ETV Bharat / international

ಒಸಾಮಾ ಬಿನ್ ಲಾಡೆನ್ ಮಗ ಹಂಝಾ ಸಾವು: ಅಮೆರಿಕ ಅಧಿಕಾರಿಗಳ ಮಾಹಿತಿ - ಅಮೇರಿಕಾ, ಪಾಕಿಸ್ತಾನದ ಅಬೋಟಾಬಾದ್, ಅಲ್ ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ , ಒಸಾಮ ಮಗ ಹಂಝಾ ಬಿನ್ ಲಾಡೆನ್, ಹಂಝಾ ಬಿನ್ ಲಾಡೆನ್ ಸಾವು, ಅಮೇರಿಕಾ ಅಧಿಕಾರಿಗಳಿಂದ ಮಾಹಿತಿ,  ಅಂತರಾಷ್ಟ್ರೀಯ ಮಾಧ್ಯಮ ವರದಿ, ಕನ್ನಡ ವಾರ್ತೆ, ಈ ಟಿವಿ ಭಾರತ

ಅಮೆರಿಕ ಸೇನೆಯಿಂದ ಹತ್ಯೆಗೀಡಾಗಿದ್ದ ಅಲ್-ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಪುತ್ರ ಹಂಝಾ ಬಿನ್ ಲಾಡೆನ್ ಸಾವನ್ನಪ್ಪಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಬಗ್ಗೆ ಅಮೆರಿಕದ ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ಅದು ತಿಳಿಸಿದೆ.

ಒಸಾಮ ಬಿನ್ ಲಾಡೆನ್ ಮಗ ಹಂಝಾ ಸಾವು : ಅಮೇರಿಕಾ ಅಧಿಕಾರಿಗಳಿಂದ  ಮಾಹಿತಿ
author img

By

Published : Aug 1, 2019, 4:34 AM IST

ವಾಶಿಂಗ್ಟನ್​ ಡಿಸಿ (ಅಮೆರಿಕ): ಈ ಹಿಂದೆ ಹತ್ಯೆಗೀಡಾಗಿದ್ದ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಪುತ್ರ ಹಂಝಾ ಬಿನ್ ಲಾಡೆನ್ ಸಾವನ್ನಪಿರುವುದಾಗಿ ಅಂತರಾಷ್ಷ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಅಮೆರಿಕದ ಮೂವರು ಅಧಿಕಾರಿಗಳು ಈ ಮಾಹಿತಿ ನೀಡಿದ್ದಾಗಿ ಮಾಧ್ಯಮವೊಂದು ತಿಳಿಸಿದೆ. ಹಂಝಾ ಬಿನ್ ಲಾಡೆನ್ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಕಳೆದ ಫೆಬ್ರವರಿಯಲ್ಲಿ ಘೋಷಿಸಿತ್ತು.

ಹಂಝಾ ಬಿನ್ ಲಾಡೆನ್ ಯಾವಾಗ, ಎಲ್ಲಿ, ಹೇಗೆ ಸಾವನ್ನಪ್ಪಿದ ಮತ್ತು ಹಂಝಾ ಸಾವಿನಲ್ಲಿ ಅಮೆರಿಕ ಪಾತ್ರವೇನು ಎಂಬುದರ ಬಗ್ಗೆ ಅಧಿಕಾರಿಗಳು ದೃಢಪಡಿಸಿಲ್ಲ ಎನ್ನಲಾಗ್ತಿದೆ.

ಹಂಝಾ ಕೊನೆಯ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು 2018ರಲ್ಲಿ. ಅಲ್ ಖೈದಾದ ಮಾಧ್ಯಮ ವಿಭಾಗ 2018ರಲ್ಲಿ ಬಿಡುಗಡೆ ಹೇಳಿಕೆಯಲ್ಲಿ, ಆತ ಸೌದಿ ಅರೇಬಿಯಾಗೆ ಬೆದರಿಕೆ ಹಾಕಿದ್ದ ಮತ್ತು ಅರೇಬಿಯನ್ ಪರ್ಯಾಯ ದ್ವೀಪದ ಜನರನ್ನು ದಂಗೆ ಏಳುವಂತೆ ಕರೆ ನೀಡಿದ್ದ. ಅಂತಾರಾಷ್ಟ್ರೀಯ ಸಂಸ್ಥೆಯ ಪ್ರಕಾರ, ಪೆಂಟಗಾನ್ ದಾಳಿಯ ಹಿಂದೆ ಹಂಝಾ ಪ್ರಮುಖ ಪಾತ್ರ ವಹಿಸಿದ್ದ ಎಂದು ಹೇಳಲಾಗುತ್ತಿದೆ.

