ETV Bharat / international

ಪಾಪ್‌ಕಾರ್ನ್‌ ಮಾರಿ ಪೈಲಟಾದ, ಸ್ವಂತ ಪ್ಲೇನ್‌ ನಿರ್ಮಿಸಿದ.. ಬಾಲ್ಯದ ಬಾನ್ನೆತ್ತರದ ಕನಸು ಕೈಗೂಡಿದಾಗ!

ಬರಿ ಕನಸುಗಳನ್ನು ಕಂಡರೆ ಸಾಕೆ? ಅವುಗಳು ನನಸಾಗೋದು ಯಾವಾಗ? ಹೀಗೆ...ನೂರೆಂಟು ವಿಘ್ನಗಳನ್ನು ದಾಟಿದ ಯುವಕನೊಬ್ಬ ಸಾಹಸಗೈಯುವ ಮೂಲಕ ಇದೀಗ ಎಲ್ಲರ ಗಮನ ಸೆಳೆದಿದ್ದಾನೆ.

author img

By

Published : Apr 10, 2019, 6:59 PM IST

Updated : Apr 10, 2019, 7:35 PM IST

ಬಾಲ್ಯದ ಕನಸನ್ನು ನನಸಾಗಿಸಿಕೊಂಡ ಮೊಹ್ಮದ್‌ ಫಯಾಜ್‌.

ಪಾಕಪಟ್ಟಣ (ಪಾಕಿಸ್ತಾನ): ಕನಸುಗಳಿಗೆ ಕಾಸು ಬೇಕಿಲ್ಲ, ವಿದ್ಯೆನೂ ಬೇಕಿಲ್ಲ. ಎಂಥವರೇ ಆದರೂ ಕನಸು ಕಾಣಬಹುದು. ಹಾಗೇ ಎಷ್ಟೇ ಸಂಕಷ್ಟಗಳ ಮಧ್ಯೆಯೇ ಕಂಡ ಕನಸು ನನಸಾಗಿಸಿಕೊಳ್ಳಲೂ ಸಾಧ್ಯವಿದೆ. ಕನಸಿನ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಅಂದ್ರೇ ಇಲ್ಲೊಬ್ಬ ಕನಸುಗಾರ ಬರೀ ಕನಸು ಕಂಡಿಲ್ಲ. ಅದನ್ನ ಹೇಗೆ ನನಸು ಮಾಡಿಕೊಂಡಿದ್ದಾನೆ ಅಂತಾ ತಿಳಿದ್ರೇ ವಾರೇ ವ್ಹಾ ಅಂತೀರಾ.

ಪಾಕ್‌ನಾದ್ಯಂತ ಹಲ್‌ಚಲ್‌ ಸೃಷ್ಟಿಸಿದ ಕನಸುಗಾರ :

ಮೊಹ್ಮದ್‌ ಫಯಾಜ್‌ ಈತನಿಗೀಗ 30 ವರ್ಷ. ಪಾಕ್‌ನ ಪಂಜಾಬ್‌ ಪ್ರಾಂತ್ಯದ ಪಾಕಪಟ್ಟಣದ ನಿವಾಸಿ. ಪಾಕ್‌ ತುಂಬ ಈತ ಹಲ್‌ಚಲ್‌ ಸೃಷ್ಟಿಸಿದ್ದಾರೆ. ಆತನಿಗೆ ತಾನೊಬ್ಬ ಪೈಲಟ್​ ಆಗಬೇಕು ಅನ್ನೋ ಆಸೆ. ಅದಕ್ಕೆ ನೂರೆಂಟು ವಿಘ್ನ. ಹಾಗಂತಾ ಅವನೇನೂ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಅಂದ್ಕೊಂಡ ಕನಸು ನನಸಾಗಿಸಲು ತಾನೇ ಒಂದು ವಿಮಾನ ರೂಪಿಸಿದ. ಕನಸು ಈಡೇರಿಸಿಕೊಳ್ಳುವ ಭರದಲ್ಲಿ ಹೊಸ ಆವಿಷ್ಕಾರ ಮಾಡಿ ಮುಗಿಸಿದ್ದ ಕನಸುಗಾರ. ಹಗಿಲನಲ್ಲಿ ಹೊಟ್ಟೆಪಾಡಿಗೆ ಪಾಪ್‌ಕಾರ್ನ್‌ ಮಾರಾಟ ನಿತ್ಯದ ಕಾಯಕ. ಇದರ ಜತೆಗೆ ರಾತ್ರಿಯಾದ್ರೇ ಸೆಕ್ಯೂರಿಟಿ ಗಾರ್ಡ್‌. ಇಂಥವರು ಇನ್ನೇನ್ ಕನಸು ಕಾಣೋಕೆ ಸಾಧ್ಯ. ಆದರೆ, ಫಯಾಜ್ ಒಬ್ಬ ಅದ್ಭುತ ಕನಸುಗಾರ. ಕಂಡ ಕನಸು ನನಸಾಗಿಸಿಕೊಂಡು ಈಗ ಆಗಸದಲ್ಲೂ ಹಾರಾಟ ನಡೆಸಿದ್ದಾನೆ.

