ಜೆರುಸಲೇಂ(ಇಸ್ರೇಲ್): 2021ರ ಭುವನ ಸುಂದರಿ ಪಟ್ಟ ಭಾರತಕ್ಕೆ ಒಲಿದಿದೆ. ಪಂಜಾಬ್ನ ಹರ್ನಾಝ್ ಸಂಧು ಮಿಸ್ ಯುನಿವರ್ಸ್ ಆಗಿ ಹೊರಹೊಮ್ಮಿದ್ದಾರೆ. 70ನೇ ವಿಶ್ವ ಸುಂದರಿ ಸ್ಪರ್ಧೆಯು ಇಸ್ರೇಲ್‌ನ ದಕ್ಷಿಣ ನಗರವಾದ ಇಲಾಟ್‌ನಲ್ಲಿ ನಡೆಯಿತು. 80 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಭಾರತದ ಹರ್ನಾಝ್ (21) ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಪರಾಗ್ವೆಯ 22 ವರ್ಷದ ನಾಡಿಯಾ ಫೆರೇರಾ ಎರಡನೇ ಸ್ಥಾನ ಪಡೆದರೆ, ದಕ್ಷಿಣ ಆಫ್ರಿಕಾದ 24 ವರ್ಷದ ಲಲೆಲಾ ಮ್ಸ್ವಾನೆ ಮೂರನೇ ಸ್ಥಾನ ಪಡೆದರು.
Miss Universe 2021: 21 ವರ್ಷಗಳ ಬಳಿಕ ಮಿಸ್ ಯುನಿವರ್ಸ್ ಕಿರೀಟ ಒಲಿದಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಮಾಡೆಲ್ ಆಗಿರುವ ಹರ್ನಾಝ್ ಸಂಧು ಚಂಡೀಗಢದವರು. ತಮ್ಮ ಆರಂಭಿಕ ಶಿಕ್ಷಣವನ್ನು ಚಂಡೀಗಢದ ಶಿವಾಲಿಕ್ ಪಬ್ಲಿಕ್ ಸ್ಕೂಲ್‌ನಲ್ಲಿ ಮುಗಿಸಿದ ಈ ಸುಂದರಿ, ಚಂಡೀಗಢದಲ್ಲಿಯೇ ಪದವಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ, 2017 ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ, 2018 ರಲ್ಲಿ ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್, 2019 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪಂಜಾಬ್ ಮತ್ತು 2021 ರಲ್ಲಿ ಲಿವಾ ಮಿಸ್ ದಿವಾ ಮಿಸ್ ಯೂನಿವರ್ಸ್ ಇಂಡಿಯಾ ಆಗಿ ಹೊರ ಹೊಮ್ಮಿದ್ದಾರೆ.
ಭುವನ ಸುಂದರಿ ಸಂಧು ಅವರು "ಯಾರ ದಿಯಾನ್ ಪೂ ಬರನ್" ಮತ್ತು "ಬಾಯಿ ಜಿ ಕುಟ್ಟಂಗೆ" ಸೇರಿದಂತೆ ಕೆಲವು ಪಂಜಾಬಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಸಂಧು ಅವರಿಗಿಂತ ಮೊದಲು ಇಬ್ಬರು ಭಾರತೀಯರು ಮಾತ್ರ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ನಟಿ ಸುಶ್ಮಿತಾ ಸೇನ್ 1994 ರಲ್ಲಿ ಮತ್ತು ಲಾರಾ ದತ್ತಾ 2000 ರಲ್ಲಿ ಭುವನ ಸುಂದರಿ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.
-
The new Miss Universe is...India!!!! #MISSUNIVERSE pic.twitter.com/DTiOKzTHl4
— Miss Universe (@MissUniverse) December 13, 2021 " class="align-text-top noRightClick twitterSection" data="
">The new Miss Universe is...India!!!! #MISSUNIVERSE pic.twitter.com/DTiOKzTHl4
— Miss Universe (@MissUniverse) December 13, 2021The new Miss Universe is...India!!!! #MISSUNIVERSE pic.twitter.com/DTiOKzTHl4
— Miss Universe (@MissUniverse) December 13, 2021