ETV Bharat / international

ಪಿಎಫ್​ ಹಣ ನಿರೀಕ್ಷಿಸುತ್ತಿದ್ದೀರಾ..? ನಿಮಗಿದು ಶಾಕಿಂಗ್​ ನ್ಯೂಸ್​ ...

ಸಾವಿರಾರು ಕೋಟಿ ಪಿಎಫ್ ಹಣವನ್ನು IL&FS ಗ್ರೂಪ್​ನಲ್ಲಿ ಹೂಡಿಕೆ ಮಾಡಿದ್ದ ಪ್ರಾವಿಡಂಟ್​ ಅಂಡ್​ ಪೆನ್ಷನ್​ ಫಂಡ್​ ಟ್ರಸ್ಟ್​ ತನ್ನ ಹಣವನ್ನೆ ಕಳೆದುಕೊಳ್ಳುವ ಭೀತಿಯಲ್ಲಿದ್ದು, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ವಿಚಾರಣ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದೆ.

mumbai
author img

By

Published : Feb 14, 2019, 3:27 PM IST

ಮುಂಬೈ: ಮದುವೆ ಮಾಡಲೋ, ಮನೆ ಕಟ್ಟಲೋ ತಮ್ಮ ಪಿಎಫ್​ ಹಣ ನಿರೀಕ್ಷಿಸುತ್ತಿರುವ ಭಾರತೀಯರಿಗೆ ಶಾಕ್​ ಆಗುವಂತಹ ಸುದ್ದಿ ಹರಿದಾಡುತ್ತಿದೆ. ಸಾವಿರಾರು ಕೋಟಿ ಪಿಎಫ್ ಹಣವನ್ನು IL&FS ಗ್ರೂಪ್​ನಲ್ಲಿ ಹೂಡಿಕೆ ಮಾಡಿದ್ದ ಪ್ರಾವಿಡಂಟ್​ ಅಂಡ್​ ಪೆನ್ಷನ್​ ಫಂಡ್​ ಟ್ರಸ್ಟ್​ ತನ್ನ ಹಣವನ್ನೆ ಕಳೆದುಕೊಳ್ಳುವ ಭೀತಿಯಲ್ಲಿದ್ದು, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ವಿಚಾರಣ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದೆ.

ಭಾರತೀಯರ ಪಿಎಫ್​ ಹಣವನ್ನು ಹೊಂದಿರುವ ಪ್ರಾವಿಡಂಟ್​ ಅಂಡ್​ ಪೆನ್ಷನ್​ ಫಂಡ್​ ಟ್ರಸ್ಟ್​ IL&FS ಗ್ರೂಪ್​ನ ಬಾಂಡ್​ಗಳಿಗೆ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಕಂಪನಿಗೆ ಟ್ರಸ್ಟ್​ ಹೂಡಿದ ಹಣ ಅಸುರಕ್ಷಿತ ಸಾಲದ ಸಾಲಿಗೆ ಸೇರಿದೆ. ಇದರಿಂದ ಟ್ರಸ್ಟ್​ ತನ್ನೆಲ್ಲ ಹಣವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಇದು ಹಲವಾರು ಪಿಎಫ್​ದಾರರನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ.

ಟ್ರಸ್ಟ್​ ಹೊರತಾಗಿಯೂ ಸಾರ್ವಜನಿಕ ಕಂಪನಿಗಳಾದ ಎಂಎಂಟಿಸಿ, ಇಂಡಿಯನ್​ಆಯಿಲ್​, ಸಿಐಡಿಸಿಒ,ಹೆಚ್​ಯುಡಿಸಿಒ, ಐಡಿಬಿಐ, ಎಸ್​ಬಿಐ ಹಾಗೂ ಗುಜರಾತ್​ ಹಾಗೂ ಹಿಮಾಚಲ ಪ್ರದೇಶದ ಎಲೆಕ್ಟ್ರಾನಿಕ್​ ಬೋರ್ಡ್​ಗಳು ಸಹ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿವೆ. ಖಾಸಗಿ ಕಂಪನಿಗಳಾದ ಹಿಂದೂಸ್ತಾನ್​ ಯೂನಿಲೀವರ್​ ಹಾಗೂ ಏಷಿಯನ್​ ಪೇಂಟ್ಸ್​ ಸಹ ಈ ಪಟ್ಟಿಯಲ್ಲಿವೆ ಎನ್ನಲಾಗಿದೆ.

14 ಲಕ್ಷ ನೌಕರರ 50 ವಿಧದ ನಿವೃತ್ತಿ ನಿಧಿಯನ್ನು IL&FS ಗ್ರೂಪ್​ನಲ್ಲಿ ಹೂಡಿಕೆ ಮಾಡಲಾಗಿದೆ. ಆದರೆ ಈ ಬಗ್ಗೆ ಗ್ರೂಪ್​ನ ವಕ್ತಾರ ಶರದ್​ ಗೋಯೆಲ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೂಲಗಳಂತೆ, ಗ್ರೂಪ್​ನಲ್ಲಿ 302 ಸಂಸ್ಥಗೆಳು ಬಂಡವಾಳ ಹೂಡಿದ್ದು, ಭಾರತದ 169 ಕಂಪನಿಗಳು ಸಹ ಇದರಲ್ಲಿವೆ. ತಮ್ಮ ಟ್ರಸ್ಟ್​ ಕಟ್ಟುಪಾಡುಗಳನ್ನು ಪಾಲಿಸಿದ 22 ಕಂಪನಿಗಳನ್ನು ಗ್ರೀನ್​ ವರ್ಗಕ್ಕೂ, ಸುರಕ್ಷಿತ ಸಾಲಗಾರರಿಗೆ ಮರುಪಾವತಿ ಮಾಡಬಲ್ಲ10 ಕಂಪನಿಗಳನ್ನು ಅಂಬರ್​ ವರ್ಗಕ್ಕೂ, ಅಂತೆಯೇ ತಮ್ಮ ನಿಯಮ ಪಾಲಿಸದ 38 ಕಂಪನಿಗಳನ್ನು ರೆಡ್​ ವರ್ಗಕ್ಕೂ ಸೇರಿಸಲಾಗಿದೆ. 100 ಕಂಪನಿಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸುರಕ್ಷಿತ ಸಾಲದಾತ ಬ್ಯಾಂಕ್​ಗಳು ಮಾತ್ರ ಬಾಕಿ ಮೊತ್ತವನ್ನು ಪಡೆದುಕೊಳ್ಳಲಿದ್ದು, ಅಸುರಕ್ಷಿತ ಬಾಂಡ್​ದಾರರು ಹೂಡಿಕೆ ಕಳೆದುಕೊಳ್ಳಲಿವೆ ಎನ್ನಲಾಗಿದೆ.

undefined

ಅಸುರಕ್ಷಿತ ಸಾಲದ ಪಟ್ಟಿಯಲ್ಲಿರುವ ಪ್ರಾವಿಡಂಟ್​ ಅಂಡ್​ ಪೆನ್ಷನ್​ ಫಂಡ್​ ಟ್ರಸ್ಟ್​ ಈಗ ಇದೇ ಆತಂಕ ಎದುರಿಸುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.