ಲಾಹೋರ್(ಪಾಕಿಸ್ತಾನ): ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ ಅಧಿಕಾರಿಗಳು ಬಂಧಿಸಿದ್ದಾರೆ.
-
Lahore (Pakistan): National Accountability Bureau (NAB) authorities have arrested former Prime Minister Nawaz Sharif in Chaudhry Sugar Mills case. pic.twitter.com/vp3lGrhQro
— ANI (@ANI) October 11, 2019 " class="align-text-top noRightClick twitterSection" data="
">Lahore (Pakistan): National Accountability Bureau (NAB) authorities have arrested former Prime Minister Nawaz Sharif in Chaudhry Sugar Mills case. pic.twitter.com/vp3lGrhQro
— ANI (@ANI) October 11, 2019Lahore (Pakistan): National Accountability Bureau (NAB) authorities have arrested former Prime Minister Nawaz Sharif in Chaudhry Sugar Mills case. pic.twitter.com/vp3lGrhQro
— ANI (@ANI) October 11, 2019
ಚೌಧ್ರಿ ಸಕ್ಕರೆ ಕಾರ್ಖಾನೆ ಷೇರುಗಳ ಖರೀದಿ ಮತ್ತು ಮಾರಾಟದಲ್ಲಿ ಹಣ ವರ್ಗಾವಣೆ ಆರೋಪವನ್ನ ನವಾಜ್ ಷರೀಫ್ ಕುಟುಂಬಸ್ಥರು ಎದುರಿಸುತ್ತಿದ್ದಾರೆ. ಚೌಧ್ರಿ ಸಕ್ಕರೆ ಕಾರ್ಖಾನೆ ಷೇರು ಖರೀದಿಯಲ್ಲಿ ಷರೀಫ್ ನೇರವಾಗಿ ಪಾಲುದಾರರಾಗಿದ್ದಾರೆ. ಕಳದೆ ಆಗಸ್ಟ್ ತಿಂಗಳಲ್ಲಿ ಷರೀಫ್ ಪುತ್ರಿ ಮತ್ತು ಆಕೆಯ ಸೋದರ ಸಂಬಂಧಿ ಯೂಸುಫ್ ಅಬ್ಬಾಸ್ ಕೂಡ ಬಂಧನಕ್ಕೆ ಒಳಗಾಗಿದ್ದರು.
ಚೌಧ್ರಿ ಸಕ್ಕರೆ ಕಾರ್ಖಾನೆಯಲ್ಲಿ ಷರೀಫ್ ಕುಟುಂಬಸ್ಥರು ಸುಮಾರು 12 ಮಿಲಿಯನ್ ಷೇರು ಹೊಂದಿದ್ದಾರೆ ಎಂದು ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ನವಾಜ್ ಷರೀಫ್ ಅವರನ್ನ ಅಕೌಂಟಬಿಲಿಟಿ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು. ಸದ್ಯ ಕೋರ್ಟ್ ಷರೀಫ್ ಅವರನ್ನ 14 ದಿನಗಳ ಕಾಲ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ ವಶಕ್ಕೆ ನೀಡಿ ಆದೇಶಿಸಿದೆ.