ETV Bharat / international

ತಾಲಿಬಾನ್​ನಿಂದ ಜೀವ ಬೆದರಿಕೆ: ದೇಶ ತೊರೆದ ಅಫ್ಘನ್​ನ ಮಹಿಳಾ ಬಾಕ್ಸರ್ - ಸೀಮಾ ರಝಾಯ್

ಕುಟುಂಬದ ವಿರೋಧದ ನಡುವೆಯೂ ಕ್ರೀಡೆಯಲ್ಲಿ ಮುಂದುವರೆದು ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ತಂಡದ ಸದಸ್ಯೆಯಾಗಿ ಆಯ್ಕೆಯಾಗಿದ್ದ ಬಾಕ್ಸರ್ ಸೀಮಾ ರಝಾಯ್ ಇದೀಗ ತಾಲಿಬಾನ್​ನಿಂದ ಜೀವ ಬೆದರಿಕೆ ಬಂದ ಕಾರಣ ಅಫ್ಘಾನಿಸ್ತಾನದಿಂದ ಪಲಾಯನವಾಗಿದ್ದಾರೆ.

ಬಾಕ್ಸರ್ ಸೀಮಾ ರಝಾಯ್
ಬಾಕ್ಸರ್ ಸೀಮಾ ರಝಾಯ್
author img

By

Published : Sep 12, 2021, 7:38 PM IST

ಕಾಬೂಲ್​ (ಅಫ್ಘಾನಿಸ್ತಾನ): ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡುವ ಕನಸು ಕಂಡಿದ್ದ ಅಫ್ಘಾನಿಸ್ತಾನದ 18 ವರ್ಷದ ಮಹಿಳಾ ಬಾಕ್ಸರ್ ಸೀಮಾ ರಝಾಯ್, ತಾಲಿಬಾನ್​ನಿಂದ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ದೇಶ ತೊರೆದಿದ್ದಾರೆ.

ಕಾಬೂಲ್​​ ಅನ್ನು ತಾಲಿಬಾನ್​ ವಶಪಡಿಸಿಕೊಂಡ ವೇಳೆ ನಾನು ನನ್ನ ಕೋಚ್​ನೊಂದಿಗೆ ಬಾಕ್ಸಿಂಗ್ ತರಬೇತಿಯಲ್ಲಿದ್ದೆ. ಇದನ್ನು ತಿಳಿದಿದ್ದ ಕೆಲವರು ನನ್ನ ವಿಚಾರವನ್ನು ತಾಲಿಬಾನಿಗಳಿಗೆ ಹೇಳಿದ್ದಾರೆ. "ನೀನು ಇಲ್ಲಿ ತರಬೇತಿಯನ್ನು ನಿಲ್ಲಿಸಬೇಕು, ಇಲ್ಲವೇ ಅಮೆರಿಕಕ್ಕೆ ಹೋಗಿ ಬಾಕ್ಸಿಂಗ್ ಮುಂದುವರೆಸಬೇಕು. ಇದಕ್ಕೆ ಒಪ್ಪದಿದ್ದರೆ ಖಂಡಿತವಾಗಿಯೂ ನಿನ್ನನ್ನು ಕೊಲ್ಲುತ್ತೇವೆ" ಎಂದು ತಾಲಿಬಾನ್​ ಕಡೆಯಿಂದ ನನ್ನ ಮನೆಗೆ ಪತ್ರ ಕಳುಹಿಸಿಕೊಡಲಾಗಿತ್ತು ಎಂದು ಸೀಮಾ ರಝಾಯ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕದ ಯುದ್ಧ ವಿಮಾನಕ್ಕೆ ಜೋಕಾಲಿ ಕಟ್ಟಿ ಆಟವಾಡಿದ ತಾಲಿಬಾನಿಗಳು- Video Viral

ನಾನು ಯುನೈಟೆಡ್​ ಸ್ಟೇಟ್​ನಲ್ಲಿ ನನ್ನ ಬಾಕ್ಸಿಂಗ್ ತರಬೇತಿ ಮುಂದುವರೆಸಬೇಕೆಂದಿರುವೆ. ಹೀಗಾಗಿ ನನ್ನ ಕುಟುಂಬವನ್ನು ಇಲ್ಲಿಯೇ ಬಿಟ್ಟು ನಾನು ಏಕಾಂಗಿಯಾಗಿ ದೇಶ ತೊರೆಯಲು ನಿರ್ಧರಿಸಿದೆ ಎಂದು ಸೀಮಾ ಹೇಳಿದ್ದಾರೆ.

ತಮ್ಮ 16ನೇ ವಯಸ್ಸಿಗೆ ಬಾಕ್ಸಿಂಗ್ ವೃತ್ತಿ ಜೀವನ ಆರಂಭಿಸಿದ್ದ ಸೀಮಾ ರಝಾಯ್​, ಕುಟುಂಬದ ವಿರೋಧದ ನಡುವೆಯೂ ಕೋಚ್​ ಸಹಾಯದಿಂದ ಕ್ರೀಡೆಯಲ್ಲಿ ಮುಂದುವರೆದು ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ತಂಡದ ಸದಸ್ಯೆಯಾಗಿ ಆಯ್ಕೆಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.