ಕಾಬೂಲ್:ಅಫ್ಘಾನಿಸ್ತಾನದ ಯುಎಸ್ ರಾಯಭಾರ ಕಚೇರಿ ಬಳಿ ಪ್ರಬಲ ಸ್ಫೋಟ ಸಂಭವಿಸಿದ್ದು, ವಿವಿಧ ರಾಷ್ಟ್ರಗಳ ದೂತಾವಾಸ ಕಚೇರಿಗಳಿರುವ ಕಟ್ಟಡದ ಬಳಿ ಹೊಗೆ ಆವರಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
9/11 ರ ಅಮೇರಿಕಾ ವಿಶ್ವ ವಾಣಿಜ್ಯ ಕೇಂದ್ರ ದಾಳಿಯ 18ನೇ ವಾರ್ಷಿಕೋತ್ಸವದಂದೇ ಸ್ಫೋಟ ಸಂಭವಿಸಿದ್ದು, ರಾಕೆಟ್ನಿಂದಾಗ ಸ್ಪೋಟವಾಗಿದೆ ಎಂದು ಸ್ಥಳೀಯ ಪತ್ರಕರ್ತ ಜವಾದ್ ಜಲಾಲಿ ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನ್ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸ್ಪೋಟದಿಂದ ಯಾವುದೇ ಸಾವು ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಮತ್ತು ಯಾವುದೇ ಗುಂಪು, ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿ ಮಾತುಕತೆಗಳನ್ನು ಕೊನೆಗೊಳಿಸಿದ ಬಳಿಕ ತಾಲಿಬಾನ್ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿತ್ತು. ಇದಾದ ಒಂದು ದಿನದ ಅಂತರದಲ್ಲೇ ಸ್ಪೋಟ ಸಂಭವಿಸಿದ್ದು, ಕರಾಳ ದಿನದ ವರ್ಷಾಚರಣೆ ಸಂದರ್ಭದಲ್ಲೇ ಮತ್ತೊಂದು ಕರಾಳ ಕೃತ್ಯವನ್ನು ಉಗ್ರರು ನಡೆಸಿದ್ದಾರೆ.