ETV Bharat / international

ಬೈರುತ್​ನಲ್ಲಿ ಮತ್ತೊಂದು ​ಸ್ಫೋಟ: ನಾಲ್ವರು ಬಲಿ, ಹಲವರಿಗೆ ಗಾಯ

author img

By

Published : Oct 10, 2020, 12:23 PM IST

Updated : Oct 10, 2020, 1:28 PM IST

ಬೈರುತ್‌ನ ಜನನಿಬಿಡ ಪ್ರದೇಶದಲ್ಲಿರುವ ಇಂಧನ ಡಿಪೋವೊಂದರಲ್ಲಿ ತೈಲ ಟ್ಯಾಂಕ್​ ಸ್ಫೋಟಗೊಂಡು ನಾಲ್ವರು ಮೃತಪಟ್ಟಿದ್ದಾರೆ.

Explosion at fuel depot in Beirut kills 4 people
ಬೈರುತ್​ನಲ್ಲಿ ​ಸ್ಫೋಟ

ಬೈರುತ್: ಲೆಬನಾನ್ ದೇಶದ ರಾಜಧಾನಿ ಬೈರುತ್​ ಇದೀಗ ಮತ್ತೊಂದು ಸ್ಫೋಟಕ್ಕೆ ಸಾಕ್ಷಿಯಾಗಿದೆ. ಬೈರುತ್​ನಲ್ಲಿ ತೈಲ ಟ್ಯಾಂಕ್​ ಸ್ಫೋಟಗೊಂಡು ನಾಲ್ವರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬೈರುತ್​ನಲ್ಲಿ ತೈಲ ಟ್ಯಾಂಕ್​ ಸ್ಫೋಟ

ಬೈರುತ್‌ನ ಜನನಿಬಿಡ ಪ್ರದೇಶದಲ್ಲಿರುವ ಇಂಧನ ಡಿಪೋವೊಂದರಲ್ಲಿ ಸ್ಫೋಟ ಸಂಭವಿಸಿದೆ ಎಂದು ಲೆಬನಾನ್​ ರೆಡ್‌ಕ್ರಾಸ್ ಸಂಸ್ಥೆ ತಿಳಿಸಿದೆ. ಡಿಪೋ ಮಾಲೀಕರು ಬೃಹತ್​ ಪ್ರಮಾಣದ ಡೀಸೆಲ್ ಅನ್ನು ಸಂಗ್ರಹಿಸಿಟ್ಟಿದ್ದರಿಂದ ಅವಘಡ ನಡೆದಿದೆ ಎಂದು ಡಿಪೋದಲ್ಲಿರುವ ಕಟ್ಟಡದ ನಿವಾಸಿಯೊಬ್ಬರು ಹೇಳುತ್ತಾರೆ. ಗ್ಯಾಸೋಲಿನ್ ತುಂಬಿರುವ ಕ್ಯಾನ್​ಗಳು ಡಿಪೋದಲ್ಲಿದ್ದವು, ಹೀಗಾಗಿ ದುರಂತ ನಡೆದಿದೆ ಎಂದು ಇತರ ಮೂಲಗಳು ತಿಳಿಸಿವೆ.

ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಡಿಪೋದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತೇ ಎಂದು ತಜ್ಞರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ವೈದ್ಯಕೀಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಬೈರುತ್ ಬಂದರು ಪ್ರದೇಶದಲ್ಲಿ ಆಗಸ್ಟ್​ 4 ರಂದು ಸಂಭವಿಸಿದ ಭಾರಿ ಸ್ಫೋಟದಲ್ಲಿ 135 ಮಂದಿ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದರು. ಸ್ಫೋಟದ ಹೊಣೆ ಹೊತ್ತು ಪ್ರಧಾನಿ ಹಸನ್ ದಿಯಾಬ್​ ರಾಜೀನಾಮೆ ನೀಡಿದ್ದರು. ಅಧಿಕಾರಿಗಳು ಸೇರಿದಂತೆ 16 ಬಂದರು ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿತ್ತು.

Last Updated : Oct 10, 2020, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.