ETV Bharat / international

ಗಾಯದ ಮೇಲೆ ಬರೆ: ಕಾಬೂಲ್ ಏರ್​ಪೋರ್ಟ್​ನಲ್ಲಿ 1 ಬಾಟಲ್​ ನೀರಿಗೆ 3,000, 1 ಪ್ಲೇಟ್​ ಊಟಕ್ಕೆ 7000 ರೂ.

ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಅಫ್ಘಾನಿಸ್ತಾನದ ನಾಗರಿಕರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅತ್ಯಂತ ಕಷ್ಟಕರ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣ
ಕಾಬೂಲ್ ವಿಮಾನ ನಿಲ್ದಾಣ
author img

By

Published : Aug 26, 2021, 2:23 PM IST

ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದಲ್ಲಿ ಕ್ಷಣಕ್ಷಣಕ್ಕೂ ಜನರು ಭಯದಲ್ಲಿ ಬದುಕುತ್ತಿದ್ದಾರೆ. ಆದಷ್ಟು ಬೇಗ ದೇಶವನ್ನು ತೊರೆಯಲು ಹರಸಾಹಸ ಪಡುತ್ತಿದ್ದಾರೆ. ಅವರಿಗೆ ಅಲ್ಲಿಂದ ತಪ್ಪಿಸಿಕೊಂಡು ಹೊರಬರುವ ಇರುವ ಏಕೈಕ ಮಾರ್ಗವೆಂದರೆ ಅದು ಕಾಬೂಲ್ ವಿಮಾನ ನಿಲ್ದಾಣ. ಆದರೆ ಏರ್​ಪೋರ್ಟ್​ನಲ್ಲಿ ಆಹಾರ ಪದಾರ್ಥಗಳ ಬೆಲೆ ನೋಡಿದ್ರೆ ಗಗನಕ್ಕೇರಿದೆ.

ಮನೆ-ಮಠಗಳನ್ನು ತೊರೆದು, ಅದರಲ್ಲಿಯೂ ಕೆಲವರಂತೆ ಪ್ರಾಣ ಉಳಿದರೆ ಸಾಕೆಂದು ಖಾಲಿ ಕೈಯ್ಯಲ್ಲಿ, ಉಟ್ಟ ಬಟ್ಟೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದ್ರೆ ಅಲ್ಲಿ ಇಂದು ನೀರಿನ ಬಾಟಲ್​ ಖರೀದಿಸಬೇಕೆಂದರೆ 40 ಡಾಲರ್ ಅಂದ್ರೆ 3,000 ರೂ. ಹಣ ನೀಡಬೇಕಿದೆ. ಒಂದೇ ಒಂದು ತಟ್ಟೆ ಅನ್ನಕ್ಕೆ 7,500 ರೂ. ಖರ್ಚು ಮಾಡಬೇಕಿದೆ. ಇದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಷ್ಟೇ ಅಲ್ಲ, ಅಫ್ಘನ್​ ಕರೆನ್ಸಿಯನ್ನೂ ಪಡೆಯುತ್ತಿಲ್ಲ. ಅಮೆರಿಕನ್ ಡಾಲರ್‌ಗಳಲ್ಲೇ ಜನರು ಹಣ ಕಟ್ಟಬೇಕಾಗಿದೆ.

ಇದನ್ನೂ ಓದಿ: ಪಾಪಿಗಳ ಕೂಪದಲ್ಲಿ ಪ್ರಾಣ ಉಳಿಸಿಕೊಳ್ಳಲು ಹೆಣಗಾಟ.. ಕಾಬೂಲ್​ ವಿಮಾನ ನಿಲ್ದಾಣದೆದುರಿನ ಚರಂಡಿಯಲ್ಲಿ ಅಫ್ಘನ್​ರು..

ದಿನನಿತ್ಯ ಲಕ್ಷಾಂತರ ಜನರು ಕಾಬೂಲ್​ ಏರ್​ಪೋರ್ಟ್​ಗೆ ಬರುತ್ತಿದ್ದಾರೆ. ಎಷ್ಟೋ ಮೈಲಿ ದೂರದಿಂದ ನಿಲ್ದಾಣಕ್ಕೆ ಬಂದು ಸರತಿ ಸಾಲಿನಲ್ಲಿ ದಿನಗಟ್ಟಲೇ ಕಾಯುತ್ತಿದ್ದಾರೆ. ವಿಮಾನ ನಿಲ್ದಾಣದೆದುರಿನ ಚರಂಡಿಯಲ್ಲಿ ಕುಳಿತು ಕೊಳಕು ವಾಸನೆ ಕುಡಿಯುತ್ತಿದ್ದಾರೆ. ಮಕ್ಕಳು ಹಸಿವಿನಿಂದ ಪ್ರಜ್ಞಾಹೀನ ಸ್ಥಿತಿ ತಲುಪುತ್ತಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಆಹಾರ-ನೀರು ಪಡೆಯಲು, ಅದರಲ್ಲಿಯೂ ಡಾಲರ್‌ ನೀಡಿ ಪಡೆಯುವ ಸಾಮರ್ಥ್ಯ ಜನರಲ್ಲಿ ಇಲ್ಲದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.