Dream Of Being A Pilot, Build His Own Airplane
ಬಾನೆತ್ತರಕ್ಕೆ ಹಾರುವ ಮುನ್ನ ಕನಸುಗಾರನ ತಯಾರಿ ಹೀಗಿತ್ತು.

ಬಾಲ್ಯದ ಕನಸು ಬೆನ್ನತ್ತಿ ಹೊರಟಾಗ ನೂರೆಂಟು ವಿಘ್ನ :

ಇತ್ಲಾಗ.. ಪಾಪ್‌ಕಾರ್ನ್‌, ಸೆಕ್ಯೂರಿಟಿ ಗಾರ್ಡ್‌ ಇದರ ಜತೆಗೆ ಪೈಲಟ್‌ ಒಂದಕ್ಕೊಂದು ಸಂಬಂಧವೇ ಇಲ್ವ ಅಲ್ವೇ.. ಆದರೂ ನಿಜ. ನೆಲದ ಮೇಲಿದ್ದವನಿಗೆ ಮುಗಿಲೆತ್ತರಕ್ಕೆ ಹಾರುವ ಧಾವಂತ. ಶಾಲಾ ದಿನಗಳಲ್ಲಿ ಆಗಸದಲ್ಲಿ ಹಾರುತ್ತಿದ್ದ ವಿಮಾನ ನೋಡಿದಾಗೆಲ್ಲ ತಾವೂ ಹೀಗೆ ಯಾವಾಗ ಹಾರಾಡುವೆ ಅಂತಾ ಅಂದ್ಕೊಳ್ತಾಯಿದ್ದ. ಓದಿ ಮುಂದೆ ಪೈಲಟ್​ ಆಗಲು, ಕೈಯಲ್ಲಿ ದುಡ್ಡಿರಲಿಲ್ಲ. ಉನ್ನತ ಶಿಕ್ಷಣ ಮಾಡದೇ ಹೊಟ್ಟೆಪಾಡಿಗೆ ಪಾಪ್‌ಕಾರ್ನ್‌ ಮಾರಲು ಮುಂದಾದ. ಹಾಗೇ ತಾನು ಅಂದ್ಕೊಂಡಂತೆ ವಿಮಾನವನ್ನ ತಾನೇ ತನ್ನ ಸ್ವಂತ ಹಣದಿಂದ ರೂಪಿಸಿ, ತಾನೊಬ್ಬನೇ ಹಾರಾಟವನ್ನೂ ನಡೆಸಿಬಿಟ್ಟಿದ್ದರು ಫಯಾಜ್‌.

ಕನಸೇನೋ ಈಡೇರಿತು, ಆದರೆ ಕೈಗೆ ಕೋಳ ಬಿತ್ತು :

