ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ರಕ್ಷಣಾ ಕಾರ್ಯಾಚರಣೆ ಮುಂದುವರಿದ್ದು, ತಜಿಕಿಸ್ತಾನದ ದುಶಾಂಬೆಯಿಂದ 25 ಭಾರತೀಯರು ಸೇರಿದಂತೆ 78 ಮಂದಿಯನ್ನು ಹೊತ್ತ ವಾಯುಸೇನೆಯ ಎಐ-1956 ವಿಮಾನ ದೆಹಲಿಗೆ ಆಗಮಿಸಿದೆ.
ವಿಮಾನದಲ್ಲಿರುವ ಭಾರತೀಯರು 'ಜೋ ಬೋಲೆ ಸೋ ನಿಹಾಲ್ ಸತ್ ಶ್ರೀ ಅಕಲ್ ಹಾಗೂ ವಹೇಗುರು ಜಿ ಕಾ ಖಲ್ಸಾ ವಹೇಗುರು ಜಿ ಕಿ ಫತೇಹ್' ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಭಾರತೀಯರನ್ನು ಕರೆತಂದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಟ್ವೀಟ್ ಮೂಲಕ ಮಾಹಿತಿ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
- — Arindam Bagchi (@MEAIndia) August 24, 2021 " class="align-text-top noRightClick twitterSection" data="
— Arindam Bagchi (@MEAIndia) August 24, 2021
">— Arindam Bagchi (@MEAIndia) August 24, 2021
ಇದನ್ನೂ ಓದಿ: ಆಗಸ್ಟ್ 31ರೊಳಗೆ ಅಫ್ಘಾನ್‌ನಿಂದ ಅಮೆರಿಕ ಸೇನೆ ವಾಪಸ್ ಪಡೆದರೆ ಅಲ್ಲಿನ ಜನರ ಪಾಡೇನು?
ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ, ವಿದೇಶಾಂಗ ವ್ಯವಹಾರಗಳ ಇಲಾಖೆ ರಾಜ್ಯಖಾತೆ ಸಚಿವ ಮುರಳೀಧರನ್ ಮತ್ತು ಬಿಜೆಪಿ ನಾಯಕ ಆರ್.ಪಿ.ಸಿಂಗ್ ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಬೂಲ್ ನಿಂದ ವಿಮಾನ ಮೂಲಕ ತಂದ ಸಿಖ್ಖರ ಪವಿತ್ರ ಗ್ರಂಥ ಗುರುಗ್ರಂಥ ಸಾಹಿಬ್‌ನ ಸ್ವರೂಪ್ ಅನ್ನು ಸ್ವೀಕರಿಸಿದರು.