ಕಾಬೂಲ್ (ಅಫ್ಘಾನಿಸ್ತಾನ): ಅಫ್ಘನ್ನಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿಮೀರಿದೆ. ಅಫ್ಘನ್ ಜಾನಪದ ಗಾಯಕ ಫವಾದ್ ಅಂಡರಾಬಿಯನ್ನು ಉಗ್ರರು ಹತ್ಯೆಗೈದಿದ್ದಾರೆ ಎಂದು ಆತನ ಕುಟುಂಬ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ ಜಾನಪದ ಗೀತೆಗಳ ಮೂಲಕ ಜನರನ್ನು ರಂಜಿಸುತ್ತಿದ್ದ ಫವಾದ್ ಅಂಡರಾಬಿ ಮನೆಗೆ ನುಗ್ಗಿದ ಉಗ್ರರು, ಆತನನ್ನು ಹೊರಗೆಳೆದೊಯ್ದು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಫವಾದ್ ಅಂಡರಾಬಿ ಪುತ್ರ, ನನಗೆ ನ್ಯಾಯಬೇಕೆಂದು ತಾಲಿಬಾನ್ ಕೌನ್ಸಿಲ್ ಮೊರೆ ಹೋಗಿದ್ದಾನೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ನಮ್ಮ ಸಂಘಟನೆಯ ಸದಸ್ಯರು ತನಿಖೆ ನಡೆಸುತ್ತಿದ್ದಾರೆ. ಆದರೆ, ಹತ್ಯೆಗೆ ಸಂಬಂಧಿಸಿದಂತೆ ನಮಗೆ ಯಾವುದೇ ಮಾಹಿತಿಗಳಿಲ್ಲ ಎಂದಿದ್ದಾರೆ.
ಅಂದರಬಿಯು ಘಿಚಕ್, ಬಿಲ್ಲು ವೀಣೆ ನುಡಿಸುವಲ್ಲಿ ಪ್ರವೀಣರಾಗಿದ್ದರು. ಅವರು ಜಾನಪದ ಗೀತೆಗಳ ಮೂಲಕ ಅಫ್ಘನ್ ಸಂಸ್ಕೃತಿಯನ್ನು ಸಾರುತ್ತಿದ್ದರು.
ಇದನ್ನೂ ಓದಿ: ಕಾಬೂಲ್ ಏರ್ಪೋರ್ಟ್ ಬಳಿ ರಾಕೆಟ್ ದಾಳಿ: ಕಂದಮ್ಮ ಬಲಿ
ವಿಶ್ವಸಂಸ್ಥೆಯ ಸಾಂಸ್ಕೃತಿಕ ಹಕ್ಕುಗಳ ವಿಶೇಷ ವರದಿಗಾರ್ತಿ ಕರಿಮಾ ಬೆನ್ನೌನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ನನ್ನ ತಾಯ್ನಾಡಿನಂತಹ ದೇಶ ಪ್ರಪಂಚದಲ್ಲಿಲ್ಲ, ನಮ್ಮದು ಹೆಮ್ಮೆಯ ರಾಷ್ಟ್ರ’ ಎಂದು ಅವರು ಹಾಡುತ್ತಿದ್ದರು. ಕಲಾವಿದರ ಹಕ್ಕುಗಳನ್ನು ಗೌರವಿಸುವಂತೆ ನಾವು ಸರ್ಕಾರಗಳಿಗೆ ಕರೆ ನೀಡುತ್ತೇವೆ ಎಂದು ಬರೆದಿದ್ದಾರೆ.