ಅದು ಮಾರ್ಚ್‌ 31, 2019. ಫಯಾಜ್‌ ಹಾರಿಸಿದ್ದ ವಿಮಾನವನ್ನ ತಡೆದಿದ್ದರು ಸ್ಥಳೀಯ ಪೊಲೀಸರು. ಅಧಿಕೃತ ಮಾನ್ಯತೆ ಇರದೇ ಹಾರಾಟ ನಡೆಸದಂತೆ ತಾಕೀತು ಮಾಡಿದ್ದರು. ಫಯಾಜ್‌ ಬಳಿಯ ವಿಮಾನ ವಶಕ್ಕೆ ಪಡೆದಿದ್ದರು. ಈತನನ್ನ ಬಂಧಿಸಿದ್ದಷ್ಟೇ ಅಲ್ಲ, ಕೇಸ್‌ ಕೂಡ ಹಾಕಿ ಜೈಲಿಗಟ್ಟಿದ್ದರು. ವಿಮಾನ ಹಾರಾಟ ನಡೆಸಲು ಈತ ತರಬೇತಿ ಪಡೆದಿಲ್ಲ. 'ಎಲ್ಲಕ್ಕಿಂತ ಹೆಚ್ಚಾಗಿ ಸುರಕ್ಷಾ ಕ್ರಮಗಳನ್ನ ಅಳವಡಿಸಿಕೊಂಡಿಲ್ಲ. ಈತನ ಬಳಿ ಪ್ಯಾರಾಚೂಟ್‌ ಸಹ ಇಲ್ಲ. ಒಂದು ವೇಳೆ ವಿಮಾನ ಅಪಘಾತಕ್ಕೀಡಾದ್ರೇ ಆಗ ದುರಂತ ತಪ್ಪಿಸೋದಕ್ಕಾಗಲ್ಲ' ಅಂತಾ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಫಯಾಜ್‌ನ ಕೋರ್ಟ್‌ಗೆ ಕೂಡ ಹಾಜರುಪಡಿಸಲಾಗಿತ್ತು. ಈಗ 3 ಸಾವಿರ ದಂಡ ಕಟ್ಟಿಸಿಕೊಂಡು ಬೇಲ್‌ ಮೇಲೆ ಬಿಡುಗಡೆ ಮಾಡಲಾಗಿದೆ.

ಅಂದುಕೊಂಡಿದ್ದ ಕನಸನ್ನು ನನಸಾಗಿಸಿಕೊಂಡ ಮೊಹ್ಮದ್‌ ಫಯಾಜ್‌.

₹90 ಸಾವಿರ ವೆಚ್ಚದಲ್ಲಿ ವಿಮಾನ ನಿರ್ಮಿಸಿದ ಫಯಾಜ್:

'ಆಗಸದಲ್ಲಿ ಹಾರಾಡುತ್ತಿದ್ದ ವಿಮಾನಗಳನ್ನ ನೋಡಿದಾಗಲೆಲ್ಲ, ನಾನೂ ಒಂದು ದಿನ ಹೀಗೆ ಒಬ್ಬನೇ ವಿಮಾನದಲ್ಲಿ ಹಾರಾಟ ನಡೆಸಬೇಕು ಅಂತಾ ಅಂದ್ಕೊಳ್ತಾಯಿದ್ದೆ. ಮುಂದೆ ದೇವರ ದಯೆಯಿಂದಾಗಿ ನಾನೂ ಕ್ರಿಯೇಟಿವಾಗಿ ಯೋಚನೆ ಮಾಡಿದೆ. ನಾನೇ ಒಂದು ವಿಮಾನ ತಯಾರಿಸಿದೆ. ಹಾಗೇ ಅದರಲ್ಲಿ ಹಾರಾಟ ನಡೆಸಿ ನನ್ನ ಕನಸು ಈಡೇರಿಸಿಕೊಂಡ ತೃಪ್ತಿ ಸಿಕ್ಕಿತು' ಎಂದು ಮೊಹ್ಮದ್‌ ಫಯಾಜ್ ಹೇಳಿಕೊಂಡಿದ್ದಾರೆ. ವಿಮಾನ ನಿರ್ಮಿಸಲು ಫಯಾಜ್‌ 90 ಸಾವಿರ ರೂ. ಖರ್ಚು ಮಾಡಿದ್ದಾರೆ. ಬ್ಯಾಂಕ್‌ನಿಂದ 44, 239 ರೂ. ಸಾಲ ಪಡೆದಿದ್ರೇ, ಒಂದೊಂದು ರೂಪಾಯಿ ಕೂಡಿಟ್ಟು ವಿಮಾನ ನಿರ್ಮಿಸಲು ಬಳಸಿದ್ದಾರೆ. ಅಲ್ಲಿಇಲ್ಲಿ ಬಿದ್ದ ಸಣ್ಣ ಸಣ್ಣ ವಸ್ತುಗಳನ್ನೇ ಬಳಸಿದ್ದಾರೆ.

