಿಗೆ ಎಲ್ಲಾ ರೀತಿಯ ಯಶಸ್ಸಿಗೆ ಬಯಸುತ್ತೇವೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿ ಲಿಂಡಾ ಥಾಮಸ್ - ಗ್ರೀನ್‌ಫೀಲ್ಡ್, ಆಗಸ್ಟ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ಯಶಸ್ವಿಗೊಳಿಸಿದ್ದಕ್ಕಾಗಿ ಭಾರತವನ್ನು ಅಭಿನಂದಿಸುತ್ತೇನೆ. ಆಫ್ಘನ್ ಪರಿಸ್ಥಿತಿ ಸೇರಿದಂತೆ ನಿಮ್ಮ ನಾಯಕತ್ವ ಅನೇಕ ಸವಾಲಿನ ಸಮಸ್ಯೆಗಳಿಗೆ ಪರಿಹಾರದ ನಿಟ್ಟಿನಲ್ಲಿ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.

ಆಗಸ್ಟ್‌ನಲ್ಲಿ ಯುಎನ್‌ಎಸ್‌ಸಿಯ ಅಧ್ಯಕ್ಷತೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತಕ್ಕೆ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕಡಲ ಭದ್ರತೆಯ ಸಭೆ, ಶಾಂತಿ ಪಾಲನೆ, ತಂತ್ರಜ್ಞಾನ ಹಾಗೂ ಭಯೋತ್ಪಾದನೆ ವಿರುದ್ಧದ ಮೇಲೆ ಗಮನ ಕೇಂದ್ರೀಕರಿಸಿತ್ತು ಎಂದು ಐರ್ಲೆಂಡ್‌ ನೆನಪಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.