ETV Bharat / international

ಕಾಬೂಲ್ ಪ್ರವೇಶಿಸಿದ ತಾಲಿಬಾನ್.. ಇಂದು ರಾತ್ರಿ ದೆಹಲಿಗೆ ಕಾಬೂಲ್‌ನಿಂದ ಅಂತಿಮ ಏರ್ ಇಂಡಿಯಾ ವಿಮಾನ..

author img

By

Published : Aug 15, 2021, 5:43 PM IST

ಅಫ್ಘಾನಿಸ್ತಾನದ ರಾಜಧಾನಿಯಾದ ಕಾಬೂಲ್​ನಿಂದ ಏರ್ ಇಂಡಿಯಾದ ಕೊನೆಯ ವಿಮಾನ ಇಂದು ರಾತ್ರಿ ನವದೆಹಲಿಗೆ ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ತಾಲಿಬಾನ್ ಭಯೋತ್ಪಾದಕರು ಆ ದೇಶದ ಮೇಲೆ ಬಿಗಿ ಹಿಡಿತವನ್ನು ಸಾಧಿಸಿರುವ ಕಾರಣ ವಾರಕ್ಕೆ ಮೂರು ಬಾರಿ ಮಾತ್ರ ಕಾಬೂಲ್‌ಗೆ ವಿಮಾನಯಾನ ನಡೆಸುವುದು ಅನಿಶ್ಚಿತವಾಗಿದೆ..

Final Air India Flight Out Of Kabul Expected In Delhi Tonight
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಪ್ರವೇಶಿಸಿದ ತಾಲಿಬಾನ್ ಭಯೋತ್ಪಾದಕರು

ಕಾಬೂಲ್(ಅಫ್ಘಾನಿಸ್ತಾನ) : ತಾಲಿಬಾನ್ ಭಯೋತ್ಪಾದಕರು ಇಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಪ್ರವೇಶಿಸಿದರು. ಹಿರಿಯ ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ತಾಲಿಬಾನ್ ಬಂಡುಕೋರರು "ಎಲ್ಲಾ ಕಡೆಯಿಂದ" ರಾಜಧಾನಿಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಹೇಳಿಕೆಯಲ್ಲಿ ಕಾಬೂಲ್ ನ ಶಾಂತಿಯುತ ಶರಣಾಗತಿಗಾಗಿ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಶಾಂತಿಯುತ ಅಧಿಕಾರದ ವರ್ಗಾವಣೆ : "ಸರ್ಕಾರ ಶಾಂತಿಯುತ ಅಧಿಕಾರದ ವರ್ಗಾವಣೆಯನ್ನು ಒಪ್ಪಿಕೊಳ್ಳುವವರೆಗೂ ತಾಲಿಬಾನ್ ಹೋರಾಟಗಾರರು ಕಾಬೂಲ್‌ನ ಎಲ್ಲಾ ಪ್ರವೇಶದ್ವಾರಗಳಲ್ಲಿ ಸಿದ್ಧರಾಗಿರುತ್ತಾರೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಫ್ಘಾನ್ ಸರ್ಕಾರದ ರಕ್ಷಣಾ ಕುಸಿತವು ರಾಜತಾಂತ್ರಿಕರನ್ನು ದಿಗ್ಭ್ರಮೆಗೊಳಿಸಿದೆ.

ಇದನ್ನೂ ಓದಿ: ಕಾಬೂಲ್‌ನಲ್ಲಿರುವ ರಷ್ಯಾ ರಾಯಭಾರ ಕಚೇರಿಯ ಸುರಕ್ಷತೆಯ ಭರವಸೆ ನೀಡಿದ ತಾಲಿಬಾನ್

ಅಧ್ಯಕ್ಷ ಅಶ್ರಫ್ ಘನಿ ಅವರಿಂದ ಪರಿಸ್ಥಿತಿಯ ಬಗ್ಗೆ ಯಾವುದೇ ತಕ್ಷಣದ ಮಾಹಿತಿ ಇಲ್ಲ. ಅವರು ಶನಿವಾರ ಸ್ಥಳೀಯ ನಾಯಕರು ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ತುರ್ತು ಸಮಾಲೋಚನೆಯಲ್ಲಿದ್ದಾರೆ ಎಂದು ಹೇಳಿದ್ದರು. ಘನಿ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಮತ್ತು ತಾಲಿಬಾನ್ ಕಮಾಂಡರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ.

