ETV Bharat / international

ಅಫ್ಘಾನಿಸ್ತಾನದ ಹೆಲ್ಮಂಡ್​ನಲ್ಲಿ ಮುಂದುವರಿದ ತಾಲಿಬಾನ್​ ಅಟ್ಟಹಾಸ... ಹಲವು ನಾಗರಿಕರು ಬಲಿ

author img

By

Published : Aug 5, 2021, 5:00 AM IST

ಆಗಸ್ಟ್ 3ರ ವೇಳೆಗಾಗಲೇ ಅಫ್ಘಾನಿಸ್ತಾನದ ಭದ್ರತಾ ಪಡೆಗಳು ಹೆಲ್ಮಂಡ್‌ನಲ್ಲಿ ನಡೆಸಿದ ವಾಯುದಾಳಿ ಮತ್ತು ಭೂ ಕಾರ್ಯಾಚರಣೆಗಳಲ್ಲಿ ಮಿಲಿಟರಿ ಆಯೋಗದ ಮೂವರು ಮುಖ್ಯಸ್ಥರು ಸೇರಿದಂತೆ 75ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರು ಹತರಾಗಿದ್ದಾರೆ.

Helmand: Taliban offensives enter eighth consecutive day, killing plenty of civilians
ಅಫ್ಘಾನಿಸ್ತಾನದ ಹೆಲ್ಮಂಡ್​ನಲ್ಲಿ ಮುಂದುವರಿದ ತಾಲಿಬಾನ್​ ಅಟ್ಟಹಾಸ

ಕಾಬೂಲ್: ಅಫ್ಘಾನಿಸ್ತಾನದ ಹೆಲ್ಮಂಡ್​ನಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸವು ಸತತ 8ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಾಂತೀಯ ರಾಜಧಾನಿಯಲ್ಲಿ ಇದುವರೆಗೆ ಹಲವು ನಾಗರಿಕರು ಕೂಡ ಸಾವನ್ನಪ್ಪಿದ್ದಾರೆ.

ವಾರದ ಹಿಂದೆ ಆರಂಭವಾದ ಘರ್ಷಣೆಗಳು, ಅಫ್ಘಾನಿಸ್ತಾನದ ಲಷ್ಕರ್ಗಾದಲ್ಲಿ ತಾಲಿಬಾನ್ ಮತ್ತು ಸೇನಾ ಪಡೆಗಳ ನಡುವೆ ಇನ್ನೂ ಮುಂದುವರಿದಿದೆ. ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್, ಗವರ್ನರ್ ಕಚೇರಿ, ಜೈಲು ಮತ್ತು ಇತರ ಸರ್ಕಾರಿ ಕಟ್ಟಡಗಳ ಸಮೀಪ ದಾಳಿಗಳು ನಡೆಯುತ್ತಿವೆ. ಅನೇಕ ನಾಗರಿಕರು ಕೂಡ ಸಾವನ್ನಪ್ಪಿದ್ದಾರೆ, ಆದರೆ ನಿಖರವಾದ ಸಂಖ್ಯೆಗಳು ಲಭ್ಯವಿಲ್ಲ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಆಗಸ್ಟ್ 3ರ ವೇಳೆಗಾಗಲೇ ಅಫ್ಘಾನಿಸ್ತಾನದ ಭದ್ರತಾ ಪಡೆಗಳು ಹೆಲ್ಮಂಡ್‌ನಲ್ಲಿ ನಡೆಸಿದ ವಾಯುದಾಳಿ ಮತ್ತು ಭೂ ಕಾರ್ಯಾಚರಣೆಗಳಲ್ಲಿ ಮಿಲಿಟರಿ ಆಯೋಗದ ಮೂವರು ಮುಖ್ಯಸ್ಥರು ಸೇರಿದಂತೆ 75 ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರು ಹತರಾಗಿದ್ದಾರೆ.

ಹೆಲ್ಮಂಡ್​ನಲ್ಲಿ ಯುದ್ಧ ಪರಿಸ್ಥಿತಿಯಿಂದಾಗಿ 40ಕ್ಕೂ ಹೆಚ್ಚು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 100 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಮುನ್ನ, ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯವು ಹೆಲ್ಮಂಡ್‌ನ ಲಷ್ಕರ್ಗಾ ನಗರದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 40 ತಾಲಿಬಾನ್ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಘೋಷಿಸಿತ್ತು.

ಕಳೆದ ಕೆಲವು ವಾರಗಳಲ್ಲಿ, ತಾಲಿಬಾನ್ ದೇಶದ ಈಶಾನ್ಯ ಪ್ರಾಂತ್ಯವಾದ ತಖರ್ ಸೇರಿದಂತೆ ಅಫ್ಘಾನಿಸ್ತಾನದ ಹಲವು ಜಿಲ್ಲೆಗಳನ್ನು ವಶಪಡಿಸಿಕೊಂಡಿದೆ. ರಾಷ್ಟ್ರವ್ಯಾಪಿ, ತಾಲಿಬಾನ್ 223 ಜಿಲ್ಲೆಗಳನ್ನು ನಿಯಂತ್ರಿಸುತ್ತಿದೆ, 68 ಜಿಲ್ಲೆಗಳು ಸರ್ಕಾರದ ಹಿಡಿತದಲ್ಲಿದೆ ಎಂದು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.