ಇಸ್ಲಾಮಾಬಾದ್: ಭಯೋತ್ಪಾದನೆ ಆರ್ಥಿಕ ನೆರವು ಹಾಗೂ ಅಕ್ರಮ ಹಣದ ಹರಿವು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ಪೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(ಎಫ್ಎಟಿಎಫ್) ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದೆ.
ಉಗ್ರರಿಗೆ ಆರ್ಥಿಕ ನೆರವು ಹಾಗೂ ಅಕ್ರಮ ಹಣವನ್ನು ತಡೆಗಟ್ಟುವ 40 ಅಂಶಗಳಲ್ಲಿ ಪಾಕಿಸ್ತಾನ 32 ಅಂಶಗಳಲ್ಲಿ ವಿಫಲವಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಕಳೆದ ವಾರ ಪಾಕಿಸ್ತಾನ ಸರ್ಕಾರ 450 ಪುಟಗಳ ವರದಿಯೊಂದನ್ನು ಎಫ್ಎಟಿಎಫ್ಗೆ ಸಲ್ಲಿಕೆ ಮಾಡಿತ್ತು. ಈ ವರದಿಯಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಸರ್ಕಾರ ಅನುಸರಿಸಿದ ಕ್ರಮಗಳನ್ನು ಹಾಗೂ ನಂತರದಲ್ಲಾದ ಬದಲಾವಣೆಯನ್ನು ವಿವರಿಸಿತ್ತು.
ವರದಿಯಲ್ಲಿ ಲಷ್ಕರ್-ಇ-ತೈಬಾ/ ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದನ್ನು ಉಲ್ಲೇಖಿಸಿತ್ತು. ಆದರೆ ಎಫ್ಎಟಿಎಫ್ ನೀಡಿದ್ದ ಗಡುವಿನಲ್ಲಿ ಪಾಕಿಸ್ತಾನದ ಪ್ರಯತ್ನ ಪ್ರಾಮಾಣಿಕವಾಗಿ ಕಂಡುಬರದೇ ಇರುವ ಕಾರಣ ಇದೀಗ ಕಪ್ಪುಪಟ್ಟಿಗೆ ಸೇರಿಸಲಾಗಿದೆ.