ಕರಾಚಿ(ಪಾಕಿಸ್ತಾನ) : ಮಹಿಳೆರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಪಾಕಿಸ್ತಾನದ ಮಾನವ ಹಕ್ಕುಗಳ ಗುಂಪುಗಳು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಒತ್ತಾಯಿಸಿವೆ.
ಗುರುವಾರ ಸುದ್ದಿಗೋಷ್ಠಿ ನಡೆಸಿದ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ (ಎಚ್‌ಆರ್‌ಸಿಪಿ), ವಿಮೆನ್ ಆ್ಯಕ್ಷನ್ ಫೋರಂ, ತೆಹ್ರಿಕ್-ಎ-ನಿಸ್ವಾನ್, ಔರತ್ ಮಾರ್ಚ್ ಮತ್ತು ಪಾಕಿಸ್ತಾನ ಕಾರ್ಮಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಸೇರಿದಂತೆ ಕನಿಷ್ಠ 16 ಸಂಸ್ಥೆಗಳು ಇಮ್ರಾನ್ ಖಾನ್ ಅವರನ್ನು ತೀವ್ರವಾಗಿ ಖಂಡಿಸಿವೆ.
ಪಾಕಿಸ್ತಾನ ಆಡಳಿತ ಪಕ್ಷದ ಹಲವಾರು ಮಹಿಳಾ ಸದಸ್ಯರು ಇಮ್ರಾನ್ ಖಾನ್ ರಕ್ಷಣೆಗೆ ಮುಂದಾಗಿದ್ದು, ಅಸ್ಪಷ್ಟ, ತರ್ಕಬದ್ಧವಲ್ಲದ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುದು ತುಂಬಾ ನಿರಾಶಾದಾಯಕವಾಗಿದೆ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಬೇಸರ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಅಮೆರಿಕನ್ನರ ಸರಾಸರಿ ಜೀವಿತಾವಧಿ ಇಳಿಕೆ: ವಿವಿಧ ವರ್ಣೀಯರಲ್ಲೂ ಭಿನ್ನ, ಭಿನ್ನ..
ಪ್ರಧಾನ ಮಂತ್ರಿ ಇಮ್ರಾನ ಖಾನ್ ತಕ್ಷಣ ಸಾರ್ವಜನಿಕ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇವೆ. ಇವರ ಹೇಳಿಕೆ ದೇಶದಲ್ಲಿ ದೋಷಪೂರಿತ ಗ್ರಹಿಕೆಯನ್ನು ಉಂಟುಮಾಡುತ್ತದೆ. ಗಂಭೀರವಾದ ಮತ್ತು ಪ್ರಸ್ತುತದ ಅಪರಾಧಗಳನ್ನು ಯಾವ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿಲ್ಲ ಎಂದು ಮಾನವ ಹಕ್ಕುಗಳ ಆಯೋಗ ಆರೋಪಿಸಿದೆ.
ಏನಿದು ವಿವಾದ.?
ಖಾಸಗಿ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ್ದ ಇಮ್ರಾನ್ ಖಾನ್, ಮಹಿಳೆಯರು ಹಾಕಿಕೊಳ್ಳುವ ಕಡಿಮೆ ಬಟ್ಟೆ ಪುರುಷರ ಮೇಲೆ ಪ್ರಭಾವ ಬೀರುತ್ತಿದೆ. ಇದರಿಂದ ಪ್ರಚೋದನೆಗೊಳಗಾಗಿ ಅತ್ಯಾಚಾರದಂತಹ ಕೃತ್ಯಗಳು ನಡೆಯುತ್ತಿವೆ ಎಂದಿದ್ದರು. ಇದು ಮಹಿಳೆಯರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.