ETV Bharat / international

ಅಪರಾಧ, ಸಂಘರ್ಷ: ನರಕವಾದ ಅಫ್ಘಾನಿಸ್ತಾನ!

ನಾನು ಕೆಲಸಕ್ಕಾಗಿ ಕಾರನ್ನು ಹತ್ತಬೇಕಾದರೆ, ಆಫೀಸಿಗೆ ತೆರಳಬೇಕಾದರೆ, ಕಡೇ ಪಕ್ಷ ಮಸೀದಿಯಲ್ಲಿರಬೇಕಾದರೂ ಭಯವಾಗುತ್ತದೆ. ಜೀವನ ನರಕವಾಗಿದೆ ಎಂದು ಅಫ್ಘಾನಿಸ್ತಾನ ನಿವಾಸಿ ಅಳಲು ತೋಡಿಕೊಂಡಿದ್ದಾರೆ.

author img

By

Published : Feb 4, 2021, 8:14 PM IST

ಕಾಬೂಲ್ (ಅಫ್ಘಾನಿಸ್ತಾನ): ಖಾನ್​ ವಾಲಿ ಕಮ್ರಾನ್, ಕಾಬೂಲ್ ನಿವಾಸಿಯಾಗಿದ್ದು, ಅವನು ಕೆಲಸಕ್ಕೆ ಹೊರಬೇಕಾದರೆ ಮನೆಯಲ್ಲಿರುವ ತನ್ನ ನಾಲ್ಕು ಮಕ್ಕಳನ್ನು ಯಾರಾದರೂ ಕೊಂದು ಬಿಡುತ್ತಾರೆ ಎಂಬ ಭೀತಿಯಲ್ಲೇ ಹೊರಡುತ್ತಿದ್ದ.

ಕೆಲಸದಿಂದ ಬರುವ ವೇಳೆಯೂ ಆತನಲ್ಲಿ ದುಗುಡ ಕಡಿಮೆಯಾಗುತ್ತಿರಲಿಲ್ಲ. ಆತ ಕೊನೆಗೆ ಮಾಡಿದ್ದು, ದೂರದೂರಿನ ಪೋಷಕರ ಮನೆಯಲ್ಲಿ ಮಕ್ಕಳನ್ನು ಬಿಡುವ ಕೆಲಸ. ಈಗ ಅವನು ಮಕ್ಕಳ ಪ್ರಾಣದ ಬಗ್ಗೆ ಚಿಂತೆಯಿಲ್ಲದೇ ನಿರಾಳವಾಗಿದ್ದಾನೆ.

ಇದು ಖಾನ್​ ವಾಲಿ ಕಮ್ರಾನ್ ಕತೆ ಮಾತ್ರವಲ್ಲ... ಕಾಬೂಲ್​ನಲ್ಲಿ ವಾಸಿಸುತ್ತಿರುವ ಎಲ್ಲರ ಕತೆ.. ದಶಕಗಳ ನಂತರ ಅಫ್ಘಾನಿಸ್ತಾನ ಶಾಂತಿಯ ಕಡೆಗೆ ಹೆಜ್ಜೆ ಇಡುತ್ತಿದ್ದರೂ ಕಾಬೂಲ್ ನಿವಾಸಿಗಳ ಸ್ಥಿತಿ ಶೋಚನೀಯವಾಗಿದೆ.

ನಗರದ ಮೇಲೆ ಆಗಿಂದಾಗ ಬಾಂಬ್ ದಾಳಿಗಳು ನಡೆಯುತ್ತಿವೆ. ಆ ದಾಳಿಗಳಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಕೆಲವು ದಾಳಿಗಳಲ್ಲಿ ಕಡಿಮೆ ಪ್ರಮಾಣದ ಹಾನಿಯಾದರೆ, ಮತ್ತೆ ಕೆಲವು ದಾಳಿಗಳು ಹೆಚ್ಚು ಜನರನ್ನು ಬಲಿ ಪಡೆಯುತ್ತಿವೆ. ಒಂದೇ ದಿನ ನಾಲ್ಕೈದು ಸ್ಥಳಗಳಲ್ಲಿ ಬಾಂಬ್ ದಾಳಿಯೂ ಸರ್ವೇಸಾಮಾನ್ಯ ಎಂಬ ಪರಿಸ್ಥಿತಿಯೂ ಅಲ್ಲಿದೆ.

ಇದನ್ನೂ ಓದಿ: ಫೇಕ್ ಫೇಸ್‌ಬುಕ್ ಐಡಿ; 14 ಲಕ್ಷ ರೂ. ದೋಚಿದ 'ಸುಶ್ಮಾ' !

ಅಫ್ಘಾನಿಸ್ತಾನದ ಮೇಲೆ ನಡೆಯುತ್ತಿರುವ ದಾಳಿಗಳು ಇಸ್ಲಾಮಿಕ್ ಸ್ಟೇಟ್ಸ್​ ಗ್ರೂಪ್​ನಿಂದ ನಡೆಯುತ್ತಿವೆ ಎಂದು ಕೆಲವರು ವಾದಿಸಿದರೆ, ಇನ್ನೂ ಕೆಲವರು ತಾಲಿಬಾನ್ ಸಂಘಟನೆಯಿಂದ ದಾಳಿ ನಡೆಯುತ್ತಿದೆ ಎಂದು ಹೇಳುತ್ತಿದ್ದು, ಯಾವೊಂದು ಸಂಘಟನೆಯೂ ದಾಳಿಯ ಹೊಣೆ ಹೊತ್ತುಕೊಳ್ಳುತ್ತಿಲ್ಲ.

ಇವೆಲ್ಲಾ ಬಾಹ್ಯ ದಾಳಿಗಳಾದರೆ, ಆಂತರಿಕ ಅಪರಾಧಗಳೂ ಕೂಡ ಹೇರಳವಾಗಿ ನಡೆಯುತ್ತಿವೆ. ದೇಶದ ಹಲವೆಡೆ ಸೂಪರ್​ ಮಾರ್ಕೆಟ್​ನ ಬ್ರಾಂಚ್​ಗಳಲ್ಲಿ ಸಂಘಟಿತ ದರೋಡೆಗಳೂ ನಡೆಯುತ್ತಿವೆ. ಒಂದೇ ದಿನದಲ್ಲಿ ಹಲವೆಡೆ ದರೋಡೆಗಳು ನಡೆಯತ್ತಿವೆ.

ಅಪಹರಣ ಪ್ರಕರಣಗಳು ನಡೆಯುತ್ತಿದ್ದು, ಮಕ್ಕಳನ್ನು ಅಥವಾ ಯುವಕರನ್ನು ರಸ್ತೆಗಳಲ್ಲಿ ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ. ಅಪಹರಣಗೊಂಡವರ ಕುಟುಂಬಗಳಿಂದ ಸುಮಾರು 50 ಡಾಲರ್​ನಿಂದ 5000 ಡಾಲರ್​ಗಳಷ್ಟು ಹಣ ಪಡೆದುಕೊಳ್ಳಲಾಗುತ್ತದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮ್ರಾನ್, ನಾನು ಕೆಲಸಕ್ಕಾಗಿ ಕಾರನ್ನು ಹತ್ತಬೇಕಾದರೆ, ಆಫೀಸಿಗೆ ತೆರಳಬೇಕಾದರೆ, ಕಡೇ ಪಕ್ಷ ಮಸೀದಿಯಲ್ಲಿರಬೇಕಾದರೂ ಭಯವಾಗುತ್ತದೆ. ಜೀವನ ನರಕವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.