ಹಗಲಿನಲ್ಲಿ ಪಾಪ್‌ಕಾರ್ನ್‌ ಸೇಲ್‌, ರಾತ್ರಿಯಾದ್ರೇ ವಾಚ್‌ಮೆನ್‌:

ಎಂಥಾ ತಾಳ್ಮೆ, ಅದೆಂಥಾ ಪರಿಶ್ರಮ. ಹಗಲಿನಲ್ಲಿ ಪಾಪ್‌ಕಾರ್ನ್‌ ಮಾರಿದ್ರೇ, ರಾತ್ರಿ ವಾಚ್‌ಮೆನ್‌ ಆಗಿಯೂ ಫಯಾಜ್‌ ಕೆಲಸ ಮಾಡಿದ್ದಾರೆ. ಅದೇ ಹಣ ಕೂಡಿಟ್ಟು ವಿಮಾನ ನಿರ್ಮಿಸಿದ್ದಾರೆ. ಒಬ್ಬರಿಂದಲೂ ಸಹಾಯ ಪಡೆದಿಲ್ಲ. ತಾಂತ್ರಿಕ ನೆರವೂ ಕೇಳಿಲ್ಲ. ಫ್ಲೈಯಿಂಗ್‌ ಟೆಕ್ನಿಕ್‌ಗಳು ಮತ್ತು ಗಾಳಿಯ ಒತ್ತಡದ ಸಾಮಾನ್ಯ ನಿಯಮಗಳನ್ನೇ ತಿಳಿದುಕೊಂಡು, ವಿಮಾನ ತಯಾರಿಗೆ ಪ್ರಯೋಗ ನಡೆಸಿದ್ದರು. ಒಂದು ದಿನ ಅದರಲ್ಲಿ ಯಶಸ್ವಿ ಆಗಿಯೂ ಬಿಟ್ಟಿದ್ದಾರೆ. ನ್ಯಾಷನಲ್‌ ಜಿಯೊಗ್ರಾಫಿಕ್‌ ಚಾನೆಲ್‌ಗಳಲ್ಲಿ ಬರುತ್ತಿದ್ದ ವಿಮಾನ ಅಪಘಾತಗಳ ತನಿಖಾ ಕಾರ್ಯಕ್ರಮಗಳನ್ನ ಹೆಚ್ಚು ನೋಡುತ್ತಿದ್ದ ಫಯಾಜ್‌ಗೆ ವಿಮಾನಗಳು ಮತ್ತು ಅವುಗಳ ಕಾರ್ಯ ವಿಧಾನಗಳು ಹೇಗೆ ಅನ್ನೋದನ್ನ ತಿಳಿಯಲು ಸಾಧ್ಯವಾಗಿದೆ.

ಬೆನ್ನುತಟ್ಟಿತು ಪಾಕ್‌ ನಾಗರಿಕ ವಿಮಾನಯಾನ ಪ್ರಾಧಿಕಾರ:

ಮಾರ್ಚ್‌ 23 ರಾಷ್ಟ್ರೀಯ ಧ್ವಜ ದಿನಾಚರಣೆ ಪ್ರಯುಕ್ತ ನಡೆದ ಕ್ರೀಡಾಕೂಟದಲ್ಲಿ ಮೊದಲ ಬಾರಿ ಸಿಂಗಲ್‌ ಸೀಟ್‌ನ ತನ್ನ ವಿಮಾನ ಹಾರಾಟ ನಡೆಸಲು ಯೋಚಿಸಿದ್ದ. ಪೊಲೀಸರು ಮತ್ತು ರಕ್ಷಣಾ ಸಂಸ್ಥೆಗಳಿಗೆ ಪರವಾನಗಿ ನೀಡಲು ಮನವಿ ಸಲ್ಲಿಸಿದ್ದ ಫಯಾಜ್‌ಗೆ, ವಿಮಾನ ಹಾರಾಟ ನಡೆಸಲು ಒಪ್ಪಿಗೆ ಕೊಟ್ಟಿರಲಿಲ್ಲ. ಆದರೆ, ಪಾಕ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರ, ವಿಮಾನ ತಯಾರಿಕೆಯಲ್ಲಿ ಫಯಾಜ್‌ಗಿರುವ ಪ್ಯಾಷನ್‌ ಮತ್ತು ಸ್ಕಿಲ್ಸ್‌ಗೆ ತಲೆದೂಗಿದೆ. ಅಷ್ಟೇ ಅಲ್ಲ, ಪರಿಣಿತರಿಂದ ಅವಶ್ಯಕ ಜ್ಞಾನ ನೀಡಲು ಮುಂದಾಗಿದೆ. ಮುಂದೆ ಇನ್ನೊಂದಿಷ್ಟು ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಫಯಾಜ್‌ಗೆ ಸಿಎಎ ಉತ್ತೇಜನ ನೀಡುತ್ತಿದೆ. ನಿಜಕ್ಕೂ ಗ್ರೇಟ್‌ ಕಣ್ರೀ ಈತ..

Intro:Body:

Dream Of Being A Pilot, Build His Own Airplane

Conclusion:
Last Updated : Apr 10, 2019, 7:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.