ETV Bharat / international

ISIS - Kನಲ್ಲೂ ಇದ್ದಾರೆ ಭಾರತೀಯರು: ಕಮಾಂಡರ್​ ಹೇಳಿಕೆಯಿಂದ ಬಹಿರಂಗವಾದ ಮಾಹಿತಿ

author img

By

Published : Aug 31, 2021, 2:43 PM IST

Updated : Aug 31, 2021, 5:27 PM IST

ಭಾರತೀಯರು ಪಾಕಿಸ್ತಾನ ಮತ್ತು ಸೆಂಟ್ರಲ್ ಏಷಿಯಾದವರ ಮನಸ್ಥಿತಿಯನ್ನೇ ಹೊಂದಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ನಮ್ಮ ಸಂಘಟನೆಯಲ್ಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಭಾರತದ ಸರ್ಕಾರದ ಬಳಿ ಇಲ್ಲ ಎಂದು ಕಮಾಂಡರ್ ಹೇಳಿದ್ದನು.

indians-in-isis-k-much-more-than-official-numbers
ಐಸಿಸ್​-ಕೆಯಲ್ಲೂ ಇದ್ದಾರೆ ಭಾರತೀಯರು: ಕಮಾಂಡರ್​ ಹೇಳಿಕೆಯಿಂದ ಬಹಿರಂಗವಾದ ಮಾಹಿತಿ

ನವದೆಹಲಿ: ಇತ್ತೀಚೆಗೆ ಐಸಿಸ್​​-ಕೆ ಸಂಘಟನೆಯ ಓರ್ವ ಕಮಾಂಡರ್​ ಕಾಬೂಲ್​​ನ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೆಯೊಂದು ವೈರಲ್​ ಆಗಿತ್ತು. ಆತ್ಮಾಹುತಿ ದಾಳಿಗೆ ಸಂಬಂಧಿಸಿದಂತೆ ಮಾತನಾಡಿದ್ದ ಕಮಾಂಡರ್ ತಾನು 600 ಮಂದಿಯನ್ನು ಒಳಗೊಂಡ ಸದಸ್ಯರ ಗುಂಪನ್ನು ಮುನ್ನಡೆಸುತ್ತಿರುವುದಾಗಿ ಹೇಳಿಕೆ ನೀಡಿದ್ದನು.

ಇದೇ ವೇಳೆ, ತನ್ನ ಸಂಘಟನೆಯಲ್ಲಿ ಭಾರತದವರು, ಪಾಕಿಸ್ತಾನಿಯರು ಮತ್ತು ಮಧ್ಯ ಏಷಿಯಾದ ಇರುವುದಾಗಿ ಹೇಳಿದ್ದನು. ಅದರಲ್ಲೂ ಹೆಚ್ಚಿನ ಮಂದಿ ಭಾರತೀಯರು ಇರುವುದಾಗಿ ಆ ಕಮಾಂಡರ್​ ಮಾಹಿತಿ ನೀಡಿದ್ದನು.

ಭಾರತೀಯರು ಪಾಕಿಸ್ತಾನ ಮತ್ತು ಸೆಂಟ್ರಲ್ ಏಷಿಯಾದವರ ಮನಸ್ಥಿತಿಯನ್ನೇ ಹೊಂದಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ನಮ್ಮ ಸಂಘಟನೆಯಲ್ಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಭಾರತದ ಸರ್ಕಾರದ ಬಳಿ ಇಲ್ಲ ಎಂದು ಕಮಾಂಡರ್ ಹೇಳಿದ್ದನು.

ತಾಲಿಬಾನ್​ಗೆ ಹೋಲಿಸಿದರೆ, ಐಸಿಸ್​ ಅತ್ಯಂತ ಶಿಸ್ತಿನ ಮತ್ತು ತೀವ್ರವಾದ ಕಟ್ಟುನಿಟ್ಟಿನ ಇಸ್ಲಾಂ ಧರ್ಮವನ್ನು ಪಾಲಿಸುತ್ತಿದೆ. ಐಸಿಸ್​​ನ ಅಂಗವಾದ ಐಎಸ್ ​ - ಕೆ ಕಾಬೂಲ್​ನ ಹಮೀದ್ ಕರ್ಜೈ ಇಂಟರ್​ನ್ಯಾಷನಲ್​ ಏರ್ಪೋರ್ಟ್​​ನ ಸ್ಫೋಟದ ಹೊಣೆ ಹೊತ್ತಿದೆ.

