ತಾಷ್ಕೆಂಟ್(ರಷ್ಯಾ): ಅಫ್ಘಾನಿಸ್ತಾನದಲ್ಲಿ ಸತತವಾಗಿ ದಾಳಿ ನಡೆಸುತ್ತಿರುವ ತಾಲಿಬಾನಿಗಳನ್ನು ಪಾಕಿಸ್ತಾನ ನಿಯಂತ್ರಿಸುತ್ತಿದೆ ಎಂಬ ಆರೋಪದ ಕುರಿತು ಎಎನ್ಐ ಕೇಳಿದ ಪ್ರಶ್ನೆಗೆ ಉತ್ತರ ನೀಡದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನುಣುಚಿಕೊಂಡಿದ್ದಾರೆ.
-
#WATCH Pakistan PM Imran Khan answers ANI question, 'can talks and terror go hand in hand?'. Later he evades the question on whether Pakistan is controlling the Taliban.
— ANI (@ANI) July 16, 2021 " class="align-text-top noRightClick twitterSection" data="
Khan is participating in the Central-South Asia conference, in Tashkent, Uzbekistan pic.twitter.com/TYvDO8qTxk
">#WATCH Pakistan PM Imran Khan answers ANI question, 'can talks and terror go hand in hand?'. Later he evades the question on whether Pakistan is controlling the Taliban.
— ANI (@ANI) July 16, 2021
Khan is participating in the Central-South Asia conference, in Tashkent, Uzbekistan pic.twitter.com/TYvDO8qTxk#WATCH Pakistan PM Imran Khan answers ANI question, 'can talks and terror go hand in hand?'. Later he evades the question on whether Pakistan is controlling the Taliban.
— ANI (@ANI) July 16, 2021
Khan is participating in the Central-South Asia conference, in Tashkent, Uzbekistan pic.twitter.com/TYvDO8qTxk
ರಷ್ಯಾದ ತಾಷ್ಕೆಂಟ್ನಲ್ಲಿ ಸೆಂಟ್ರಲ್- ಸೌತ್ ಏಷಿಯನ್ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದ ಖಾನ್, ತಾಲಿಬಾನಿಗಳ ಮೇಲೆ ಪಾಕ್ ನಿಯಂತ್ರಣ ವಿಚಾರಕ್ಕೆ ಉತ್ತರ ನೀಡದೇ ನುಣುಚಿಕೊಂಡಿದ್ದಾರೆ.
ಇದಕ್ಕೂ ಮೊದಲು ಎಎನ್ಐ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಇಮ್ರಾನ್ ಖಾನ್, 'ಎರಡೂ ದೇಶಗಳು ಶಾಂತಿಯಿಂದ ನೆರೆಹೊರೆಯವರಂತೆ ಬದುಕುತ್ತೇವೆ ಎಂಬ ವಿಶ್ವಾಸದೊಂದಿಗೆ ದೀರ್ಘಕಾಲದಿಂದ ಕಾಯುತ್ತಿದ್ದೇವೆ. ನಾನು ಭಾರತಕ್ಕೆ ಇಷ್ಟನ್ನು ಮಾತ್ರ ಹೇಳಬಹುದು. ಆದರೆ ಭಾರತ ಆರ್ಎಸ್ಎಸ್ ಸಿದ್ಧಾಂತದ ಹಾದಿಯಲ್ಲಿದ್ದು, ನಾವು ಏನು ಮಾಡಬಹುದು? ಎಂದು ಪ್ರಶ್ನಿಸಿದ್ದಾರೆ.
ಭಯೋತ್ಪಾದನೆ ಮತ್ತು ಮಾತುಕತೆ ಜೊತೆ ಜೊತೆಯಾಗಿ ಸಾಗಬಹುದೇ? ಎಂದು ಎಎನ್ಐ ಕೇಳಿದ ಪ್ರಶ್ನೆ ಇಮ್ರಾನ್ ಖಾನ್ ಈ ರೀತಿಯಾಗಿ ಉತ್ತರ ನೀಡಿದ್ದಾರೆ. ಆ ನಂತರ ತಾಲಿಬಾನ್ ಅನ್ನು ಪಾಕಿಸ್ತಾನ ನಿಯಂತ್ರಿಸುತ್ತಿದೆ ಎಂಬ ಆರೋಪದ ಕುರಿತ ಪ್ರಶ್ನೆಗೆ ಉತ್ತರ ನೀಡದೇ ಜಾರಿಕೊಂಡರು.
ಇದನ್ನೂ ಓದಿ: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಶೇ.53ರಷ್ಟು ನೀರು ಸಂಗ್ರಹ : ಪ್ರಸ್ತುತ ನೀರಿನ ಪ್ರಮಾಣದ ಕುರಿತ ಸಂಪೂರ್ಣ ಮಾಹಿತಿ
ಭಾರತದ ಪರವಾಗಿಯೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ತಾಷ್ಕೆಂಟ್ನಲ್ಲಿದ್ದು, ಸೆಂಟ್ರಲ್- ಸೌತ್ ಏಷಿಯನ್ ಕಾನ್ಫರೆನ್ಸ್ನಲ್ಲಿ ಪಾಲ್ಗೊಳ್ಳಲಿದ್ದಾರೆ.