ಕಠ್ಮಂಡು(ನೇಪಾಳ): ನೇಪಾಳದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಸಂಶೋಧನಾ ಕೇಂದ್ರದ ಪ್ರಕಾರ, ಬುಧವಾರ ಬೆಳಿಗ್ಗೆ ದೇಶದ ಕೆಲವೆಡೆ ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ.
ಬೆಳಿಗ್ಗೆ 5:42 (ಸ್ಥಳೀಯ ಸಮಯ) ರ ಸುಮಾರಿಗೆ ರಾಜಧಾನಿ ಕಠ್ಮಂಡುವಿನ 113 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರ ಬಿಂದು ಇಂದು ಬೆಳಿಗ್ಗೆ 5:42 ಗಂಟೆಗೆ (ಸ್ಥಳೀಯ ಸಮಯ) ಲ್ಯಾಮ್‌ಜಂಗ್ ಜಿಲ್ಲೆಯ ಭುಲ್‌ಬುಲೆ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.