ಮಾಸ್ಕೋ: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾ ರಕ್ಷಣಾ ಮಂತ್ರಿ ವೀ ಫೆಂಗ್ ರಷ್ಯಾದ ರಾಜಧಾನಿಯಲ್ಲಿ ಭೇಟಿಯಾಗಿ ಉಭಯ ರಾಷ್ಟ್ರಗಳ ಗಡಿ ಉದ್ವಿಗ್ನತೆ ಬಗ್ಗೆ ಚರ್ಚಿಸಿದ್ದು, ಮಾತುಕತೆ ಮೂಲಕ ಉಲ್ಬಣಗೊಂಡ ಪರಿಸ್ಥಿತಿ ತಿಳಿಯಾಗಿಸಲು ಒಪ್ಪಿದ್ದಾರೆ.
ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ ಪ್ರಾರಂಭವಾದ ಭಾರತ ಮತ್ತು ಚೀನಾ ನಿಯೋಗಗಳ ನಡುವಿನ ಎರಡು ಗಂಟೆಗಳ ಸಭೆಯಲ್ಲಿ ಗಡಿ ವಿವಾದಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. ಗಡಿಯಲ್ಲಿ ಉದ್ವಿಗ್ನತೆ ಪ್ರಾರಂಭವಾದ ನಂತರ ಇದು ಮೊದಲ ರಾಜಕೀಯ ಸಂವಾದವಾಗಿದೆ.
ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ), ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆ (ಸಿಎಸ್‌ಟಿಒ) ಮತ್ತು ಕಾಮನ್‌ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (ಸಿಐಎಸ್) ಜಂಟಿಯಾಗಿ ಸಭೆಯಲ್ಲಿ ಭಾಗವಹಿಸಿದ್ದು, ಭಾರತದ ಇಬ್ಬರು ಸಚಿವರು ಸಹ ಮಾಸ್ಕೋದಲ್ಲಿದ್ದಾರೆ.
ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಯ ವಾತಾವರಣ, ಆಕ್ರಮಣಶೀಲತೆ, ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ಪರಿಹಾರ ಮತ್ತು ಅಂತಾರಾಷ್ಟ್ರೀಯ ನಿಯಮಗಳನ್ನು ಗೌರವಿಸುವ ವಾತಾವರಣವನ್ನು ಭಾರತ ಬಯಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಗಡಿಯಲ್ಲಿ ಭಾರತ ಜಾಗತಿಕ ಭದ್ರತಾ ನಿಯಮಗಳಿಗೆ ಬದ್ಧವಾಗಿದೆ. ಮುಕ್ತ, ಪಾರದರ್ಶಕ, ಅಂತರ್ಗತ, ನಿಯಮ ಆಧಾರಿತ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಅಡಿ ಸೇನೆ ನಿಯೋಜನೆ ಮಾಡಲಾಗಿದೆ ಎಂದರು.
ಜಾಗತಿಕ ಜನಸಂಖ್ಯೆಯಲ್ಲಿ ಶೇ. 40ಕ್ಕಿಂತಲೂ ಹೆಚ್ಚಿರುವ ಎಸ್‌ಸಿಒ ಸದಸ್ಯ ರಾಷ್ಟ್ರಗಳ ಜನರು ಶಾಂತಿಯುತ ಸ್ಥಿರ ಮತ್ತು ಸುರಕ್ಷಿತ ಪ್ರದೇಶದ ನಂಬಿಕೆ ಮತ್ತು ಸಹಕಾರದ ವಾತಾವರಣದಲ್ಲಿ ಬದುಕಬೇಕು. ಆಕ್ರಮಣಶೀಲತೆ, ಅಂತಾರಾಷ್ಟ್ರೀಯ ನಿಯಮಗಳು ಮತ್ತು ರೂಢಿಗಳನ್ನು ಗೌರವಿಸಿ, ಪರಸ್ಪರರ ಹಿತಾಸಕ್ತಿ ಮತ್ತು ಶಾಂತಿಯುತ ಬಾಳ್ವೆ ಮಾಡಬೇಕು ಎಂದು ಚೀನಾದ ರಕ್ಷಣಾ ಸಚಿವರ ಸಮ್ಮುಖದಲ್ಲಿ ರಾಜನಾಥ್ ಸಿಂಗ್ ಉಚ್ಚರಿಸಿದರು.