ETV Bharat / international

ಪ್ರತಿಭಟನೆಗೆ ಬೆದರಿದ ಚೀನಾ: ಟಿಬೆಟ್ ಪ್ರವೇಶಕ್ಕೆ ಪ್ರವಾಸಿಗರಿಗೆ ಅನುಮತಿ - ಸಾಂಕ್ರಾಮಿಕ ರೋಗದ ಮಧ್ಯೆಯೂ ಟಿಎಆರ್ ಓಪನ್

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಚೀನಾ ತನ್ನ ಸ್ವಾಯತ್ತ ಪ್ರದೇಶ ಟೆಬೆಟ್‌ ಅನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲು ಮುಂದಾಗಿದೆ. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಸ್ಥಿರತೆಯೇ ಡ್ರ್ಯಾಗನ್ ದೇಶದ ಈ ನಿರ್ಧಾರಕ್ಕೆ ಕಾರಣವೆನ್ನಲಾಗಿದೆ.

Tibet for tourists
ಟಿಎಆರ್
author img

By

Published : Dec 4, 2020, 12:43 PM IST

ತೈಪೆ (ತೈವಾನ್) : ಟಿಬೆಟ್​​ನಲ್ಲಿ ಚೀನಾ ವಿರೋಧಿ ಪ್ರತಿಭಟನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಈ ಬೆಳವಣಿಗೆಯನ್ನು ತಗ್ಗಿಸುವುದು ಮತ್ತು ಅಲ್ಲಿನ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಕಾರಣಕ್ಕೆ ಚೀನಾ ಪ್ರವಾಸಿಗರಿಗೆ ಟಿಬೆಟ್ ಅನ್ನು ಮುಕ್ತಗೊಳಿಸುವ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಅಕ್ಟೋಬರ್ 9 ರ ವೇಳೆಗೆ ಟಿಬೆಟ್‌ ಅಟೊನೊಮಸ್ ರೀಜಿಯನ್‌ (ಟಿಎಆರ್)​ಗೆ ಸುಮಾರು 18 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಅಲ್ಲಿನ ಆರ್ಥಿಕಾಭಿವೃದ್ಧಿ ದೃಷ್ಠಿಯಿಂದ ಅತ್ಯುತ್ತಮ ಬೆಳವಣಿಗೆ ಅನ್ನೋದು ಚೀನಾಗೆ ಮನವರಿಕೆಯಾಗಿದೆ. ಹೀಗಾಗಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಈ ಸಮಯದಲ್ಲಿಯೂ ಚೀನಾ ಟಿಬೆಟ್ ಸ್ವಾಯತ್ತ ಪ್ರದೇಶ (ಟಿಎಆರ್)​ವನ್ನು ಪ್ರವಾಸಿ ವಲಯವನ್ನಾಗಿ ಮಾಡಿದೆ. ಹಾಗಂತ ಇದೊಂದೇ ಕಾರಣವಲ್ಲ, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಸ್ಥಿರತೆಯ ಕಾವು ತಣಿಸುವ ಚೀನಾದ ಪ್ರಯತ್ನವೂ ಇಲ್ಲಿ ಅಡಗಿದೆ.

ಬೀಜಿಂಗ್ ಸರ್ಕಾರವು ಟಿಬೆಟ್‌ನಲ್ಲಿ ತನ್ನ ದಮನಕಾರಿ ನೀತಿಗಳನ್ನು ಸಮರ್ಥಿಸಿಕೊಳ್ಳಲು ಈ ಪ್ರದೇಶದ ಆರ್ಥಿಕ ಬೆಳವಣಿಗೆಯ ನೆಪ ಒಡ್ಡುತ್ತಿದೆ. ಒಂದೆಡೆ ಈ ಪ್ರದೇಶವು ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದರೆ, ಮಾನವ ಅಭಿವೃದ್ಧಿಯ ಪ್ರಕಾರ ಚೀನಾದಲ್ಲಿ ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶ ಇದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.