ಅಫ್ಘಾನ್ ಅಧ್ಯಕ್ಷೀಯ ಕಚೇರಿಯ ಖಾತೆಯಿಂದ ಒಂದು ಟ್ವೀಟ್ ಮಾಡಲಾಗಿದ್ದು, ಕಾಬೂಲ್ ಸುತ್ತಮುತ್ತಲಿನ ಹಲವಾರು ಕಡೆಗಳಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಆದರೆ, ಭದ್ರತಾ ಪಡೆಗಳು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಸಮನ್ವಯದಿಂದ ನಗರದ ಮೇಲೆ ನಿಯಂತ್ರಣ ಹೊಂದಲಾಗಿದೆ ಎಂದು ಹೇಳಿದೆ.

ವಾಹನಗಳಿಂದ ಕಿಕ್ಕಿರಿದ ಕಾಬೂಲ್​ನ ಬೀದಿಗಳು : ಕಾಬೂಲ್‌ನ ಅನೇಕ ಬೀದಿಗಳಲ್ಲಿ ವಾಹನಗಳು ಕಿಕ್ಕಿರಿದಿದ್ದು, ಜನರು ಮನೆಗೆ ಧಾವಿಸುತ್ತಿದ್ದಾರೆ. ಹಲವರು ವಿಮಾನ ನಿಲ್ದಾಣವನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ ಎಂದು ನಿವಾಸಿಗಳು ಹೇಳಿದರು. ಕಠಿಣ ಇಸ್ಲಾಮಿಸ್ಟ್ ಆಡಳಿತಕ್ಕೆ ಮರಳುವ ಭಯದಿಂದ ಜನ ತಮ್ಮ ತಮ್ಮ ಪ್ರಾಂತ್ಯಗಳಿಗೆ ಮರಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರ ಮುಂಜಾನೆ, ತಾಲಿಬಾನ್ ನಿಯಂತ್ರಿತ ಪ್ರಾಂತ್ಯಗಳ ನಿರಾಶ್ರಿತರು ಟ್ಯಾಕ್ಸಿಗಳಿಂದ ಸಾಮಾನುಗಳನ್ನು ಇಳಿಸುವುದನ್ನು ಮತ್ತು ರಾಯಭಾರಿ ಕಚೇರಿಗಳ ಗೇಟ್‌ಗಳ ಹೊರಗೆ ಕುಟುಂಬಗಳು ನಿಂತಿದ್ದ ದೃಶ್ಯ ಸಾಮಾನ್ಯವಾಗಿದ್ದವು.

ದೆಹಲಿಗೆ ಕಾಬೂಲ್‌ನಿಂದ ಇಂದು ರಾತ್ರಿ ಅಂತಿಮ ವಿಮಾನ : ಅಫ್ಘಾನಿಸ್ತಾನದ ರಾಜಧಾನಿಯಾದ ಕಾಬೂಲ್​ನಿಂದ ಏರ್ ಇಂಡಿಯಾದ ಕೊನೆಯ ವಿಮಾನ ಇಂದು ರಾತ್ರಿ ನವದೆಹಲಿಗೆ ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ತಾಲಿಬಾನ್ ಭಯೋತ್ಪಾದಕರು ಆ ದೇಶದ ಮೇಲೆ ಬಿಗಿ ಹಿಡಿತವನ್ನು ಸಾಧಿಸಿರುವ ಕಾರಣ ವಾರಕ್ಕೆ ಮೂರು ಬಾರಿ ಮಾತ್ರ ಕಾಬೂಲ್‌ಗೆ ವಿಮಾನಯಾನ ನಡೆಸುವುದು ಅನಿಶ್ಚಿತವಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರವಾಗಲಿದೆ: ಆಂತರಿಕ ವ್ಯವಹಾರಗಳ ಸಚಿವ

ಇಂದು ಮುಂಜಾನೆ ಕಾಬೂಲ್‌ಗೆ ಒಂದು ಚಾರ್ಟರ್ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ತಾಲಿಬಾನ್ ಭಯೋತ್ಪಾದಕರು ಇಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಪ್ರವೇಶಿಸಿದರು.

ಸೋಮವಾರದಿಂದ ದುಬೈಗೆ ವಿಮಾನ ಸ್ಥಗಿತ : ಯುಎಇಯ ಫ್ಲೈದುಬೈ ಸೋಮವಾರದಿಂದ ಕಾಬೂಲ್​ನಿಂದ ವಿಮಾನಗಳನ್ನು ಸ್ಥಗಿತಗೊಳಿಸಲಿದೆ ಎಂದು ಅದರ ವಕ್ತಾರರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.