2011 ರಲ್ಲಿ ಅಮೆರಿಕ ನೇವಿ ಸೀಲ್ಸ್ ಒಸಾಮಾ ಬಿನ್ ಲಾಡೆನ್ ತಂಗಿದ್ದ ಪಾಕಿಸ್ತಾನದ ಅಬೋಟಾಬಾದ್ ಮನೆ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಒಸಾಮಾ ಬಿನ್ ಲಾಡೆನ್ ಮತ್ತು ಆತನ ಪುತ್ರ ಖಾಲಿದ್ ನನ್ನು ಹತ್ಯೆ ಮಾಡಲಾಗಿತ್ತು. ಆದರೆ ಆ ದಾಳಿಯಿಂದ ಹಂಝಾ ತಪ್ಪಿಸಿಕೊಂಡಿದ್ದ.

29 ವರ್ಷದ ಹಂಝಾ, ಒಸಾಮಾ ಬಿನ್ ಲಾಡೆನ್ ನ ಮೂವರು ಪತ್ನಿಯರಲ್ಲಿ ಒಬ್ಬಳಾದ ಸೌದಿ ಅರೇಬಿಯಾ ಮೂಲದ ಖೈರಿಯಾ ಸಬಾರ್ ಳ ಮಗನಾಗಿದ್ದಾನೆ. ಅಬೋಟಾಬಾದ್ ಮನೆ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದ ಬಳಿಕ ಒಸಾಮಾ ಬಿನ್ ಲಾಡೆನ್ ಪತ್ನಿಯರನ್ನು ಪಾಕಿಸ್ತಾನ ಗುಪ್ತಚರ ಇಲಾಖೆ ವಿಚಾರಣೆ ನಡೆಸಿತ್ತು. ಆ ಸಂದರ್ಭದಲ್ಲಿ ಹಂಝಾ ದಾಳಿಯಲ್ಲಿ ಸಾವನಪ್ಪಿಲ್ಲ ಬದುಕಿದ್ದಾನೆ ಎಂಬ ಮಾಹಿತಿ ಅಧಿಕಾರಿಗಳ ಗಮನಕ್ಕೆ ಬಂದಿತ್ತು.

ಒಸಾಮಾ ಬಿನ್ ಲಾಡೆನ್ ಹತ್ಯೆ ಬಳಿಕ ಆತನ ಮನೆಯಲ್ಲಿ ಅಮೆರಿಕ ಸೇನೆ ಶೋಧ ಕಾರ್ಯ ನಡೆಸಿತ್ತು. ಆಗ ಹಂಝಾ, ಅಲ್ ಖೈದಾದ "ಚೀಫ್ ಆಫ್ ಸ್ಟಾಫ್ ಅತಿಯಾ ಅಬ್ದುಲ್ ರಹ್ಮಾನ್ ಎಂಬುವನಿಗೆ ಬರೆದಿದ್ದ ಎನ್ನಲಾದ ಪತ್ರವೊಂದು ಅಧಿಕಾರಿಗಳಿಗೆ ದೊರಕಿತ್ತು. ಆ ಪತ್ರದಲ್ಲಿ ಅಬೋಟಾಬಾದ್ ದಾಳಿಯಲ್ಲಿ ಹಂಝಾ ಸಾವನಪ್ಪಿಲ್ಲ ಮತ್ತು ಆತನನನ್ನು ಬಂಧಿಸಲಾಗಿಲ್ಲ ಎಂದು ಬರೆಯಲಾಗಿತ್ತು. 2009 ರಲ್ಲಿ ಯುಎಸ್ ಡ್ರೋಣ್​ ದಾಳಿಯಲ್ಲಿ ಹಂಝಾನ ಅಣ್ಣ ಸಾದ್ ಸಾವನ್ನಪ್ಪಿದ ನಂತರ, ಒಸಾಮಾ ಬಿನ್ ಲಾಡೆನ್ ಹಂಝಾನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದ್ದನಂತೆ.

2007 ರಲ್ಲಿ ನಡೆದಿದ್ದ ಪಾಕಿಸ್ತಾನ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣದಲ್ಲಿ ಹಂಝಾ ಬಿನ್ ಲಾಡೆನನ್ನು ಬಂಧಿಸಲಾಗಿತ್ತು. ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸುವುದಾಗಿ ಹಂಝಾ ಅಮೆರಿಕಕ್ಕೆ ಬೆದರಿಕೆಯೊಡ್ಡುವ ಆಡಿಯೋವೊಂದನ್ನು 2016ರಲ್ಲಿ ಮಾಧ್ಯಮಗಳು ಬಿತ್ತರಿಸಿದ್ದವು.

ಅಲ್-ಖೈದಾದಲ್ಲಿ ಹಂಝಾ ಪ್ರಭಾವ ಹೆಚ್ಚುತ್ತಿರುವುದನ್ನು ಗಮನಿಸಿದ್ದ ಅಮೆರಿಕ, 2017 ರ ಜನವರಿಯಲ್ಲಿ ಹಂಝಾ ಬಿನ್ ಲಾಡೆನ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿತ್ತು ಮತ್ತುಆತನ ಸಾವಿಗೆ ಮುಹೂರ್ತ ಫಿಕ್ಸ್ ಮಾಡಿತ್ತು. ಇದೀಗ ಹಂಝಾ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ದೊರಕಿದ್ದು, ಇದು ದೃಢಪಟ್ಟಿಲ್ಲ.

Intro:Body:

international

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.