ಹಿಂದಿನ ವರ್ಷ ಕಾಬೂಲ್​ನಲ್ಲಿರುವ ಆಫ್ಘನ್ ಇನ್ಸ್​ಟಿಟ್ಯೂಟ್​ ಫಾರ್​ ಸ್ಟ್ರಾಟೆಜಿಕ್ ಸ್ಟಡೀಸ್​ (ಎಐಎಸ್​ಎಸ್​) ಒಂದು ಗಂಭೀರ ಮಾಹಿತಿ ಹೊರಹಾಕಿತ್ತು. ಈ ಮಾಹಿತಿಯ ಪ್ರಕಾರ ಭಾರತದ ಪಂಜಾಬ್​ನ ಐಟಿ ತಜ್ಞರು ಐಎಸ್ ​ ​-ಕೆ ಸಂಘಟನೆಗೆ ಸೇರ್ಪಡೆಯಾಗಿದ್ದರು.

ಈ ವರದಿಯಲ್ಲಿ ಹಣಕ್ಕಾಗಿ ಭಾರತದ ಪಂಜಾಬ್​ನ ಓರ್ವ ಐಟಿ ಉದ್ಯೋಗಿ ತನ್ನ ಕೆಲಸ ತೊರೆದು, ಐಎಸ್​ - ಕೆ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದನು ಎಂದು ಓರ್ವ ಮಹಿಳೆಯ ತನ್ನ ಪತಿಯ ಕುರಿತು ಹೇಳಿಕೊಂಡಿದ್ದಳು.

ಆದರೆ, ಭಾರತದ ಅಧಿಕೃತ ದಾಖಲೆಗಳ ಪ್ರಕಾರ, ಪಂಜಾಬ್​ನಿಂದ ಐಎಸ್ ​ - ಕೆ ಸಂಘಟನೆಗೆ ಕೆಲಸ ಮಾಡುತ್ತಿದ್ದ ಓರ್ವ ಐಟಿ ಉದ್ಯೋಗಿಯೂ ಕೂಡಾ ಇರಲಿಲ್ಲ. ಐಎಸ್​-ಕೆ ಒಂದು ತಿಂಗಳಿಗೆ 500 ಡಾಲರ್ ( 30 ಸಾವಿರ ರೂಪಾಯಿ) ವೇತನ ನೀಡುತ್ತಿತ್ತು. ಇದರ ಜೊತೆಗೆ ಭಾರತದಿಂದ ಹೊಸದಾಗಿ ಸಂಘಟನೆಗೆ ಸೇರ್ಪಡೆಯಾದವರಿಗೆ ಲ್ಯಾಪ್​ಟಾಪ್​ ನೀಡುತ್ತಿತ್ತು.

ಈ ವೇತನ ಮತ್ತು ಸೌಲಭ್ಯ ಭಾರತೀಯರು ಸ್ವಲ್ಪ ಮಟ್ಟಿಗೆ ಐಎಸ್-ಕೆ ಸಂಘಟನೆಯತ್ತ ಒಲವು ತೊರಲು ಕಾರಣವಾಗಿದೆ ಎನ್ನಲಾಗಿದೆ. ಇದರಿಂದಾಗಿ ಭಾರತ ಅಂದುಕೊಂಡ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರು ಐಎಸ್​-ಕೆ ಸಂಘಟನೆಯಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Supertech ಕಂಪನಿಯ 40 ಅಂತಸ್ತಿನ ಅವಳಿ ಕಟ್ಟಡಗಳ ನೆಲಸಮಕ್ಕೆ ಸುಪ್ರೀಂ ಆದೇಶ

Last Updated : Aug 31, 2021, 5:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.