ಇಸ್ಲಾಮಾಬಾದ್: ಪಾಕಿಸ್ತಾನ ಆರ್ಥಿಕವಾಗಿ ತೀವ್ರ ಹಿನ್ನಡೆ ಅನುಭವಿಸಿದ್ದು, ದೇಶವನ್ನು ಮುನ್ನಡೆಸಲು ಇತರೇ ದೇಶದ ಮುಂದೆ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವಿಚಾರದ ಕುರಿತಂತೆ ಪಾಕ್ ಮುಖ್ಯ ನ್ಯಾಯಮೂರ್ತಿ ಅಸಿಫ್ ಸಯೀದ್ ಖೋಸಾ ಮಾತನಾಡಿದ್ದಾರೆ.
"ಪಾಕಿಸ್ತಾನದ ಜನತೆ ಸದ್ಯ ಹತಾಶೆಯ ಹೊರತಾಗಿ ಯಾವುದೇ ಸುದ್ದಿಯನ್ನೂ ಕೇಳುತ್ತಿಲ್ಲ. ಆರ್ಥಿಕತೆ, ರಾಜಕೀಯ ಜೊತೆಯಲ್ಲಿ ಕ್ರಿಕೆಟ್ ಹೀಗೆ ಎಲ್ಲ ಕ್ಷೇತ್ರದಲ್ಲೂ ಪಾಕಿಸ್ತಾನ ದೊಡ್ಡ ಹಿನ್ನಡೆ ಎದುರಿಸುತ್ತಿದೆ" ಎಂದು ಅಸಿಫ್ ಸಯೀದ್ ಬೇಸರದ ಮಾತನ್ನಾಡಿದ್ದಾರೆ.
ಸರಿಯಾದ ಪ್ರದರ್ಶನ ನೀಡಿ, ಇಲ್ಲವೇ ಪರಿಣಾಮ ಎದುರಿಸಿ: ಪಾಕ್ ಕ್ಯಾಪ್ಟನ್ಗೆ ಪಿಸಿಬಿ ವಾರ್ನ್!
ಮಾದರಿ ಕೋರ್ಟ್ ಬಗ್ಗೆ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಅಸಿಫ್ ಸಯೀದ್ ಖೋಸಾ ದೇಶದ ಆರ್ಥಿಕತೆ ತುರ್ತು ನಿಗಾ ಘಟಕದಲ್ಲಿದ್ದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ದೇಶದ ಆರ್ಥಿಕತೆ ತುರ್ತು ನಿಗಾ ಘಟಕದಲ್ಲಿದೆ. ಇಲ್ಲವೇ ಈಗ ತಾನೇ ತುರ್ತು ನಿಗಾ ಘಟಕದಿಂದ ಹೊರಬಂದಿದೆ" ಎಂಬುದಾಗಿ ಅಸಿಫ್ ದೇಶದ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಗಂಭೀರತೆ ಬಗ್ಗೆ ಹೇಳಿದ್ದಾರೆ.
"ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಉಂಟಾಗಿರುವ ಸಮಸ್ಯೆಯಿಂದ ಹೊರಬರಲು ಚಾನೆಲ್ ಬದಲಾಯಿಸಿ ಕ್ರಿಕೆಟ್ ವಿಶ್ವಕಪ್ ವೀಕ್ಷಿಸಿದರೆ ಮತ್ತದೇ ಹಿನ್ನಡೆ..! ಪ್ರಮುಖವಾಗಿ ಭಾರತದ ವಿರುದ್ಧ ಸೋಲನುಭವಿಸಿದ್ದು ನಿಜಕ್ಕೂ ಬೇಸರ ತರಿಸಿದೆ. ಸದ್ಯ ಈ ಎಲ್ಲ ಹತಾಶೆಯ ವಾತಾವರಣದಿಂದ ಹೊರ ಬರಲು ಹಾಗೂ ಮನರಂಜನೆಗಾಗಿ ಟಿವಿಯಲ್ಲಿ ಕ್ರಿಕೆಟ್ನಲ್ಲೂ ನಿರೀಕ್ಷಿತ ಮುನ್ನಡೆ ದೊರೆಯುತ್ತಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಅಸಿಫ್ ಸಯೀದ್ ನುಡಿದಿದ್ದಾರೆ.