ETV Bharat / international

ಪಾಕ್​ನಲ್ಲಿ ಶತಮಾನದಷ್ಟು ಹಳೆಯದಾದ ಹಿಂದೂ ದೇಗುಲ ಭಾಗಶಃ ಧ್ವಂಸ: ಹಿಂದೂಗಳ ಮೇಲೆ ಹಲ್ಲೆಗೆ ಯತ್ನ! - ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನ

300 ಹಿಂದೂ ಮತ್ತು 30 ಮುಸ್ಲಿಂ ಕುಟುಂಬ ಹೊಂದಿರುವ ಶೀತಲ್ ದಾಸ್ ಕಾಂಪೌಂಡ್‌ನಲ್ಲಿ ಭಾನುವಾರ ಈ ಘಟನೆ ನಡೆದಿದೆ. ನೆರೆಹೊರೆಯ ನಿವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಕಾಂಪೌಂಡ್‌ನ ಏಕೈಕ ಗೇಟ್‌ನ ಹೊರಗೆ ಒಟ್ಟುಗೂಡಿದ್ದಾರೆ. ಅವರಲ್ಲಿ ಅನೇಕರು ಹಿಂದು ಕುಟುಂಬಗಳ ಮೇಲೆ ದಾಳಿ ನಡೆಸಲು ಉದ್ದೇಶ ಇರಿಸಿಕೊಂಡಿದ್ದರು ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Hindu temple
ಹಿಂದೂ ದೇಗುಲ
author img

By

Published : Nov 4, 2020, 8:23 PM IST

Updated : Nov 4, 2020, 8:59 PM IST

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹಿಂದೂ ದೇವಾಲಯವೊಂದು ಕೋಪಗೊಂಡ ಜನಸಮೂಹದಿಂದ ಭಾಗಶಃ ಧ್ವಂಸಗೊಂಡಿದ್ದು, 300ಕ್ಕೂ ಹೆಚ್ಚು ಹಿಂದು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಮುಸ್ಲಿಮರು ಶತಮಾನದಷ್ಟು ಹಳೆಯದಾದ ನೆರೆಹೊರೆಗೆ ಪ್ರವೇಶಿಸದಂತೆ ತಡೆದಿದ್ದಾರೆ ಎನ್ನಲಾಗುತ್ತಿದೆ.

300 ಹಿಂದೂ ಮತ್ತು 30 ಮುಸ್ಲಿಂ ಕುಟುಂಬ ಹೊಂದಿರುವ ಶೀತಲ್ ದಾಸ್ ಕಾಂಪೌಂಡ್‌ನಲ್ಲಿ ಭಾನುವಾರ ಈ ಘಟನೆ ನಡೆದಿದೆ. ನೆರೆಹೊರೆಯ ನಿವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಕಾಂಪೌಂಡ್‌ನ ಏಕೈಕ ಗೇಟ್‌ನ ಹೊರಗೆ ಒಟ್ಟುಗೂಡಿದ್ದಾರೆ. ಅವರಲ್ಲಿ ಅನೇಕರು ಹಿಂದು ಕುಟುಂಬಗಳ ಮೇಲೆ ದಾಳಿ ನಡೆಸಲು ಉದ್ದೇಶ ಇರಿಸಿಕೊಂಡಿದ್ದರು ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾಂಪೌಂಡ್ ಮತ್ತು ಸುತ್ತಮುತ್ತ ವಾಸಿಸುವ ಮುಸ್ಲಿಂ ಕುಟುಂಬಸ್ಥರು ದೇವಸ್ಥಾನದ ಗೇಟ್ ತಲುಪದಂತೆ ಮತ್ತು ಜನಸಮೂಹವನ್ನು ಆ ಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಮುಂದಾಗಿದ್ದರು.

ಪೊಲೀಸರು ಮಾಹಿತಿ ಪಡೆದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದರು ಎಂದು ಹಿಂದೂ ವ್ಯಕ್ತಿಯ ಅನಾಮಧೇಯತೆ ಉಲ್ಲೇಖಿಸಿ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ ವರದಿ ಮಾಡಿದೆ. 'ಕೋಪಗೊಂಡ ಕೆಲವರು ಪುರುಷರು ದೇವಾಲಯ ತಲುಪುವಲ್ಲಿ ಯಶಸ್ವಿಯಾಗಿದ್ದರು. ದೇಗುಲ ಧ್ವಂಸ ಮಾಡಲು ಪ್ರಯತ್ನಿಸಿದರು ಎಂದು ಮತ್ತೊಬ್ಬ ಹಿಂದೂ ಹೇಳಿದ್ಧಾರೆ.

ಹಿಂದೂ ಕುಟುಂಬಗಳ ಮೇಲೆ ದಾಳಿ ಮಾಡಲು ಬಯಸಿದ್ದರು. ಆದರೆ ಪೊಲೀಸರು ಅವರ ಪ್ರಯತ್ನವನ್ನು ವಿಫಲಗೊಳಿಸಿದರು. ಈ ವೇಳೆ ಮೂರು ವಿಗ್ರಹಗಳನ್ನು ನಾಶಪಡಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Last Updated : Nov 4, 2020, 8:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.