ETV Bharat / international

ಜಪಾನ್‌ನಲ್ಲಿ 6.1 ತೀವ್ರತೆಯ ಭೂಕಂಪ: 'ಸುನಾಮಿ ಮುನ್ಸೂಚನೆ ಇಲ್ಲ' - 6.1 struck

ಕೊರಿಯಾದಲ್ಲಿ ಪೂರ್ವ ಸಮುದ್ರ ಎಂದು ಕರೆಯಲ್ಪಡುವ ಜಪಾನ್ ಸಮುದ್ರದ 368 ಕಿಲೋಮೀಟರ್ (228 ಮೈಲಿ) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ (ಯುಎಸ್ಜಿಎಸ್) ಹೇಳಿದೆ.

Earthquake
ಭೂಕಂಪ
author img

By

Published : Sep 29, 2021, 6:45 PM IST

ಟೋಕಿಯೋ: ಜಪಾನ್‌ನ ವಾಯುವ್ಯ ಕರಾವಳಿಯಲ್ಲಿ ಬುಧವಾರ ಭೂಕಂಪ ಸಂಭವಿಸಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ರಿಕ್ಟರ್​ ಮಾಪಕದಲ್ಲಿ ಅದರ ತೀವ್ರತೆಯು 6.1 ರಷ್ಟು ದಾಖಲಾಗಿದೆ. ಬೆಳಗ್ಗೆ 5 ಗಂಟೆ 16 ನಿಮಿಷದ ಸುಮಾರಿನಲ್ಲಿ ಜನರಿಗೆ ಭೂಕಂಪನದ ಅನುಭವ ಆಗಿದೆ. ಆದರೆ, ಇದು ಯಾವುದೇ ಸುನಾಮಿ ಮುನ್ಸೂಚನೆ ಅಲ್ಲ ಎಂದು ಜಪಾನ್​ ಮತ್ತು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಈಶಾನ್ಯ ಕರಾವಳಿಯ ಭಾಗದಲ್ಲಿ ಜನರಿಗೆ ಭೂಕಂಪದ ಅನುಭವವಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಾಣಹಾನಿ-ಆಸ್ತಿಪಾಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ.

ಕೊರಿಯಾದಲ್ಲಿ ಪೂರ್ವ ಸಮುದ್ರ ಎಂದು ಕರೆಯಲ್ಪಡುವ ಜಪಾನ್ ಸಮುದ್ರದ 368 ಕಿಲೋಮೀಟರ್ (228 ಮೈಲಿ) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ (ಯುಎಸ್ಜಿಎಸ್) ಹೇಳಿದೆ.

ಇದನ್ನೂ ಓದಿ: ಜಪಾನ್ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಆಯ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.