ETV Bharat / international

Watch: ಕಾಬೂಲ್​​​ನಲ್ಲಿ ಬಾಂಬ್​ ಸ್ಫೋಟಗೊಳ್ಳುವುದಕ್ಕೂ ಮುಂಚೆ ಜನ್ರು ಈ ರೀತಿ ಓಡಿದ್ರು!

author img

By

Published : Aug 27, 2021, 7:31 PM IST

Updated : Aug 27, 2021, 8:05 PM IST

ಅಫ್ಘಾನಿಸ್ತಾನದ ಕಾಬೂಲ್ ಏರ್​ಪೋರ್ಟ್​ನಲ್ಲಿ ಬಾಂಬ್​ ಸ್ಫೋಟಗೊಳ್ಳುವುದಕ್ಕೂ ಮುಂಚಿತವಾಗಿ ತಾಲಿಬಾನಿಗಳು ನಿರಂತರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ವೇಳೆ ಸಾವಿರಾರು ಜನರು ಓಡಿ ಹೋಗಿರುವ ಘಟನೆ ನಡೆದಿದೆ.

Afghan
Afghan

ಕಾಬೂಲ್​​(ಅಫ್ಘಾನಿಸ್ತಾನ): ಕಾಬೂಲ್​ ಏರ್​ಪೋರ್ಟ್​​ನಲ್ಲಿ ಸರಣಿ ಬಾಂಬ್​ ಸ್ಫೋಟಗೊಂಡಿರುವ ಪರಿಣಾಮ 85ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಮಹತ್ವದ ವಿಡಿಯೋ ತುಣಕುವೊಂದು ರಿಲೀಸ್​ ಆಗಿದೆ.

ಬಾಂಬ್​ ಸ್ಫೋಟಗೊಳ್ಳುವುದಕ್ಕೂ ಒಂದು ಗಂಟೆ ಮುಂಚಿತವಾಗಿ ಕಾಬೂಲ್ ಏರ್​ಪೋರ್ಟ್​​ನಲ್ಲಿ ಸಾವಿರಾರು ಪ್ರಯಾಣಿಕರು ಓಡಿ ಹೋಗುತ್ತಿರುವ ದೃಶ್ಯ ರಿಲೀಸ್ ಆಗಿದೆ. ಬಾಂಬ್​ ಸ್ಫೋಟವಾಗುವುದಕ್ಕೂ ಮುಂಚಿತವಾಗಿ ತಾಲಿಬಾನ್​​ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ವೇಳೆ ಜನ ಸಮೂಹ ಈ ರೀತಿಯಾಗಿ ಓಡಿ ಹೋಗಿದೆ.

ಇದನ್ನೂ ಓದಿರಿ: ಪತ್ನಿ ಜತೆಗಿನ ಬಲವಂತದ ಲೈಂಗಿಕ ಕ್ರಿಯೆ ರೇಪ್​​ ಅಲ್ಲವೆಂದ ಕೋರ್ಟ್​: ಕೆಂಡಾಮಂಡಲವಾದ ನಟಿ ತಾಪ್ಸಿ!

ಕಾಬೂಲ್​ ಏರ್​ಪೋರ್ಟ್​​ನಲ್ಲಿ ತಾಲಿಬಾನ್​ ಉಗ್ರರು ನಿರಂತರವಾಗಿ ಗಾಳಿಯಲ್ಲಿ ಗುಂಡಿನ ದಾಳಿ ನಡೆಸಿದ್ದು, ಈ ಮೂಲಕ ಅಲ್ಲಿನ ಜನರ ನಿಯಂತ್ರಣ ಮಾಡಲು ಮುಂದಾಗಿದೆ. ಈ ಘಟನೆ ನಡೆದ ಬೆನ್ನಲ್ಲೇ ಆತ್ಮಾಹುತಿ ಬಾಂಬರ್​ಗಳು ಸ್ಫೋಟಗೊಂಡಿರುವ ಕಾರಣ ಅಮೆರಿಕದ ಸೈನಿಕರು ಸೇರಿದಂತೆ ಅನೇಕರು ಸಾವನ್ನಪ್ಪಿದ್ದಾರೆ.

ಇದರ ಹೊಣೆ ಈಗಾಗಲೇ ತಾಲಿಬಾನ್​ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ತಾಲಿಬಾನ್​, ಅಮೆರಿಕ ಪಡೆ ದೇಶ ತೊರೆಯಲು ಆಗಸ್ಟ್​ 31ರವರೆಗೆ ಕೊನೆಯ ಗಡವು ನೀಡಲಾಗಿದೆ. ಈಗಾಗಲೇ ಯುಎಸ್ ಸೇನೆ ಸೇರಿದಂತೆ ವಿವಿಧ ದೇಶಗಳ ರಾಯಭಾರಿ ಕಚೇರಿ ಅಲ್ಲಿಂದ ಶಿಫ್ಟ್​ ಆಗುತ್ತಿವೆ.

Last Updated : Aug 27, 2021, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.