ಬಲೂಚಿಸ್ತಾನ್: ಪಾಕಿಸ್ತಾನದ ಕ್ವೆಟ್ಟಾ ಮಸೀದಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿ 10 ಮಂದಿ ಸಾವನ್ನಪ್ಪಿದ್ದಾರೆ.
ಕ್ವೆಟ್ಟಾದ ಸ್ಯಾಟಲೈಟ್ ಟೌನ್ ಪ್ರದೇಶದಲ್ಲಿರುವ ಮಸೀದಿಯಲ್ಲಿ ಘಟನೆ ನಡೆದಿದ್ದು, 20 ಜನರು ಗಾಯಗೊಂಡಿದ್ದಾರೆ. 10 ಜನ ಮೃತಪಟ್ಟವರಲ್ಲಿ ಡಿಎಸ್ಪಿ ಅಮಾನುಲ್ಲಾ ಕೂಡ ಒಬ್ಬರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
-
#UPDATE Balochistan: Ten persons, including a police officer, killed in a blast inside a mosque in Quetta today. #Pakistan https://t.co/0HwEUJLTMP pic.twitter.com/dsoDAwSmK0
— ANI (@ANI) January 10, 2020 " class="align-text-top noRightClick twitterSection" data="
">#UPDATE Balochistan: Ten persons, including a police officer, killed in a blast inside a mosque in Quetta today. #Pakistan https://t.co/0HwEUJLTMP pic.twitter.com/dsoDAwSmK0
— ANI (@ANI) January 10, 2020#UPDATE Balochistan: Ten persons, including a police officer, killed in a blast inside a mosque in Quetta today. #Pakistan https://t.co/0HwEUJLTMP pic.twitter.com/dsoDAwSmK0
— ANI (@ANI) January 10, 2020
ಸ್ಯಾಟಲೈಟ್ ಟೌನ್ ಪ್ರದೇಶದ ಬಳಿ ಇರುವ ಘೌಸಾಬಾದ್ನಲ್ಲಿ ನಮಾಜ್ ನಡೆದ ಕೆಲವೇ ಕ್ಷಣಗಳಲ್ಲಿ ಸಂಭವಿಸಿದೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ. ಇನ್ನು ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಕ್ಷಣಾ ಸಿಬ್ಬಂದಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.