ಬೀಜಿಂಗ್: ಎಲ್ಲೆಡೆ ಕೊರೊನಾ ಭೀತಿ ಆವರಿಸಿದೆ. ಸದ್ಯ ಡ್ರ್ಯಾಗನ್ ರಾಷ್ಟ್ರದಲ್ಲಿ ಸಾವಿನ ಸಂಖ್ಯೆ 636ಕ್ಕೆ ಏರಿಕೆಯಾಗಿದೆ ಎಂದು ಚೀನಾದ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ವೈರಸ್ ಹರಡುವಿಕೆಯ ಪ್ರಮುಖ ಸ್ಥಳ ಹುಬೈ ಪ್ರದೇಶ ಮತ್ತು ಅದರ ಪ್ರಾಂತೀಯ ರಾಜಧಾನಿ ವುಹಾನ್ನಲ್ಲಿ ಸುಮಾರು 69 ಸಾವಿನ ಪ್ರಕರಣ ದಾಖಲಾಗಿವೆ. ಇನ್ನೂ ಜಿಲಿನ್, ಹೆನಾನ್, ಗುವಾಂಗ್‌ಡಾಂಗ್ ಮತ್ತು ಹೈನಾನ್ ಪ್ರದೇಶಗಳು ತಲಾ ಒಂದು ಪ್ರಕರಣ ವರದಿ ಮಾಡಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಗುರುವಾರದಂದು 73 ಮಂದಿ ಸಾವನ್ನಪ್ಪಿದ್ದಾರೆ. ಚೀನಾದ್ಯಂತ ಒಟ್ಟು 31,161 ಸೋಂಕಿನ ಪ್ರಕರಣ ವರದಿಯಾಗಿವೆ ಎಂದು ಆಯೋಗ ತಿಳಿಸಿದೆ. ವೈರಸ್ ಸೋಂಕಿಗೆ ಒಳಗಾದ ಒಟ್ಟು 1,540 ರೋಗಿಗಳು ಚೇತರಿಸಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆ ಜನ ಗುಣಮುಖವಾಗುತ್ತಿದ್ದಾರೆಂದು ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.